

ಸಾಮಾನ್ಯವಾಗಿ ಎಲ್ಲ ಕಡೆ ಪಪ್ಪಾಯ ಹಣ್ಣು ಸಿಗುತ್ತದೆ. ಇದರಲ್ಲಿ ಬಹಳ ಔಷಧೀಯ ಗುಣಗಳಿವೆ. ಪಪ್ಪಾಯ ಸೇವನೆಯಿಂದ ಕರುಳಿನಲ್ಲಿ ಸೇರಿಕೊಂಡ ಜಂತುಗಳು ನಾಶವಾಗುತ್ತವೆ. ವಿಟಮಿನ್ ಎ ಮತ್ತು ಬಿಗಳ ಉತ್ತಮ ಮೂಲವಾಗಿರುವ ಇದರಲ್ಲಿ ಕಿತ್ತಳೆಗಿಂತ ಹೆಚ್ಚಿನ ವಿಟಮಿನ್ ಸಿ ಜೀವಸತ್ವವಿದೆ. ಪಪ್ಪಾಯಯಲ್ಲಿರುವ ಆಂಟಿಆಕ್ಸಿಡೆಂಟ್ಗಳು ಮೇಧೋಜೀರಕ, ಯಕೃತ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವುದರ ಜತೆಗೆ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಪಪ್ಪಾಯದಲ್ಲಿರುವ ನಾರಿನ ಅಂಶವು ಮಲಬದ್ಧತೆಯನ್ನು ತಡೆಯುತ್ತದೆ. ಫೈಬರ್ ಅಂಶ ಹೆಚ್ಚಿರುವುದರಿಂದ ಪಪ್ಪಾಯವು ಅಜೀರ್ಣ, ಹೊಟ್ಟೆಹುಣ್ಣು, ಹೊಟ್ಟೆ ಮತ್ತು ಎದೆಯುರಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಪಿತ್ತಕೋಶದಲ್ಲಿರುವ ವಿಷವಸ್ತುಗಳನ್ನು ಹೊರಹಾಕುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ನೆರವಾಗುವ ವಿಟಮಿನ್ ಸಿ ಪಪ್ಪಾಯದಲ್ಲಿದ್ದು, ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವ ಪಪ್ಪಾಯ ಅಂಶಗಳನ್ನೂ ಹೊಂದಿದೆ.
ಹಲವಾರು ಸಂಶೋಧನೆಗಳ ಪ್ರಕಾರ, ಟೈಪ್ 2 ಮಧುಮೇಹದ ಬೆಳವಣಿಗೆಯನ್ನು ಪಪ್ಪಾಯ ನಿಧಾನಗೊಳಿಸುತ್ತದೆ. ಪಪ್ಪಾಯದಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ನಂತಹ ಫ್ಲೇವನಾಯ್್ಡ ್ಸ ಸಮೃದ್ಧವಾಗಿವೆ. ಕಣ್ಣಿನ ರೋಗಗಳನ್ನು ತಡೆಗಟ್ಟುವಲ್ಲಿ ಇದು ಸಹಾಯ ಮಾಡುತ್ತದೆ.
ಪಪ್ಪಾಯದ ತಿರುಳನ್ನು ಹಿಚುಕಿ ತ್ವಚೆಗೆ ಹಚ್ಚಿದರೆ ಅದು ಸತ್ತ ಚರ್ಮದ ಕೋಶಗಳನ್ನು ತೆಗೆಯುತ್ತದೆ. ಹೆಚ್ಚಿನ ಫೇಸ್ ಮಾಸ್ಕ್ ಗಳಲ್ಲಿ ಪಪ್ಪಾಯವನ್ನು ಬಳಸಲಾಗುತ್ತದೆ ಮತ್ತು ಸತ್ತ ಚರ್ಮದ ಕೋಶಗಳನ್ನು ಕಿತ್ತುಹಾಕುವಲ್ಲಿ ಇದರ ಪಾತ್ರ ಪ್ರಮುಖವಾದುದು.
ಪಪ್ಪಾಯ ತಿಂದರೆ ಚರ್ಮದ ಕಾಂತಿ ಹೆಚ್ಚುವುದು. ಆರೋಗ್ಯಕಾರಿ ಚರ್ಮಕ್ಕೆ ಬೇಕಾಗುವ, ಚರ್ಮದ ವರ್ಣ ಕುಂದುವುದನ್ನು ತಡೆಯುವ ಕ್ಯಾರೋಟಿನ್ ಅಂಶ ಪಪ್ಪಾಯಲ್ಲಿದೆ. ಪಪ್ಪಾಯ ಎಲೆಯ ಸಾರದ ಸೇವನೆಯಿಂದ ಪ್ರತಿರೋಧಕ ಶಕ್ತಿ ಹೆಚ್ಚುವುದು. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವುದು.