ಮುಟ್ಟಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಆಯುರ್ವೇದದಲ್ಲೇನು ಪರಿಹಾರ?

aptha
Published on

ಪ್ರಶ್ನೆ: ನನ್ನ ಹೆಸರು ಸಂಗೀತಾ. ವಯಸ್ಸು 40. ಮುಟ್ಟಿನ ಸಮಸ್ಯೆ ಇದೆ. ಮೈಯೆಲ್ಲಾ ಬಿಸಿಬಿಸಿ ಆಗುತ್ತದೆ. ಜೀವನವೇ ಬೇಡ ಎನ್ನಿಸುತ್ತಿದೆ. ಸೊಂಟನೋವು, ಮಂಡಿ ನೋವು ಹೆಚ್ಚಿಗೆ ಪರಿಹಾರ ತಿಳಿಸಿ.

ಉತ್ತರ: ಸಾಮಾನ್ಯವಾಗಿ ಋತುಬಂಧದ ಸಮಯದಲ್ಲಿ ಮತ್ತು ನಂತರದ ವಷರ್ಗಳಲ್ಲಿ ಮೈ ಬಿಸಿಯಾಗುವುದು ಸಹಜ. ಆದರೆ ನಿಮಗಿನ್ನೂ 40ರ ಪ್ರಾಯ. ಪ್ರತಿದಿನ ಸೊಗದೆಬೇರಿನ ಶರಬತ್ತನ್ನು ಬೆಳಗ್ಗೆ ಖಾಲಿ ಹೊಟ್ಟೆ 4 ಚಮಚದಷ್ಟನ್ನು ನೀರು ಬೆರೆಸಿ ಕುಡಿಯಿರಿ.

ಸೊಂಟ ನೋವು, ಮಂಡಿನೋವು, ಸಂಧಿವಾತದ ಸಮಸ್ಯೆಯಿಂದ, ಕ್ಯಾಲ್ಸಿಯಂ ಕೊರತೆಯಿಂದ, ರಕ್ತಹೀನತೆಯಿಂದ, ಬೊಜ್ಜಿನಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಯಾವ ಕಾರಣದಿಂದ ಎಂದು ಅರಿತು ಚಿಕಿತ್ಸೆ ಪಡೆಯುವುದು ಸೂಕ್ತ. ಸದ್ಯ ರಾಸ್ನಾದಿ ಗುಗ್ಗುಲು ಮಾತ್ರೆಯನ್ನು ದಿನಕ್ಕೆರಡು ಬಾರಿ ಎರಡು ಮಾತ್ರೆಯನ್ನು ಊಟದ ನಂತರ ಸೇವಿಸಿ.

ಪ್ರತಿದಿನ ಪಿಂಡತೈಲವನ್ನು ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ ಶಾಖ ತೆಗೆದುಕೊಳ್ಳಿ. ಆಹಾರದಲ್ಲಿ ಕ್ಯಾಲ್ಸಿಯಂ ಅಂಶವಿರುವ ಹಾಲು, ಮೊಸರು, ಮೊಟ್ಟೆ, ಮೊಳಕೆಕಾಳು, ಸೊಪ್ಪು, ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಿ. ಪ್ರತಿ ದಿನ ಅರ್ಧ ಗಂಟೆ ವ್ಯಾಯಾಮ ಯೋಗ ಅಥವಾ ವಾಕಿಂಗ್ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net