ಹ್ಯಾಪಿ ಮದರ್ಸ್​ ಡೇ ಎನ್ನುವ ಮುನ್ನ ಈ ವಿಚಾರ ಬಗ್ಗೆ ಗಮನವಿರಲಿ; ನಿಮ್ಮ ತಾಯಿ ನಿತ್ಯ ಅತಿಯಾದ ಸುಸ್ತು, ಸಿಟ್ಟಿಗೊಳಗಾಗುತ್ತಿರುವುದು ಯಾಕೆ ಗೊತ್ತಾ?.. Motherhood Burnout

 Motherhood Burnout
Motherhood Burnout
Published on

ಪ್ರಮುಖ ಮುಖ್ಯಾಂಶಗಳು

  • ಸೂಪರ್​ ವುಮೆನ್​ ಲೇಬಲ್​ ಹೊತ್ತು ತಮ್ಮನ್ನೇ ಮರೆಯುತ್ತಿರುವ ತಾಯಂದಿರು
  • ನಿದ್ರಾ ಹೀನತೆ, ಭಾರಿ ಕೆಲಸದಿಂದ ಒತ್ತಡಕೊಳ್ಳಗಾಗುತ್ತಿದ್ದಾರೆ ಎಂದ ಮನಶ್ಶಾಸ್ತ್ರಜ್ಞರು
  • ತಾಯಂದಿರ ಒತ್ತಡವನ್ನು ಕಡಿಮೆ ಮಾಡಲು ಏನು ಮಾಡಬೇಕು?
  Motherhood Burnout ಜಗತ್ತಿನಾದ್ಯಂತ ವಿಶ್ವ ತಾಯಂದಿರ ದಿನ ಆಚರಿಸಿ, ಸಂಭ್ರಮಿಸಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಹಾಡು ಫೋಟೋಗಳ ಅಬ್ಬರ ಜೋರಾಗಿದೆ. ತಾಯಿಯಾಗುವುದು ಎಲ್ಲ ಹೆಣ್ಣುಗಳ ಒಂದು ಸುಂದರ ಅನುಭವ. ಆದರೆ, ಆಕೆ ನಿತ್ಯ ಅದೆಷ್ಟು ಮಾನಸಿಕ ಮತ್ತು ದೈಹಿಕವಾಗಿ ಜಂಜಾಟಕ್ಕೊಳಗಾಗುತ್ತಾಳೆ ಎನ್ನುವ ಅರಿವು ಕೆಲವರಿಗೆ ಇರೋದಿಲ್ಲ. 
 ಬೆಳಗೆದ್ದು ಮಕ್ಕಳಿಗೆ ಮತ್ತು ಗಂಡನಿಗೆ ಅಡುಗೆ, ಸ್ನಾನ ಸ್ನ್ಯಾಕ್ಸ್, ಊಟ, ರಾತ್ರಿ ಊಟ, ಐದಾರು ಬಾರಿ ಕಾಫಿ. ಪಾತ್ರೆ ತೊಳೆಯೋದು ಮನೆ ಹೊರಿಸುವುದು. ಬಟ್ಟೆ ಹೀಗೆ ನಿತ್ಯ ವಿರಾಮವೇ ಇಲ್ಲದೆ ದುಡಿದು ದಣಿಯುತ್ತಾಳೆ. ಕೆಲವೊಮ್ಮೆ ಮಕ್ಕಳು ರೇಗಾಡಿ ಬಿಟ್ಟರೆ ಹಲುಬುತ್ತಾಳೆ. ಹಣವೇ ಪಡೆಯದೇ ದುಡಿಯುವ ಈಕೆ ಬರ್ನೌಟ್​ ಅಂದರೆ ಮಾನಸಿಕ ಮತ್ತು ದೈಹಿಕವಾಗಿ ಒತ್ತಡಕ್ಕೊಳಗಾಗಿ ಸುಮ್ಮನೆ ಚೀರಾಡುವುದು, ಅಳುವುದು ಹೀಗೆ ನಾನಾ ತೊಳಲಾಟಕ್ಕೆ ಬಲಿಯಾಗುತ್ತಾಳೆ ಇದು ನಿಮಗೆ ಗೊತ್ತಿದೆಯೇ?.
ಹೌದು, ಮನಶ್ಶಾಸ್ತ್ರಜ್ಞರ ಪ್ರಕಾರ ಸಮಾಜದಲ್ಲಿ ಹೆಣ್ಣಿಗೆ ಕೊಟ್ಟಿರುವ ಲೇಬಲ್​ಗಳಂತೆ ಆಕೆ ಬದುಕಲು ಹೆಚ್ಚೆಚ್ಚು ಶ್ರಮ ಹಾಗಿ ತನ್ನೊಳಗೆ ತನ್ನ ಆಕಾಂಕ್ಷೆ ಮತ್ತು ಆಸೆಗಳನ್ನು ಸುಟ್ಟು ಹಾಕುತ್ತಾ ಗಂಡ ಹಾಗೂ ಮಗುವಿನ ಮುದ್ದು ಆಗೋಕೆ ಶತ ಪ್ರಯತ್ನ ಪಟ್ಟು ಬೇಸತ್ತು ಹೋಗುತ್ತಿದ್ದಾಳೆ. ಹೀಗೆಂದು ಮನಶ್ಶಾಸ್ತ್ರಜ್ಞರು  ಹೇಳುತ್ತಿದ್ದಾರೆ.

