ಮನೆರುಚಿ: ಸಬ್ಬಕ್ಕಿ ಚೂಡಾ ಮಾಡುವ ವಿಧಾನ

sabbaki chuda feb 17 2020
Published on

ಶಿವರಾತ್ರಿಯ ಹಬ್ಬ ಹೊಸ್ತಿಲಲ್ಲಿ ನಿಂತಿದೆ. ಅಂದು ಮಾಡುವ ಉಪವಾಸಕ್ಕೆ ಪೂರಕವಾದ, ಆರೋಗ್ಯಕರ ಹಾಗೂ ಸುಲಭದಲ್ಲಿ ತಯಾರಿಸಬಲ್ಲ ಸಬ್ಬಕ್ಕಿ ಚೂಡಾ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿ: ಸಬ್ಬಕ್ಕಿ-3 ಕಪ್ ಕಡಲೆಕಾಯಿ ಬೀಜ-1 4 ಕಪ್ ಅಚ್ಚ ಖಾರದ ಪುಡಿ-1 ಚಮಚ ಕರಿಬೇವಿನ ಎಲೆಗಳು-8-10 ಸಕ್ಕರೆ-1 ಚಮಚ ಏಲಕ್ಕಿ-1 ಚಮಚ ಉಪ್ಪು-ರುಚಿಗೆ ತಕ್ಕಷ್ಟು ಎಣ್ಣೆ-ಕರಿಯಲು ಗೋಡಂಬಿ-8-10 ದ್ರಾಕ್ಷಿ-7-8 ಒಗ್ಗರಣೆಗೆ: ತುಪ್ಪ-4 ಚಮಚ ಸಾಸಿವೆ-1 ಚಮಚ ಇಂಗು-ಅರ್ಧ ಕಪ್

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಾಸಿವೆ-ಇಂಗು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ, ಕರಿಬೇವಿನ ಎಲೆಗಳು, ಕಡಲೆಕಾಯಿ ಬೀಜ, ಅಚ್ಚ ಖಾರದ ಪುಡಿ, ಉಪ್ಪು, ಸಕ್ಕರೆ, ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿಗಳನ್ನು ಹಾಕಿ ಬಾಡಿಸಿ, ಒಲೆಯಿಂದ ಕೆಳಗಿರಿಸಿ. ಸಬ್ಬಕ್ಕಿಯನ್ನು ಎಣ್ಣೆಯಲ್ಲಿ ಕರಿದು, ಒಗ್ಗರಣೆ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net