

ಬೆಂಗಳೂರು: ಮನೆಯಲ್ಲಿ ಇರುವೆಗಳಿಂದ ಅನೇಕ ಜನರು ಕಿರಿಕಿರಿಗೊಳ್ಳುತ್ತಾರೆ. ಇರುವೆಗಳ ಕಾಟದಿಂದ ಪಾರಾಗಲು ಜನರು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಗೃಹೋಪಯೋಗಿ ವಸ್ತುಗಳಿಂದ ನೀವು ಸುಲಭವಾಗಿ ಇರುವೆಗಳನ್ನು ತೊಡೆದು ಹಾಕಬಹುದು ಎಂದು ನಿಮಗೆ ತಿಳಿದಿದೆಯೇ? ಬನ್ನಿ ನಾವು ಈ ಬಗ್ಗೆ ನಿಮಗೆ ತಿಳಿಸಿ ಕೊಡುತ್ತೇವೆ.
1) ಇರುವೆಗಳು ಸೇರುವ ಸ್ಥಳಗಳಲ್ಲಿ ನೀವು ಕರಿಮೆಣಸಿನ ಪುಡಿ ಅಥವಾ ಕಾಳುಮೆಣಸಿನ ಪುಡಿಯನ್ನು ನೀರಿನಲ್ಲಿ ಸಿಂಪಡಿಸಬೇಕು. ಇರುವೆಗಳು ಅಲ್ಲಿಂದ ಓಡಿಹೋಗುತ್ತವೆ.
2) ಎರಡು ಲೋಟ ನೀರಿಗೆ ಬೇವಿನ ಎಣ್ಣೆ ಹಾಕಿ ಬಾಟಲಿಯಲ್ಲಿ ಸ್ಪ್ರೇ ಮಾಡಿದರೆ ಇರುವೆಗಳು ನಿಮ್ಮ ಬರುವುದಿಲ್ಲ.
3) ಇರುವೆಗಳಿಗೆ ಹುಳಿ ಇಷ್ಟವಿಲ್ಲ. ನಿಂಬೆಯ ವಾಸನೆ ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಮನೆಯನ್ನು ಸ್ವಚ್ಛಗೊಳಿಸುವಾಗ ನೀರಿಗೆ ಕೆಲವು ಹನಿ ನಿಂಬೆ ರಸವನ್ನು ಸೇರಿಸುವುದರಿಂದ ಇರುವೆಗಳ ಸಮಸ್ಯೆಯೂ ಕಡಿಮೆಯಾಗುತ್ತದೆ.
4) ಇರುವೆಗಳಿಗೆ ಪುದೀನಾ ವಾಸನೆ ಇಷ್ಟವಿಲ್ಲ. ನಿಮ್ಮ ಮನೆಯ ಬಾಲ್ಕನಿಯಲ್ಲಿ ಮತ್ತು ಮನೆಯ ಸುತ್ತಮುತ್ತ ಪುದೀನಾವನ್ನು ಬೆಳೆಸುವುದರಿಂದ ಇರುವೆ, ಸೊಳ್ಳೆಗಳು ಮತ್ತು ಕೀಟಗಳು ಅಲ್ಲಿಗೆ ಬರುವುದಿಲ್ಲ.
5) ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ ಹೆಚ್ಚಿನ ಪ್ರಮಾಣದ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಉಪ್ಪಿನ ದ್ರಾವಣ ತಯಾರಿಸಿಕೊಂಡು ಸ್ಪ್ರೇ ಬಾಟಲ್‌ಗೆ ತುಂಬಿ ಅದನ್ನು ನಿಮ್ಮ ಮನೆಯಲ್ಲಿರುವ ಇರುವೆ ಗೂಡುಗಳ ಬಳಿ ಸ್ಪ್ರೇ ಮಾಡಬಹುದು.
6) ಹತ್ತಿಯ ಉಂಡೆಗಳನ್ನು ದಾಲ್ಚಿನ್ನಿ ಎಣ್ಣೆಯಲ್ಲಿ ಅದ್ದಿ ಇರುವೆಗಳು ಓಡಾಡುವ ಸ್ಥಳಗಳಲ್ಲಿ ಇಟ್ಟರೆ ಅವು ಬರದಂತೆ ತಡೆಯುತ್ತವೆ.