ನಿಮ್ಮ ತಾಯಿಯ ದುಡಿಮೆ ಸಮಯ ಎಷ್ಟು ಗೊತ್ತಾ? 

 ಭಾರತದ ಸಮಯ ಬಳಕೆಯ ಸಮೀಕ್ಷೆ 2024ರ ಪ್ರಕಾರ  15-59 ವರ್ಷ ವಯಸ್ಸಿನ ಮಹಿಳೆಯರಲ್ಲಿ ಶೇ.41ರಷ್ಟು ಪುರುಷರು ಮಾತ್ರ ಮನೆಯ ಕೆಲಸದಲ್ಲಿ ಭಾಗಿಯಾಗುತ್ತಾರೆ. ಮಹಿಳೆಯರು  ದಿನಕ್ಕೆ ಸುಮಾರು 140 ನಿಮಿಷಗಳನ್ನು  ಮಕ್ಕಳು, ಗಂಡ ಆರೈಕೆಯಲ್ಲೇ ದಿನ ಕಳೆಯುತ್ತಾರೆ ಎನ್ನಲಾಗಿದೆ. ಇದು ಪುರುಷರು ಕಳೆಯುವ ಸಮಯಕ್ಕಿಂತ ಎರಡು ಪಟ್ಟು ಹೆಚ್ಚು.  ಅಲ್ಲದೆ ಮಹಿಳೆಯರು ಯಾವುದೇ ವೇತನದ ನಿರೀಕ್ಷೆಯಿಲ್ಲದೆ ಮನೆಕೆಲಸ ಮತ್ತು ಆರೈಕೆ ಕೆಲಸಗಳಲ್ಲಿ ಕಳೆಯುತ್ತಾರೆ. ಇದರಿಂದ ಇತ್ತೀಚೆಗೆ ಮಹಿಳೆಯರು 'ಬರ್ನ್-ಔಟ್', ಅತಿಯಾದ ಒತ್ತಡ ಮತ್ತು ಭಾವನಾತ್ಮಕ ಬಳಲಿಕೆಗೆ ಒಳಗಾಗುತ್ತಿದ್ದಾರೆ ಎಂದು ಮನಶ್ಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

'ಬರ್ನ್-ಔಟ್'ಗೆ ಕಾರಣ ಏನು?

ತಾಯಂದಿರು ನಿರಂತರವಾಗಿ ತಮ್ಮ ಮಕ್ಕಳಿಗೆ ಲಭ್ಯವಿರುತ್ತಾರೆ. ಎಲ್ಲ ಅಗತ್ಯತೆ ಪೂರೈಕೆ ಮಾಡೋದು. ಬೇಕಾದದ್ದನ್ನೆಲ್ಲ ಕೊಡಿಸೋದು. ಹೀಗೆ ನಾನಾ ಕೆಲಸಗಳಲ್ಲಿ ದಿನಪೂರ್ತಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಸಮಾಜವು ತಾಯಿ ಮತ್ತು ಹೆಣ್ಣನ್ನು ಸಂಸಾರದ ಕಣ್ಣು ಕೆಲಸ ಮಾಡುತ್ತಲೇ ಇರಬೇಕು ಎಂದು ಗುರುತಿಸಿ ಬಿಟ್ಟಿದೆ . ಸಮಾಜವು ಒಬ್ಬ ತಾಯಿಯನ್ನು "ಸೂಪರ್ ವುಮನ್" ತರಹ ನೋಡುತ್ತದೆ. ಆ ಕಾರಣದಿಂದ ತಾಯಿಯಾದವಳು ಇದೇ ಕೆಲಸ ಮಾಡುತ್ತಾ ಎಲ್ಲರ ಮನವನ್ನು ತಣಿಸುತ್ತಾ ಬದುಕುತ್ತಿರುವುದು ಆಕೆಗೆ ಮತ್ತಷ್ಟು ತಂದೊಡ್ಡಿರುವ ಸಮಸ್ಯೆಯಾಗಿದೆ. 

