ಕೆಲಸದ ಆರಂಭಕ್ಕೂ ಮುನ್ನ ದಿನದ ಯೋಜನೆ ರೂಪಿಸುವುದು, ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳುವುದು, ನಿಯಮಿತವಾಗಿ ಸಣ್ಣ ಬ್ರೇಕ್‌ಗಳನ್ನು ತೆಗೆದುಕೊಳ್ಳುವುದು, ದೈಹಿಕ ಚಲನೆ ಮತ್ತು ಕಚೇರಿಯ ಮೇಜನ್ನು ಸ್ವಚ್ಛವಾಗಿಟ್ಟುಕೊಳ್ಳುವಂತಹ ಸರಳ ಅಭ್ಯಾಸಗಳು ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ದಿನಕ್ಕೆ ಒಂದೇ ಒಂದು ಒಳ್ಳೆಯ ಅಭ್ಯಾಸದಿಂದ ಆರಂಭಿಸಿ, ಕಾಲಾನಂತರದಲ್ಲಿ ಹೊಸ ಪದ್ಧತಿಗಳನ್ನು ಸೇರಿಸಿಕೊಳ್ಳಿ. ಇಂದು ಮಾಡುವ ಈ ಪುಟ್ಟ ಬದಲಾವಣೆಗಳು, ನಾಳೆ ನಿಮ್ಮ ವೃತ್ತಿಜೀವನವನ್ನು ಹೆಚ್ಚು ಆರೋಗ್ಯಕರ, ಸಂತೋಷದಾಯಕ ಮತ್ತು ಯಶಸ್ವಿಯಾಗಿಸಲಿವೆ (ಏಜೆನ್ಸೀಸ್).