ಜುಲೈ ಮಾಸದಲ್ಲಿ ಜನಿಸಿದವರ ಸ್ವಭಾವ ಹೀಗಿರುತ್ತಂತೆ ನೋಡಿ!...July Born

Qualities that make July-born babies unique
Qualities that make July-born babies unique
Published on

ಪ್ರಮುಖ ಮುಖ್ಯಾಂಶಗಳು

  • ಜುಲೈ ಮಾಸದಲ್ಲಿ ಜನಿಸಿದವರ ವಿಶೇಷ ಸ್ವಭಾವ ಹೇಗಿರುತ್ತೆ ಗೊತ್ತಾ?
  • ಸಮಯ ವ್ಯರ್ಥ ಮಾಡೋಕೆ ಇಚ್ಛಿಸಲ್ಲ, ಉದಾರರು ಜುಲೈನಲ್ಲಿ ಜನಿಸಿದವರು
  • ಕುಟುಂಬಸ್ಥರು ಎಂದರೆ ಭಾರೀ ಪ್ರೀತಿ, ಕೋಪ ನಿಯಂತ್ರಿಸಿಕೊಳ್ಳುವುದರಲ್ಲಿ ನಿಪುಣರು
Qualities that make July-born babies unique: ವರ್ಷದಲ್ಲಿ ಒಟ್ಟು 12 ತಿಂಗಳು. ಆಯಾ ತಿಂಗಳು ಹಾಗೂ ದಿನಾಂಕದಲ್ಲಿ ಜನಿಸಿದ ಮಕ್ಕಳು ಅವರದ್ದೇ ಆದ ವಿಶೇಷತೆಯನ್ನು ಹೊಂದಿರುತ್ತಾರೆ. ಅದೇ ರೀತಿ ಜುಲೈನಲ್ಲಿ ಜನಿಸಿದ ಮಕ್ಕಳು ವಿಭಿನ್ನ ಒಲವು, ಸ್ನೇಹ ಪರ ಹಾಗೂ ಉದಾರಿಗಳು ಎಂದು ಹೇಳಲಾಗುತ್ತದೆ. ಇನ್ನೇನು ಜುಲೈ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇದೆ. ಆ ತಿಂಗಳಲ್ಲಿ ಜನಿಸಿದ ಮಕ್ಕಳ ವಿಶೇಷತೆ ಏನು, ಆಸಕ್ತಿ ವಿಚಾರಗಳು ಏನು ಎನ್ನುವುದನ್ನು ಇಂದು ತಿಳಿದುಕೊಳ್ಳೋಣ.

ಆಶಾವಾದಿಗಳು

ಜುಲೈನಲ್ಲಿ ಜನಿಸಿದ ಮಕ್ಕಳು ಅಥವಾ ಜನರು ಆಶಾವಾದಿಗಳು. ಯಾವ ವಿಚಾರದ ಬಗ್ಗೆ ಹೆಚ್ಚಾಗಿ ಬೇಸರಗೊಳ್ಳೋದಿಲ್ಲ. ಮಹತ್ವಾಕಾಂಕ್ಷಿಗಳಾದ ಇವರು ಕಷ್ಟದ ಸಮಯದಲ್ಲಿ ಧನಾತ್ಮಕ ಅಂಶಗಳತ್ತ ಗಮನ ಹರಿಸುತ್ತಾರೆ. ಬದುಕಿನಲ್ಲಿ ಯಾವುದೇ ರೀತಿಯ ಕಷ್ಟ ಬಂದರೂ ಅದನ್ನು ಎದುರಿಸುವ ಕಲೆ ಇವರಿಗೆ ಗೊತ್ತು. ಜುಲೈ ತಿಂಗಳಲ್ಲಿ ಜನಿಸಿದ ಮಕ್ಕಳು ಹಾಸ್ಯ ಸ್ವಭಾವದವರು. ತಮ್ಮ ಸುತ್ತಮುತ್ತಲಿನ ಜನರನ್ನು ನಗಿಸುವುದು ಹುಟ್ಟಿನಿಂದಲೇ ಪಡೆದುಕೊಂಡ ವರವಾಗಿದೆ.

