ಬೆಂಗಳೂರು: ( mobile)ಗಂಟೆಗಟ್ಟಲೆ ಫೋನ್ ಸ್ಕ್ರೀನ್ ನೋಡುವುದು ಇಂದಿನ ಕಾಲದಲ್ಲಿ ಅನಿವಾರ್ಯ ಎನಿಸಿದರೂ, ಇದು ನಮ್ಮ ದೇಹದ ಮೇಲೆ ಬೀರುವ ದುಷ್ಪರಿಣಾಮಗಳು ಅತೀ ಭಯಾನಕವಾಗಿವೆ. ನೀವು ಮೊಬೈಲ್‌ಗೆ ಅಂಟಿಕೊಂಡಿದ್ದರೆ ಈ ಕೆಳಗಿನ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಕಣ್ಣಿನ ದೃಷ್ಟಿ ದೋಷ:
ಫೋನ್‌ನಿಂದ ಹೊರಬರುವ ನೀಲಿ ಬೆಳಕು (Blue Light) ಕಣ್ಣಿನ ರೆಟಿನಾವನ್ನು ಹಾನಿಗೊಳಿಸುತ್ತದೆ. ಕಣ್ಣು ಉರಿಯುವುದು, ಕಣ್ಣಿನಲ್ಲಿ ನೀರು ಬರುವುದು, ಮಸುಕಾದ ದೃಷ್ಟಿ ಮತ್ತು
ತಲೆನೋವು:
ಕುತ್ತಿಗೆ ಮತ್ತು ಬೆನ್ನು ನೋವು : ಫೋನ್ ಬಳಸುವಾಗ ನಾವು ತಲೆಯನ್ನು ಮುಂದಕ್ಕೆ ಬಗ್ಗಿಸುತ್ತೇವೆ. ಇದರಿಂದ ಕುತ್ತಿಗೆಯ ಮೂಳೆಗಳ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಕುತ್ತಿಗೆ ಬಿಗಿಯುವುದು, ಭುಜದ ನೋವು ಮತ್ತು ದೀರ್ಘಕಾಲದ ಬೆನ್ನುಮೂಳೆಯ ಸಮಸ್ಯೆಗಳು.
ನಿದ್ರಾಹೀನತೆ:
ಮಲಗುವ ಮುನ್ನ ಫೋನ್ ನೋಡುವುದರಿಂದ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪತ್ತಿ ಕಡಿಮೆಯಾಗುತ್ತದೆ. ಇದು ನಿದ್ರೆಯ ಚಕ್ರವನ್ನು ಏರುಪೇರು ಮಾಡುತ್ತದೆ. ಸರಿಯಾಗಿ ನಿದ್ರೆ ಬಾರದಿರುವುದು, ಹಗಲಿನಲ್ಲಿ ಆಲಸ್ಯ ಮತ್ತು ಮಾನಸಿಕ ಕಿರಿಕಿರಿ.
ಮಾನಸಿಕ ಆರೋಗ್ಯದ ಮೇಲೆ ಪ್ರಭಾವ:
ಅತಿಯಾದ ಸೋಶಿಯಲ್ ಮೀಡಿಯಾ ಬಳಕೆ ಮತ್ತು ಫೋನ್ ಮೇಲಿನ ಅವಲಂಬನೆ ಮೆದುಳಿನ ಮೇಲೆ ಒತ್ತಡ ಹೇರುತ್ತದೆ.ಆತಂಕ , ಖಿನ್ನತೆ , ಮತ್ತು ಏಕಾಗ್ರತೆಯ ಕೊರತೆ.
ತೂಕ ಹೆಚ್ಚಳ ಮತ್ತು ಇತರ ಸಮಸ್ಯೆಗಳು :
ದೈಹಿಕ ಚಟುವಟಿಕೆ ಇಲ್ಲದೆ ಒಂದೇ ಕಡೆ ಕುಳಿತು ಫೋನ್ ನೋಡುವುದರಿಂದ ಬೊಜ್ಜು ಬೆಳೆಯುತ್ತದೆ. ಇದು ಮುಂದೆ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ದಾರಿಯಾಗಬಹುದು.