ನಿದ್ರೆ ಕೊರತೆ

 ನಿತ್ಯ ಮಕ್ಕಳಿಗೆ ಬೇಕಾದದ್ದನ್ನು ನಿಭಾಯಿಸುವುದು. ಹಠವನ್ನು ತಣಿಸುವುದು. ಸದಾ ಅವರ ಸುರಕ್ಷತೆ ಬಗ್ಗೆ ಚಿಂತೆ ಮಾಡುವುದು. ತಾಯಂದಿರನ್ನು ಭಾವನಾತ್ಮಕಾವಿ ಖಾಲಿ ಮಾಡುತ್ತದೆ. ಮಕ್ಕಳು ಮತ್ತು ಪತಿಯ ಸೇವೆ ಮಾಡುವ ಆಕೆ ಮುಂಜಾನೆ ಐದಕ್ಕೆ ಎದ್ದು ಕೆಲಸ ಶುರವಿಟ್ಟುಕೊಂಡರೆ ಬೆಳಗ್ಗಿನ ತಿಂಡಿ ರಾತ್ರಿಯ ಊಟ, ಸ್ನ್ಯಾಕ್ಸ್​..ಮನೆ ಕೆಲಸ ಬಟ್ಟೆ ಹೀಗೆ ಇದಕ್ಕೆ ಸಮಯ ವ್ಯರ್ಥವಾಗಿ ನಿದ್ದೆ ಮಾಡೋದನ್ನು ಕಡಿಮೆ ಮಾಡುತ್ತಾಳೆ ಇದು ಮೆದುಳಿನ ಕಾರ್ಯಕ್ಷಮತೆಯನ್ನು ಕುಗ್ಗಿಸಿ ಸಿಟ್ಟು ಮತ್ತು ಹತಾಶೆಗೆ ದಾರಿ ಮಾಡಿಕೊಡುತ್ತದೆ.
ಸೋಶಿಯಲ್​ ಮೀಡಿಯಾದಲ್ಲಿ ಬೇರೆ ತಾಯಂದಿರನ್ನು ಕಂಡು ನಾನು ಸರಿಯಾದ ತಾಯಿ ಅಲ್ಲವೋ ಹೌದೋ ಎನ್ನುವುದನ್ನು ನಿತ್ಯ ಪ್ರಶ್ನಿಸಿಕೊಳ್ಳೋಕೆ ಶುರು ಮಾಡಿಕೊಳ್ಳುತ್ತಾಳೆ ಇದು ಆಕೆಯ   ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ.

ಒತ್ತಡ ದೂರವಾಗಲೂ ಏನು ಮಾಡಬೇಕು?

ತಾಯಂದಿರ ಒತ್ತಡವನ್ನು ಕಡಿಮೆ ಮಾಡಲು ಅವರಿಗಾಗಿ ಸಮಯವನ್ನು ಕೊಟ್ಟುಕೊಳ್ಳಲು ಶುರು ಮಾಡಬೇಕು,. ಅಥವಾ ಮಕ್ಕಳು ಇಲ್ಲದಿದ್ದರೆ ಅವರ ಪತಿಯೇ ಅವರಿಗಾಗಿ ಸಮಯ ಹೇಗೆ ಕೊಟ್ಟುಕೊಳ್ಳಬಹುದು ಎನ್ನುವ ಯೋಜನೆ ರೂಪಿಸಿ..ಅವರಿಂದ ದೂರ ಇರಬೇಕು.
ಮಹಿಳೆ ತ್ಯಾಗಮಯಿ..ಕರುಣಾಮಯಿ ಎನ್ನುವ ಸಮಾಜದ ಲೇಬಲ್​ ಪಕ್ಕಕ್ಕಿಟ್ಟು ತಮ್ಮ ಸಂಗಾತಿಗಳ ಬಳಿ ಮಕ್ಕಳ ಬಳಿ ಸಹಾಯ ತೆಗೆದುಕೊಳ್ಳಬೇಕು. ಯಾರದ್ದೇ ಸಹಾಯವಾಗಲಿ ತೆಗೆದುಕೊಳ್ಳಲು ಸಹಾಯವನ್ನು ಕೇಳಲು ಹಿಂಜರಿಯಬಾರದು.  ಸಣ್ಣ ವಿರಾಮ, ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net