

ವೈಜ್ಞಾನಿಕ ಹಿನ್ನೆಲೆಯ ಸೂರ್ಯಪಾನ: ಸೂರ್ಯನಿಂದ ಸಮಸ್ತ ಕಿರಣ ತರಂಗಗಳು ಹೊರಡುತ್ತವೆ ಎಂಬುದು ನಮಗೆ ತಿಳಿದಿದೆ. ಇದನ್ನು ವಿದ್ಯುದಯಸ್ಕಾಂತೀಯ ತರಂಗಗಳು ಎಂದು ನಾವು ಕರೆಯುತ್ತೇವೆ. ವಿದ್ಯುತ್ ತರಂಗಗಳಿಂದ ಹಿಡಿದು ವಿಶ್ವಕಿರಣಗಳವರೆಗೆ ವಿಶಾಲವಾದ ತರಂಗ ಜಾಲವನ್ನು ಸೂರ್ಯ ಬಿಡುಗಡೆ ಮಾಡುತ್ತಾನೆ. ಇಷ್ಟು ವಿಶಾಲವಾದ ತರಂಗಮಾನದಲ್ಲಿ ಕೋಟಿ ಕಿಲೋಮೀಟರ್ ತರಂಗಮಾನದಿಂದ ಹಿಡಿದು ನ್ಯಾನೋ ಮೀಟರ್ ತರಂಗಮಾನದೊಂದಿಗೆ ನಾವು ಕಣ್ಣಿಂದ ನೋಡುವುದು ಬೆಳಕಿನ ಚಿಕ್ಕ ತರಂಗಮಾನ - 4000 ಕೆಂಪು ಆಂಗಸ್ಟ್ರಾಮ್ಂದ ಹಿಡಿದು 8000 ನೇರಳೆ ಆಂಗ್ಸ್ಟ್ರಾಮ್ರೆಗೆ ಹರಡಿರುವ ಅತ್ಯಂತ ಚಿಕ್ಕ ಬೆಳಕಿನ ತರಂಗಮಾನವನ್ನು ಮಾತ್ರ.
ಇದರರ್ಥ ನಮ್ಮ ಕಣ್ಣಿಗೆ ತನ್ನದೇ ಆದ ಮಿತಿಯಿದೆ. ಇದೇ ರೀತಿ ಕಿವಿ, ಚರ್ಮ, ಮೂಗು ಇತ್ಯಾದಿ ಬೇರೆ ಬೇರೆ ಇಂದ್ರಿಯಗಳಿಗೂ ಮಿತಿಗಳಿವೆ. 16ರಿಂದ 16 ಸಾವಿರ ಶಬ್ದತರಂಗಗಳನ್ನು ಕಿವಿ ಕೇಳಬಲ್ಲದು. ಅದರ ಆಚೆ-ಈಚೆಯ ಶಬ್ದಗಳನ್ನು ಕಿವಿ ಕೇಳಲಾರದು. ಕೆಲವು ವಾಸನೆಗಳನ್ನು ಮಾತ್ರ ಮೂಗು ಗ್ರಹಿಸಬಲ್ಲದು, ಎಲ್ಲವನ್ನೂ ಅಲ್ಲ. ಕೆಲವು ರುಚಿಗಳನ್ನು ನಾಲಿಗೆ ಗ್ರಹಿಸಬಲ್ಲದು, ಎಲ್ಲವನಲ್ಲ. ಹಾಗೆಂದು ಪ್ರಕೃತಿಯಲ್ಲಿ ಇದೇ ಇತಿಮಿತಿಗಳು ಉಳಿದುಕೊಂಡಿವೆಯೇ ಎಂದರೆ, ಹಾಗೇನೂ ಅಲ್ಲ. ಮನುಷ್ಯನಿಗೆ ಹತ್ತಿರವಾದ ಪ್ರಾಣಿ ನಾಯಿ ಶಬ್ದಾತೀತ ತರಂಗಗಳನ್ನು (ಅಲ್ಟ್ರಾಸೊನಿಕ್) ಕೇಳಬಲ್ಲದು. ನಮಗೆ ಗೊತ್ತಾಗದ ಅನೇಕ ವಾಸನೆಗಳನ್ನು ಅದು ಗ್ರಹಿಸಬಲ್ಲದು. ಅಷ್ಟೇಕೆ, ತನ್ನ ಸಂಪರ್ಕಕ್ಕೆ ಬರುವ ವ್ಯಕ್ತಿ ಹೆದರಿದ್ದಾನೆಯೇ, ಕೋಪಗೊಂಡಿದ್ದಾನೆಯೆ, ಗಂಭೀರವಾಗಿದ್ದಾನೆಯೇ ಎಂಬಂತಹ ಭಾವನೆಗಳನ್ನು ಅದು ಗ್ರಹಿಸಬಲ್ಲದು.
