

ದೆಹಲಿ; ಪ್ರಧಾನಿ ನರೇಂದ್ರ ಮೋದಿ ಇಂದು (ಆ.29) ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ( AB-PMJAY ) ಆಡಿಯಲ್ಲಿ, ಯಾವುದೇ ಆದಾಯ ಲೆಕ್ಕಿಸದೆ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ರಕ್ಷಣೆ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ದೆಹಲಿ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಹೊರತು ಪಡಿಸಿ, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ದೇಶದ 4.5 ಕೋಟಿ ಕುಟುಂಬಗಳಲ್ಲಿ ಅಂದಾಜು 8 ಕೋಟಿ ನಾಗರಿಕರು ಪ್ರಯೋಜನೆ ಪಡೆಯಲಿದ್ದಾರೆ. ಅಲ್ಲದೆ, PMJAY ಯೋಜನೆಯಡಿ 7.73 ಕೋಟಿ ಮಂದಿ ಆಸ್ಪತ್ರೆಗಳಲ್ಲಿ ನೋಂದಾಯಿಸಿಕೊಂಡಿದ್ದು, ಶೇ.49 ರಷ್ಟು ಮಹಿಳಾ ಫಲಾನುಭವಿಗಳನ್ನು ಇದು ಒಳಗೊಂಡಿದೆ. ಒಂದು ಲಕ್ಷ ಕೋಟಿಗೂ ಅಧಿಕ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಹೀಗಾಗಿ, ಆರೋಗ್ಯ ವಿಮೆ ಯೋಜನೆಗೆ ಯಾರೆಲ್ಲ ಅರ್ಹರು, ಏನೆಲ್ಲಾ ಲಾಭಗಳು ಎಂದು ತಿಳಿಯೋಣ ಬನ್ನಿ.
ಮೊದಲನೆಯದಾಗಿ ಈ ಯೋಜನೆಗೆ ಒಳಪಟ್ಟ ಎಲ್ಲ ನಾಗರಿಕರಿಗೆ 5 ಲಕ್ಷದವರಿಗೂ ಯಾವುದೇ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು.
ಖಾಸಗಿ ವಿಮಾ ಪಾಲಿಸಿ ಮತ್ತು ರಾಜ್ಯ ಉದ್ಯೋಗಿಗಳ ವಿಮೆ ಪಾಲಿಸಿ ಪಡೆಯುತ್ತಿರುವ ಹಿರಿಯ ನಾಗರಿಕರೂ ಸಹ ಈ ಯೋಜನೆಗೆ ಅರ್ಹರಿದ್ದಾರೆ.
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(CGHS), ಮಾಜಿ ಸೈನಿಕರ ಆರೋಗ್ಯ ಯೋಜನೆ(ECHS) ಮತ್ತು ಆಯುಷ್ಮಾನ್ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ನಂತಹ ಇತರ ಸಾರ್ವಜನಿಕ ಆರೋಗ್ಯ ವಿಮೆ ಯೋಜನೆಗಳನ್ನು ಬಳಸುತ್ತಿರುವ 70 ವರ್ಷ ಮೇಲ್ಪಟ್ಟ ನಾಗರಿಕರು ಕೂಡ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಆರೋಗ್ಯ ವಿಮೆ ಪಡೆಯು ಜನರು, PMJAY ಪೋರ್ಟಲ್ನಲ್ಲಿ ಅಥಾವ ಆಯುಷ್ಮಾನ್ ಅಪ್ಲಿಕೇಶನ್ನಲ್ಲಿ ನೊಂದಯಿಸಿಕೊಳ್ಳಬೇಕು. ಈಗಾಗಲೇ ಆಯುಷ್ಮಾನ್ ಕಾರ್ಡ್ ಹೊಂದಿದವರು ಪೋರ್ಟಲ್ನಲ್ಲಿ ಅಥವಾ ಆ್ಯಪ್ನಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಜತೆಗೆ ಹೊಸ ಕಾರ್ಡ್ಗೆ eKYC ಅನ್ನು ಪೂರ್ಣಗೊಳಿಸಿ ಈ ವಿಮೆ ಲಾಭವನ್ನು ಪಡೆಯಬಹುದು. (ಏಜೆನೀಸ್)