

ದೇಹದಲ್ಲಿರುವ ಯೂರಿಕ್ ಆಮ್ಲದ ಬಗ್ಗೆ ನಿಮಗೆಷ್ಟು ಗೊತ್ತು? ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತವು ಯೂರಿಕ್ ಆಮ್ಲದ ಹೆಚ್ಚಳದಿಂದ ಉಂಟಾಗುತ್ತದೆ. ಇದು ನಿಮ್ಮನ್ನು ತುಂಬಾ ಭಾದಿಸುತ್ತದೆ. ಯೂರಿಕ್ ಆಮ್ಲವು ರಕ್ತದಲ್ಲಿನ ತ್ಯಾಜ್ಯ ಉತ್ಪನ್ನವಾಗಿದೆ. ಪ್ಯೂರಿನ್ ಎಂಬ ಸಂಯುಕ್ತಗಳು ಚಯಾಪಚಯಗೊಂಡಾಗ ಯೂರಿಕ್ ಆಮ್ಲವು ಉತ್ಪತ್ತಿಯಾಗುತ್ತದೆ. ಇದರಿಂದ ಬಳಲುತ್ತಿರುವವರಿಗೆ ಅದನ್ನು ನಿಯಂತ್ರಿಸುವುದು ಹೇಗೆ ಎಂಬುದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅದನ್ನು ನಿಯಂತ್ರಿಸಲು ಇಲ್ಲಿ ಕೆಲವು ಸಿಂಪಲ್ ಟಿಪ್ಸ್ ನೀಡಲಾಗಿದೆ.