ಪಾರ್ಲಿಮೆಂಟ್​ ಮೆನುವಿನಲ್ಲಿ ರಾಗಿ ಇಡ್ಲಿ ದರ್ಬಾರ್​! ಮಾಡೊದೇಗೆ? ಇಲ್ಲಿದೆ ಸಿಂಪಲ್ಸ್​ ಟಿಪ್ಸ್​​.. | Ragi Idli

Untitled design (21)
Published on

Ragi Idli : ಇತ್ತೀಚಿನ ವೇಗದ ಆಧುನಿಕ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದೆ ಕಷ್ಟವಾಗಿದೆ. ಆದರಲ್ಲೂ ಪಟ್ಟಣ ಮತ್ತು ನಗರಗಳಲ್ಲಿ ದೈನಂದಿನ ಜೀವನಶೈಲಿಯೇ ಅದಲು-ಬದಲು ಆಗಿದೆ. ಈ ದಿನಚರಿಯಿಂದ ಒಂದಲ್ಲ ಒಂದು ರೋಗಗಳು, ಸೋಂಕುಗಳು ಮನುಷ್ಯನಲ್ಲಿ ಹರಡುತ್ತೀವೆ. ಹೀಗಾಗಿ, ಇದೀಗ ಪೌಷ್ಟಿಕಾಂಶ ಆಹಾರ ಮತ್ತು ಆರೋಗ್ಯಕ್ಕೆ ಬೇಕಾದ ಆಹಾರವನ್ನು ವೈದ್ಯರು, ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಿದ್ದಾರೆ. ಆದಗ್ಯೂ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು, ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸುವ ಕೆಲವು ಆರೋಗ್ಯಕರ ಆಹಾರಗಳನ್ನು ಸಂಸತ್ತಿನ ಕ್ಯಾಂಟೀನ್ ಮೆನುವಿನಲ್ಲಿ ಸೇರಿಸಲಾಗಿದೆ.

ಹೌದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೋರಿಕೆಯ ಮೇರೆಗೆ, ಆರೋಗ್ಯಕ್ಕೆ ಧಕ್ಕೆಯಾಗದಂತೆ ಕಡಿಮೆ ಕ್ಯಾಲೋರಿಗಳಲ್ಲಿ ದೇಹಕ್ಕೆ ಪೌಷ್ಟಿಕಾಂಶವನ್ನು ಒದಗಿಸುವ ಖಾದ್ಯಗಳನ್ನು ಇದೀಗ ತಯಾರಿಸಲಾಗುವುದು ಎಂದು ವರದಿ ಉಲ್ಲೇಖಿಸಿದೆ.

ಈ ವಿಶೇಷ ಆಹಾರಗಳಲ್ಲಿ ರಾಗಿ ಇಡ್ಲಿ ಕೂಡ ಒಂದು. ರಾಗಿ ಇಡ್ಲಿಯೊಂದಿಗೆ ಸಾಂಬಾರ್ ಮತ್ತು ಚಟ್ನಿ ಉಪಾಹಾರದ ರುಚಿಯನ್ನು ಬದಲಾಯಿಸುತ್ತದೆ. ನೀವು ಇನ್ನೂ ರಾಗಿ ಇಡ್ಲಿಯನ್ನು ಪ್ರಯತ್ನಿಸದಿದ್ದರೆ, ಅದನ್ನು ಹೇಗೆ ತಯಾರಿಸಬೇಕೆಂದು ತಿಳಿಯಿರಿ.

ರಾಗಿ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು

ರಾಗಿ ಇಡ್ಲಿ ಹೊಟ್ಟೆಗೆ ತುಂಬಾ ಹಗುರವಾದ ಉಪಹಾರ. ಇದನ್ನು ತಿಂದ ನಂತರ ನಿಮಗೆ ಖಾಲಿ ಹೊಟ್ಟೆ ಅನಿಸುವುದಿಲ್ಲ. ರಾಗಿ ಇಡ್ಲಿ ಮಾಡಲು ಯಾವ ಪದಾರ್ಥಗಳು ಬೇಕಾಗುತ್ತವೆ ಎಂದು ತಿಳಿಯಿರಿ.

1/2 ಕಪ್ ರಾಗಿ

1/2 ಕಪ್ ಸಣ್ಣ ಧಾನ್ಯ ಅಕ್ಕಿ

1/2 ಕಪ್ ಹೆಸರು ಬೇಳೆ

2 ರಿಂದ 3 ಚಮಚ ಮೊಸರು

ಸ್ವಲ್ಪ ಉಪ್ಪು

1 ಟೀಸ್ಪೂನ್ ಈನೋ/ಬೇಕಿಂಗ್ ಸೋಡಾ

ರಾಗಿ ಇಡ್ಲಿ ಮಾಡುವುದು ಹೇಗೆ

ರಾಗಿ ಇಡ್ಲಿ ತಯಾರಿಸಲು, ಮೊದಲು ಅಕ್ಕಿ, ಹೆಸರು ಬೇಳೆ ಮತ್ತು ರಾಗಿಯನ್ನು ರಾತ್ರಿಯಿಡೀ ನೆನೆಸಿಡಿ. ನಂತರ ಅದನ್ನು ಮಿಕ್ಸರ್ ಗ್ರೈಂಡರ್ ಜಾರ್‌ನಲ್ಲಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ. ಈಗ ನೀವು ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಬೇಕು ಮತ್ತು ಎರಡರಿಂದ ಮೂರು ಚಮಚ ಮೊಸರು ಕೂಡ ಸೇರಿಸಬೇಕು.

ನಿಮ್ಮ ಬಳಿ ಅಡುಗೆ ಸೋಡಾ ಇಲ್ಲದಿದ್ದರೆ, ಒಂದು ಟೀ ಚಮಚ ಈನೋವನ್ನು ಬ್ಯಾಟರ್‌ಗೆ ಸೇರಿಸಬಹುದು. ಇಡ್ಲಿ ಅಚ್ಚಿಗೆ ಎಣ್ಣೆ ಹಚ್ಚಿ ಸುಮಾರು 10 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ. ರುಚಿಕರವಾದ ಫೈಬರ್ ಭರಿತ ರಾಗಿ ಇಡ್ಲಿ ಸಿದ್ಧವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net