ಎಷ್ಟು ಪ್ರಮಾಣದಲ್ಲಿ ಉಪ್ಪು ಸೇವಿಸಿದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್? ಇಲ್ಲಿದೆ ಉಪಯುಕ್ತ ಮಾಹಿತಿ… Salt ​

Salt
Published on

ಊಟಕ್ಕೆ ಉಪ್ಪು ( Salt ) ತುಂಬಾನೇ ಅವಶ್ಯಕವಾಗಿದ್ದರೂ ಅದು ಆರೋಗ್ಯ ( Health ) ಕ್ಕೆ ಹಾನಿಕಾರಕ ಎಂಬುದನ್ನು ಮರೆಯುವಂತಿಲ್ಲ. ಉಪ್ಪನ್ನು ಯಾವುದೇ ಕಾರಣಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಲೇಬೇಡಿ. ಉಪ್ಪು ( Salt ) ಇಲ್ಲದೆ ಸಾಂಬಾರ್​ ಆಗಲಿ ಅಥವಾ ಇತರೆ ಆಹಾರ ಪದಾರ್ಥಗಳನ್ನಾಗಲಿ ತಿನ್ನಲು ಸಾಧ್ಯವಿಲ್ಲ. ಆಹಾರವನ್ನು ರುಚಿಕರವಾಗಿಸುವುದೇ ಉಪ್ಪು. ನಮ್ಮ ದೇಹಕ್ಕೂ ಉಪ್ಪು ಬೇಕು. ಆದರೆ, ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಉಪ್ಪು ಸೇವನೆಯು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ನಾವೀಗ ಯಾವ ವಯಸ್ಸಿನವರು ಎಷ್ಟು ಉಪ್ಪನ್ನು ಸೇವಿಸಬಹುದು ಎಂದು ತಿಳಿಯೋಣ.

Salt 1

ಟೇಬಲ್ ಉಪ್ಪು, ಕಲ್ಲು ಉಪ್ಪು ಹಾಗೂ ಕಪ್ಪು ಉಪ್ಪು ಹೀಗೆ ಹಲವು ಬಗೆಯ ಉಪ್ಪುಗಳಿವೆ. ಒಂದು ದಿನಕ್ಕೆ ವಯಸ್ಕರು 6 ಗ್ರಾಂ ಉಪ್ಪನ್ನು ಮತ್ತು ಮಕ್ಕಳು ಐದು ಗ್ರಾಂ ಉಪ್ಪನ್ನು ಸೇವಿಸುವಂತೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಅದಕ್ಕಿಂತ ಹೆಚ್ಚಿನ ಸೇವನೆಯು ಕರುಳಿನ ಆರೋಗ್ಯಕ್ಕೆ ಅಪಾಯಕಾರಿ. ತಿಂದ ಆಹಾರವು ಜೀರ್ಣಕ್ರಿಯೆ ಮೂಲಕ ಕರುಳನ್ನು ತಲುಪುವುದರಿಂದ ಬಿಪಿಯಿಂದ ಬಳಲುತ್ತಿರುವವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಕರುಳಿನ ಮೂಲಕವೇ ಪೋಷಕಾಂಶಗಳು ರಕ್ತದಲ್ಲಿ ಹೀರಲ್ಪಡುತ್ತವೆ. ಹೀಗಾಗಿ ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ರಕ್ತದಲ್ಲಿ ಸೋಡಿಯಂ ಕ್ಲೋರೈಡ್‌ ಪ್ರಮಾಣ ಹೆಚ್ಚಾಗಿ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಹಾಗಾಗಿ ಉಪ್ಪು ಸೇವಿಸುವಾಗ ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಲ್ಲದಿದ್ದರೆ ಹಲವು ಸಮಸ್ಯೆಗಳು ಎದುರಾಗಬಹುದು.

salt

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net