ಮನೆರುಚಿ: ಆಲೂಗಡ್ಡೆ ಖಾರದ ಬಿಲ್ಲೆ ಮಾಡುವ ವಿಧಾನ

alu karabille feb 17
Published on

ಶಿವರಾತ್ರಿಯ ಹಬ್ಬ ಹೊಸ್ತಿಲಲ್ಲಿ ನಿಂತಿದೆ. ಅಂದು ಮಾಡುವ ಉಪವಾಸಕ್ಕೆ ಪೂರಕವಾದ, ಆರೋಗ್ಯಕರ ಹಾಗೂ ಸುಲಭದಲ್ಲಿ ತಯಾರಿಸಬಲ್ಲ ಆಲೂಗಡ್ಡೆ ಖಾರದ ಬಿಲ್ಲೆ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿ: ಆಲೂಗಡ್ಡೆ-2 ಎಣ್ಣೆ-ಅರ್ಧ ಕಪ್ ಕಾಳುಮೆಣಸಿನ ಪುಡಿ-ಅರ್ಧ ಚಮಚ ಜೀರಿಗೆ ಪುಡಿ-1 ಚಮಚ ತೆಂಗಿನಕಾಯಿ ತುರಿ-ಅರ್ಧ ಕಪ್ ಗಸಗಸೆ-2 ಚಮಚ ಉಪ್ಪು-ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಅಲೂಗಡ್ಡೆಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆಯ ಸಮೇತ, ಬಿಲ್ಲೆಗಳಾಕಾರದಲ್ಲಿ ಕತ್ತರಿಸಿ, ಎರಡೂ ಬದಿಗೆ ಎಣ್ಣೆ ಸವರಿಡಿ. ತೆಂಗಿನಕಾಯಿ ತುರಿ, ಜೀರಿಗೆ ಪುಡಿ, ಗಸಗಸೆ, ಕಾಳುಮೆಣಸಿನ ಪುಡಿ, ಉಪ್ಪು ಬೆರೆಸಿ ನುಣ್ಣಗೆ ಅರೆದಿಡಿ. ಆಲೂಗಡ್ಡೆ ಬಿಲ್ಲೆಗಳನ್ನು, ಅರೆದ ಮಿಶ್ರಣದಲ್ಲದ್ದಿ, ಎಣ್ಣೆ ಸವರಿದ ತವಾದ ಮೇಲೆ, ಹರಡಿ, ಕೆಂಪಗಾಗುವವರೆಗೆ ಎರಡೂ ಬದಿಯನ್ನು ಬೇಯಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net