ಪಿಜ್ಜಾ, ಬರ್ಗರ್‌ ಪ್ರಿಯರೇ ! ಅತಿಯಾದ ಸೇವನೆ ಆರೋಗ್ಯಕ್ಕೆ ಅಪಾಯ, ನಿಯಮಿತವಾಗಿ ಸೇವಿಸಿ

pix
Published on

ಯಾವುದೇ ಜಂಕ್‌ ಫುಡ್‌ ಇರಬಹುದು ಅತೀ ಸೇವಸಿದರೇ ಆರೋಗ್ಯದ ಮೇಲೆ ಅದರ ದುಷ್ಪರಿಣಾಮಗಳಲೇ ಹೆಚ್ಚು. ಯಾವ ಆಹಾರವಾದರೂ ನಿಯಮಿವಾಗಿ ಸೇವಿಸಬೇಕು. ಅದರಲ್ಲೂ ಜಂಕ್‌ ಫುಡ್ ಆಹಾರಗಳು ಅತೀ ಸೇವಿಸದರೇ ಅಪಾಯ ಕಟ್ಟಿಟ್ಟ ಬುತ್ತಿ.


ಜಂಕ್ ಫುಡ್ ಸೇವನೆಯಿಂದ ಶ್ವಾಸಕೋಶದ ಸಮಸ್ಯೆ ಹೆಚ್ಚಳಕ್ಕೆ ಕಾರಣಾವಾಗಿದೆ. ಇತರ ಜಂಕ್ ಫುಡ್‌ಗಳಾದ ಫಿಜ್ಜಿ ಡ್ರಿಂಕ್ಸ್ ಮತ್ತು ಟೇಕ್‌ಅವೇಗಳು ಅಂತಹ ತೀವ್ರ ಪರಿಣಾಮವನ್ನು ಬೀರಿಲ್ಲ. ಆದರೆ ಸಂಶೋಧನೆ ಪ್ರಕಾರ ಫಾಸ್ಟ್ ಫುಡ್ ಕಳಪೆ ಆಹಾರದ ಗುಣಮಟ್ಟ ವನ್ನು ಹೊಂದಿರುತ್ತದೆ. ಹದಿಹರೆಯದ ಮಕ್ಕಳು ಹೆಚ್ಚು ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗಿ ದೇಹವನ್ನು ಇದು ಕೊಬ್ಬಿನಾಂಶ ತುಂಬಿಸುತ್ತದೆ. ಇದರಿಂದ ತೂಕ ಹೆಚ್ಚಾಗಿ ಹಾರ್ಟ್​​ ಅಟ್ಯಾಕ್​ ಆಗುವಂತಹ ಚಾನ್ಸ್​​ ಇದೆ. ಪಿಜ್ಜಾ ಸೇವನೆಯು ಕೆಲವೊಂದು ಅಲರ್ಜಿಗೂ ಕಾರಣವಾಗಬಹುದು.


ಅಸ್ತಮಾ ಹೆಚ್ಚಳ : ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಹ್ಯಾಂಬರ್ಗರ್‌ಗಳನ್ನು ತಿನ್ನುವುದರಿಂದ ಅದರಲ್ಲಿರುವ ಕೊಬ್ಬಿನಾಂಶವು ಅಸ್ತಮಾದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವು ತಿಳಿಸಿದೆ.


ಪ್ರತಿಬಾರಿಯೂ ಪಿಜ್ಜಾ ಸ್ಲೈಸ್‌ ಅನ್ನು ಕೈಗೆತ್ತಿಕೊಂಡಾಗ ಕ್ಯಾಲೊರಿದ್ದೇ ಭಯ. ಇದನ್ನು ತಿಂದರೆ ಎಲ್ಲಿ ಸಿಕ್ಕಾಪಟ್ಟೆ ದಪ್ಪ ಆಗಿ ಬಿಡುತ್ತೇನೊ, ಕೊಲೆಸ್ಟ್ರಾಲ್‌ ಜಾಸ್ತಿಯಾಗುತ್ತೇನೊ ಎಂಬ ಅಂಜಿಕೆಯಿಂದ ಫಿಟ್‌ನೆಸ್‌ ಪ್ರಿಯರು ಇದನ್ನು ದೂರವೇ ಇಡುತ್ತಾರೆ.