ಪ್ರಾಣಿಸಂಕುಲದಲ್ಲಿ ಸಮಾನವಾಗಿ ಕಾಣುವ ಈ ತೆರನಾಗಿ ಕಾಣಿಸುವ ಇಂದ್ರಿಯಶಕ್ತಿ ಮನುಷ್ಯನಲ್ಲೂ ಅವನು ಪ್ರಾಣಿಯ ಹಂತದಲ್ಲಿದ್ದಾಗ ಇದ್ದಿರಬೇಕು. ಅವನು ಬುದ್ಧಿವಂತ ಪ್ರಾಣಿಯಾಗಿ ವಿಕಾಸಗೊಂಡಾಗ, ಈ ಶಕ್ತಿ ಕುಂಠಿತವಾಗಿ ಅವನು ಇಂದ್ರಿಯಗಳ ಇತಿಮಿತಿಗೆ ಸಿಕ್ಕಿಬಿದ್ದಿರಬೇಕು. ಈ ಮಾತಿಗೆ ಬೆಂಬಲವಾಗಿ ಹಿಂದೊಮ್ಮೆ ಮಾನವನ ಇಂದ್ರಿಯಗಳ ಇತಿಮಿತಿಗೆ ಒಳಗಾಗಿರಲಿಲ್ಲ ಎಂಬುದನ್ನು ವಿಜ್ಞಾನಿ ವಾರ್ವಿಕ್ ಅವರ ಪ್ರಯೋಗಗಳನ್ನು ಗಮನಿಸಬಹುದು.
ಮನುಷ್ಯನ ದೇಹ, ಮಿದುಳು ತಾನು ಪ್ರಾಣಿಯಾಗಿದ್ದಾಗ ಪಡೆದಿದ್ದ ಜ್ಞಾನವನ್ನು, ಶಕ್ತಿಯನ್ನು ಪಳೆಯುಳಿಕೆಯ ರೂಪದಲ್ಲಿ ಉಳಿಸಿಕೊಂಡಿದೆ ಎಂಬುದೇ ಸತ್ಯ. ಅದನ್ನು ಮತ್ತೆ ಪ್ರಚೋದಿಸಿದರೆ ಆ ಶಕ್ತಿ ಮತ್ತೆ ನಮಗೆ ಹಿಂದಿರುಗಿ ಬರುವ ಸಾಧ್ಯತೆಯಿದೆ. ಹಾಗೆಯೇ, ಸೂರ್ಯಪಾನದ ವಿಷಯದಲ್ಲೂ ಈ ಮಾತು ಸತ್ಯ. ಆಹಾರವಿಲ್ಲದೆಯೇ ಆರಾಮವಾಗಿ ಬದುಕಲು ಸಾಧ್ಯ ಎಂದು.
ಅಧೋಮುಖ ಶ್ವಾನಾಸನ: ಒಳಮುಖ ಮಾಡಿಕೊಂಡ ಶ್ವಾನದ ಭಂಗಿ. ಸೂರ್ಯನಮಸ್ಕಾರದ ಊರ್ಧ್ವಮುಖ ಶ್ವಾನಾಸನ ನಂತರ ಉಸಿರನ್ನು ಹೊರಗೆ ಬಿಡುತ್ತ ಪೃಷ್ಠ ಭಾಗವನ್ನು ಮೇಲೆತ್ತುತ್ತ ತಲೆಯನ್ನು ಎರಡು ಕೈಗಳ ಮಧ್ಯಭಾಗದಲ್ಲಿ ಒಳಮುಖವಾಗುವಂತೆ ಮಾಡಿ ನಾಭಿಯ ಕಡೆಗೆ ದೃಷ್ಟಿಯಿಡುತ್ತೇವೆ. ಈ ರೀತಿ ಬಾಗಿಸಿದ ಭಂಗಿ ಕಮಾನನ್ನು ಹೋಲುತ್ತದೆ.
ಲಾಭಗಳು: ಭುಜಗಳ ಪೆಡಸುತನ ನಿವಾರಣೆ, ಮಿದುಳಿಗೆ ಶುದ್ಧ ರಕ್ತದ ಪ್ರಚಲನೆಯಿಂದ ಶಾಂತತೆ, ಸ್ಮರಣ ಶಕ್ತಿ, ಸಾಮರ್ಥ್ಯದಲ್ಲಿ ಹೆಚ್ಚಳವುಂಟಾಗುತ್ತದೆ.