ಉದಾರವಾದಿಗಳು

ಜುಲೈ ಮಾಸದಲ್ಲಿ ಜನಿಸಿದ ಮಕ್ಕಳು ಉದಾರವಾದಿಗಳು ಹಾಗೂ ಕರುಣೆಯ ಮನಸ್ಥಿತಿ ಉಳ್ಳವರು. ಕಾಳಜಿ ಸ್ವಭಾವ ಹೊಂದಿರುವ ಇವರು ಸಹಾಯ ಎಂದು ಕೇಳಿಕೊಂಡು ಬಂದವರ ಬಗ್ಗೆ ಹಿಂದೆ ಮುಂದೆ ಯೋಚಿಸದೆ ಸಹಾಯ ಹಸ್ತ ಚಾಚುತ್ತಾರೆ. ಇವರ ಈ ಸ್ವಭಾವ ಅಪಾರ ಸ್ನೇಹಿತರನ್ನು ಪಡೆದುಕೊಳ್ಳಲು ಕಾರಣವಾಗಿದೆ.

ಸಮಯ ವ್ಯರ್ಥ ಮಾಡೋಲ್ಲ

ಜುಲೈನಲ್ಲಿ ಜನಿಸಿದ ಮಕ್ಕಳು ಅಥವಾ ಜನರು ಎಂದಿಗೂ ಸಮಯ ವ್ಯರ್ಥ ಮಾಡಿಕೊಳ್ಳಲು ಇಚ್ಛಿಸೋದಿಲ್ಲ. ಅವರಿಗೆ ಸಿಕ್ಕ ಸಮಯದಲ್ಲಿ ಓದುವುದು, ಕೌಶಲ್ಯ ವೃದ್ಧಿಸಿಕೊಳ್ಳುವುದು ಸೇರಿದಂತೆ ನಾನಾ ವಿಚಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಯಾವುದೇ ಕೆಲಸ ಮಾಡಿದರೂ ಸಹ ಅದರ ಮೇಲೆ ಏಕಾಗ್ರತೆ ವಹಿಸುತ್ತಾರೆ. ಕುಟುಂಬದ ಮೇಲೂ ಗಮನಹರಿಸುತ್ತಾರೆ.

ಕುಟುಂಬ ಎಂದರೆ ಎಲ್ಲಿಲ್ಲದ ಪ್ರೀತಿ

ಜುಲೈ ಮಾಸದಲ್ಲಿ ಜನಿಸಿದ ಮಕ್ಕಳಿಗೆ ಕುಟುಂಬವೇ ಪ್ರಪಂಚವಿದ್ದಂತೆ. ಆದರೆ, ಸ್ವತಂತ್ರ್ಯವಾಗಿ ಒಬ್ಬರೇ ಇರಲು ಚಿಂತಿಸುತ್ತಾರೆ. ಕುಟುಂಬದವರ ಆರೋಗ್ಯ ಕಾಪಾಡಿಕೊಳ್ಳಲು ಅವರು ಹೆಣಗಾಡುತ್ತಾರೆ. ಅವರಿಗೆ ಸಂಬಂಧಿಕರ ಮೇಲಿರುವ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.

ಕೋಪ ನಿಯಂತ್ರಿಸಿಕೊಳ್ಳೋಕೆ ಗೊತ್ತು

ಜುಲೈನಲ್ಲಿ ಜನಿಸಿದವರಿಗೆ ತಮ್ಮಲ್ಲಿ ಕಾಣಿಸಿಕೊಳ್ಳುವ ಕೋಪ ಅಥವಾ ನಗು, ಭಾವನಾತ್ಮಕತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳೋಕೆ ಗೊತ್ತು. ಕಷ್ಟ ಹಾಗೂ ಸುಖ ಜೊತೆಗೆ ದುಃಖ ಯಾವುದೇ ಸಂದರ್ಭದಲ್ಲಿಯೂ ಯಾರೊಂದಿಗೆ ಹೇಗಿರುವುದು ಎನ್ನುವ ವಿಚಾರದಲ್ಲಿ ನಿಪುಣರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net