ಡಿನ್ನರ್‌ಗೆ ಪಿಜ್ಜಾ ಸೇವಿಸಬೇಡಿ
ಮಲಗುವ ಮುನ್ನ ಅಂದರೆ ಡಿನ್ನರ್‌ಗೆ ಪಿಜ್ಜಾ ಸೇವನೆ ಒಳ್ಳೆಯದಲ್ಲ. ಇದರಿಂದ ನಿಮಗೆ ಅಜೀರ್ಣತೆ ಮತ್ತು ಹೊಟ್ಟೆಯುಬ್ಬರ ಉಂಟಾಗುವ ಸಾಧ್ಯತೆ ಇದೆ. ಲಂಚ್‌ ಟೈಮ್‌ಗೆ ಪಿಜ್ಜಾ ತಿಂದರೆ ಓಕೆ. ಆಗ ನಿಮಗೆ ಕ್ಯಾಲೊರಿ ಕರಗಿಸಿಕೊಳ್ಳಲು ಸಾಕಷ್ಟು ಸಮಯವಿರುತ್ತದೆ.


ಸೈಡ್‌ ಡಿಶ್‌ ಚೂಸಿಯಾಗಿರಲಿ
ಪಿಜ್ಜಾದ ಜೊತೆಗೆ ತಿನ್ನಲು ಅನೇಕ ಸೈಡ್‌ ಡಿಶ್‌ಗಳು ಇರುತ್ತವೆ. ಈ ಡಿಶ್‌ಗಳು ಪೌಷ್ಟಿಕಾಂಶ ಭರಿತವಾಗಿರುವಂತೆ ನೋಡಿಕೊಳ್ಳಿ. ಚೀಸ್‌ ಗಾರ್ಲಿಕ್‌ ಬ್ರೆಡ್‌, ಫ್ರೆಂಚ್‌ ಫ್ರೈ, ಪೊಟ್ಯಾಟೊ ವೆಜ್‌ಗಳಿಗಿಂತ ಗ್ರೀನ್‌ ಸಲಾಡ್‌ ಅಥವಾ ವೆಜಿಟೇಬಲ್‌ ಸೂಪ್‌ಗಳನ್ನು ಆರ್ಡರ್‌ ಮಾಡಿ. ಇದು ಹೊಟ್ಟೆಗೂ ಹಿತ ಮತ್ತು ಇದರಿಂದ ದೇಹ ತೂಕವೂ ಹೆಚ್ಚಲ್ಲ.


ಹಣ್ಣಿನ ರಸ ಕುಡಿಯಿರಿ
ಬಹುತೇಕ ಜನರು ಪಿಜ್ಜಾದ ಜೊತೆಗೆ ನೊರೆಕಾರುವ ಸೋಡ ಮತ್ತು ಇತರ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಇವುಗಳಲ್ಲಿ ಕ್ಯಾಲೊರಿ ಜಾಸ್ತಿಯಿರುತ್ತದೆ. ಪಿಜ್ಜಾದೊಂದಿಗೆ ಸೇವಿಸಬಹುದಾದ ಬೆಸ್ಟ್‌ ಪಾನೀಯವೆಂದರೆ ನೀರು. ಇದನ್ನು ಹೊರತುಪಡಿಸಿದರೆ ಸೋಡ ಹಾಕದೆ ಮಾಡಿದ ಹಣ್ಣಿನ ರಸವೂ ಉತ್ತಮ ಆಪ್ಷನ್‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net