ಮನೆರುಚಿ: ಸಬ್ಬಕ್ಕಿ ಕಿಚಡಿ ಮಾಡುವ ವಿಧಾನ

sabbakki
Published on
ಶಿವರಾತ್ರಿಯ ಹಬ್ಬ ಹೊಸ್ತಿಲಲ್ಲಿ ನಿಂತಿದೆ. ಅಂದು ಮಾಡುವ ಉಪವಾಸಕ್ಕೆ ಪೂರಕವಾದ, ಆರೋಗ್ಯಕರ ಹಾಗೂ ಸುಲಭದಲ್ಲಿ ತಯಾರಿಸಬಲ್ಲ ಸಬ್ಬಕ್ಕಿ ಕಿಚಡಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿ: ಸಬ್ಬಕ್ಕಿ3 ಕಪ್ ಕತ್ತರಿಸಿದ ಆಲೂಗಡ್ಡೆ-2 ಕಪ್ ಕತ್ತರಿಸಿದ ಹಸಿಮೆಣಸಿನಕಾಯಿ-7-8 ಕರಿಬೇವಿನ ಎಲೆಗಳು-7-8 ಕಡಲೆಕಾಯಿ ಬೀಜ-ಅರ್ಧ ಕಪ್ ಎಣ್ಣೆ-14 ಕಪ್ ಸಾಸಿವೆ-1 ಚಮಚ ಅರಸಿನ-ಅರ್ಧ ಚಮಚ ಜೀರಿಗೆ-3 ಚಮಚ ಇಂಗು-1 4 ಚಮಚ ಉಪ್ಪು-ರುಚಿಗೆ ತಕ್ಕಷ್ಟು ಸಕ್ಕರೆ-1 ಚಮಚ ಗೋಡಂಬಿ ತುಂಡುಗಳು-8-10 ತುಪ್ಪ-3 ಚಮಚ ತೆಂಗಿನಕಾಯಿ ತುರಿ-ಅರ್ಧ ಕಪ್ ಕತ್ತರಿಸಿದ ಕೊತ್ತಂಬರಿ ಸೊಪ್ಪು-1 4 ಕಪ್

ಮಾಡುವ ವಿಧಾನ: ಸಬ್ಬಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿ ಬಸಿದಿಡಿ. ಆಲೂಗಡ್ಡೆ ಹೋಳುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಿಡಿ. ಕಡಲೆಕಾಯಿ ಬೀಜಗಳನ್ನು ಹುರಿದು, ತರಿತರಿಯಾಗಿ ಪುಡಿ ಮಾಡಿಡಿ. ಗೋಡಂಬಿ ತುಂಡುಗಳನ್ನು ತುಪ್ಪದಲ್ಲಿ ಹುರಿದಿರಿಸಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ-ಅರಸಿನ-ಇಂಗು-ಜೀರಿಗೆ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳು, ಬೇಯಿಸಿದ ಆಲೂಗಡ್ಡೆ ಹೋಳುಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ, ಉಪ್ಪು, ಬಸಿದಿರಿಸಿದ ಸಬ್ಬಕ್ಕಿ, ಸಕ್ಕರೆ, ಕಡಲೆಕಾಯಿ ಬೀಜದ ಪುಡಿ, ತುಪ್ಪ, ಹುರಿದ ಗೋಡಂಬಿ ತುಂಡುಗಳನ್ನು ಹಾಕಿ ಕಲಕಿ. ಒಲೆಯಿಂದ ಕೆಳಗಿರಿಸಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net