

ನಾಳೆಯೇ ಸಂಕ್ರಾಂತಿ ಹಬ್ಬ. ಬಹುತೇಕ ಮನೆಗಳಲ್ಲಿ ಇವತ್ತಿನಿಂದಲೇ ಸಿಹಿ ತಿನಿಸುಗಳ ತಯಾರಿ ಭರ್ಜರಿಯಿಂದ ಸಾಗಿದೆ. ಸಾಮಾನ್ಯವಾಗಿ ಸಿಹಿ ಮತ್ತು ಖಾರದ ಪೊಂಗಲ್ ಎಲ್ಲರಿಗೂ ತಿಳಿದದ್ದೇ. ಅವುಗಳನ್ನು ಹೊರತುಪಡಿಸಿ ಸಂಕ್ರಾಂತಿ ದಿನದಂದು ವಿವಿಧೆಡೆ ಮಾಡುವ ತಿನಿಸುಗಳನ್ನು ಹೇಗೆ ಮಾಡುವುದು ಎಂದು ನೋಡೋಣ
ಗೋಧಿ ಕಾಳಿನ ಮಾದ್ಲಿ
ಬೇಕಾಗುವ ಸಾಮಗ್ರಿಗಳು: ್ಣೋಧಿ-1 ಬಟ್ಟಲು ್ಣೆಲ್ಲದ ಪುಡಿ-ಕಾಲು ಬಟ್ಟಲು ್ಣುಪ್ಪ-ಅರ್ಧ ಬಟ್ಟಲು.
ಮಾಡುವುದು ಹೀಗೆ: ಗೋಧಿಯನ್ನು ಸಣ್ಣ ಉರಿಯಲ್ಲಿ ಹುರಿದು ಮಿಕ್ಸಿ ಜಾರ್ನಲ್ಲಿ ಪುಡಿ ಮಾಡಿ. ಪುಡಿ ಮಾಡಿದ ಹಿಟ್ಟನ್ನು ತುಪ್ಪ ಹಾಕಿ ಹುರಿಯಿರಿ. ಘಮಘಮ ಎಂದು ಪರಿಮಳ ಬಂದ ನಂತರ ಒಲೆಯಿಂದ ಕೆಳಗಿರಿಸಿ. ಹುರಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೆಲ್ಲದ ಪುಡಿ ಹಾಕಿ ಚೆನ್ನಾಗಿ ಕಲಸಿದರೆ ಗೋಧಿ ಮಾದ್ಲಿ ರೆಡಿ.