

ಬೆಂಗಳೂರು: ಚಹಾ ಮತ್ತು ಕಾಫಿ ಕುಡಿಯುವುದು ಎಂದರೆ ಒಂದೊಳ್ಳೆಯ ರಿಫ್ರೆಶ್ಮೆಂಟ್ ಇದ್ದಂತೆ ಅಂತ ಹೇಳಿದರೆ ಸುಳ್ಳಾಗುವುದಿಲ್ಲ. ಕಚೇರಿ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವ ಜನರು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಜನರು ಖಂಡಿತವಾಗಿಯೂ ತಮ್ಮ ಆಹಾರದೊಂದಿಗೆ ಚಹಾ ಅಥವಾ ಕಾಫಿಯನ್ನು ಬಯಸುತ್ತಾರೆ.
ಸಾಮಾನ್ಯವಾಗಿ ಜನರು ಕಾಫಿ ಅಥವಾ ಚಹಾದೊಂದಿಗೆ ಏನನ್ನಾದರೂ ತಿನ್ನಲು ಇಷ್ಟಪಡುತ್ತಾರೆ. ಕೆಲವರು ತಿಂಡಿ ತಿನ್ನುತ್ತಾರೆ, ಈ ಎರಡು ಪಾನೀಯಗಳಿಲ್ಲದೆ ಬೆಳಗಿನ ಉಪಾಹಾರವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆದರೆ ಆಹಾರದೊಂದಿಗೆ ಟೀ ಅಥವಾ ಕಾಫಿ ಕುಡಿಯುವುದು ಆರೋಗ್ಯದ ಜೊತೆ ಆಟ ಆಡಿದಂತೆ ಎನ್ನುತ್ತಾರೆ ಪೌಷ್ಟಿಕತಜ್ಞರು.
ರಾತ್ರಿ ಮಲಗುವ ಮುಂಚೆ ಯಾವುದೇ ಕಾರಣಕ್ಕೂ ಕಾಫಿ ಕುಡಿಯಬೇಡಿ. ಮೊದಲೇ ಹೇಳಿದಂತೆ ಕಾಫಿ ಅಥವಾ ಚಹಾದಲ್ಲಿ ಕಂಡು ಬರುವ ಕೆಫೀನ್ ಅಂಶ ಮೂತ್ರ ವರ್ಧಕ ಗುಣ ಲಕ್ಷಣಗಳನ್ನು ಒಳಗೊಂಡಿದ್ದು, ಹಲವು ಬಾರಿ ಮೂತ್ರ ವಿಸರ್ಜನೆ ಮಾಡುವಂತೆ ರಾತ್ರಿಯ ಸಮಯದಲ್ಲಿ ನಿಮಗೆ ನಿದ್ರೆಗೆ ತೊಂದರೆ ಮಾಡಬಹುದು.