ಬಡವರ ಬಾದಾಮಿ ಕಡಲೇಕಾಯಿ vs ಬಾದಾಮಿ: ಇವೆರಡರಲ್ಲಿ ಹೆಚ್ಚು ಪ್ರೊಟೀನ್‌ ಹೊಂದಿರುವುದು ಯಾವುದು?..Almonds Vs Peanuts

Peanut vs almond protein comparison
Peanut vs almond protein comparison
Published on

ಪ್ರಮುಖ ಮುಖ್ಯಾಂಶಗಳು

  • ​ಬಾದಾಮಿಗೆ ಹೋಲಿಸಿದರೆ ಕಡಲೇಕಾಯಿಯಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಿನ ಪ್ರೊಟೀನ್ ಇದೆ.
  • ​ಬಾದಾಮಿಯು ವಿಟಮಿನ್ ಇ, ಫೈಬರ್ ಮತ್ತು ಹೃದಯಕ್ಕೆ ಹಿತಕರವಾದ ಕೊಬ್ಬನ್ನು ಹೊಂದಿದೆ.
  • ​ಕಡಲೇಕಾಯಿ ಆರ್ಥಿಕವಾಗಿ ಬಜೆಟ್ ಸ್ನೇಹಿಯಾಗಿದ್ದರೆ, ಬಾದಾಮಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಹೆಚ್ಚು ಸಹಕಾರಿ.
Peanut vs almond protein comparison: ಕಡಲೆ ಕಾಯಿಯನ್ನು ಬಡವರ ಬಾದಾಮಿ ಎನ್ನಲಾಗುತ್ತದೆ.  ದುಬಾರಿ ಹಣಕ್ಕೆ ಮಾರಾಟವಾಗುವ ಬಾದಾಮಿಯಷ್ಟೇ ಇದು ಪ್ರೋಟಿನ್​ವುಳ್ಳದ್ದು ಎನ್ನುವುದು ಹಿರಿಯರ ವಾದ. ಸ್ನಾಯುಗಳ ದುರಸ್ತಿ, ಹಾರ್ಮೋನು ಉತ್ಪಾದನೆ, ರೋಗನಿರೋಧ ಶಕ್ತಿ, ಕೂದಲಿನ ಬೆಳವಣಿಗೆ, ಚರ್ಪದ ಕಾಂತಿಗೆ ಪ್ರೋಟಿನ್​ ಅತ್ಯಗತ್ಯ. ಸಸ್ಯಾಹಾರಿಗಳಿಗೆ ಬಾದಾಮಿ ಮತ್ತು ಕಡಲೇಕಾಯಿ ಪ್ರೊಟೀನ್ ಪಡೆಯಲು ಅತ್ಯುತ್ತಮ ಆಯ್ಕೆ.  ಆದರೆ, ಇವೆರಡರಲ್ಲಿ ಹೆಚ್ಚು ಪ್ರೋಟೀನ್​ ಹೊಂದಿರೋದು ಯಾವುದು ಆರೋಗ್ಯಕ್ಕೆ ಉತ್ತಮ ಯಾವುದು ಎಂಬುದಕ್ಕೆ ಮಾಹಿತಿ ಇಲ್ಲಿದೆ

ಯಾವುದರಲ್ಲಿ ಹೆಚ್ಚು ಪ್ರೋಟೀನ್​ ಇದೆ?

 ಬಾದಾಮಿ ಮತ್ತು ಕಡಲೆಕಾಯಿ ಎರಡನ್ನು ತುಲನೆ ಮಾಡಿ ನೋಡಿದಾಗ  ಪ್ರೊಟೀನ್ ಪ್ರಮಾಣವನ್ನು ಬಾದಾಮಿಗಿಂತ ಕಡಲೇಕಾಯಿ  ಹೊಂದಿದೆ. ಬಾದಾಮಿಗಿಂತ ಸುಮಾರು 15% ರಿಂದ 20% ರಷ್ಟು ಹೆಚ್ಚಿನ ಪ್ರೊಟೀನ್ ಇರುತ್ತದೆ.ಕಡಲೇ ಕಾಯಿಯಲ್ಲಿ 25ರಿಂದ 25 ಗ್ರಾಂ ಪ್ರೋಟೀನ್​ ಇದ್ದರೆ, ಬಾದಾಮಿಯಲ್ಲಿ 21 ಗ್ರಾಂ ಇದೆ  ಎನ್ನುವುದು ತಜ್ಞರು ಅಭಿಪ್ರಾಯ.  

ಬಾದಾಮಿಯಲ್ಲಿ ಏನೆಲ್ಲ ಆರೋಗ್ಯಕಾರಿ ಪ್ರಯೋಜನವಿದೆ?

ಬಾದಾಮಿಯಲ್ಲಿ ಆರೋಗ್ಯಕರ ಮೊನೊಅನ್‌ಸ್ಯಾಚುರೇಟೆಡ್ ಕೊಬ್ಬು, ನಾರಿನಂಶ  ವಿಟಮಿನ್​ ಇ, ಮೆಗ್ನೀಶಿಯಂ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್​​ ಕಡಿಮೆ ಮಾಡುತ್ತದೆ. ಆ ಮೂಲಕ ಹೃದಯ ಕಾಯಿಲೆಗಳ ಅಪಾಯವನ್ನು ತಡೆಯುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಬಾದಾಮಿಯನ್ನು ಹಸಿಯಾಗಿ, ಹುರಿದು, ಹಾಲಿನ ರೂಪದಲ್ಲಿ ಅಥವಾ ಆಲ್ಮಂಡ್ ಬಟರ್ ರೂಪದಲ್ಲಿ ಸುಲಭವಾಗಿ ಸೇವಿಸಬಹುದು.

ಕಡಲೇಕಾಯಿಯಲ್ಲಿ ಏನಿದೆ?

ಕಡಲೇಕಾಯಿಯಲ್ಲಿ ಆರೋಗ್ಯಕರ ಕೊಬ್ಬು, ನಿಯಾಸಿನ್, ಫೋಲೇಟ್ ಮತ್ತು ವಿಟಮಿನ್ ಇ ಇರುತ್ತದೆ. ಇದಲ್ಲದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ದೇಹಕ್ಕೆ ಪ್ರಯೋಜನಕಾರಿ​. ಬಾದಾಮಿಗೆ ಹೋಲಿಸಿದರೆ ಕಡಲೆಕಾಯಿಯ ಬೆಲೆ ಕಡಿಮೆ. ಹೀಗಾಗಿ ಇದನ್ನು ಬಡವರ ಬಾದಾಮಿ ಎನ್ನಲಾಗುತ್ತಿತ್ತು

ಹೀಗೆ ತಿನ್ನಿ

  • ಬೀಜಗಳಲ್ಲಿ ಕ್ಯಾಲೋರಿ ಇರುವ ಕಾರಣ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಮಿತವಾಗಿ ಸೇವಿಸಿ
  •  ಹಸಿ ಅಥವಾ ಒಣಗಿಸಿ ಹುರಿದ ಬಾದಾಮಿ ಅಥವಾ ಕಡಲೇಕಾಯಿ ತಿನ್ನೋದೆ ಉತ್ತಮ
  • ಮೊಸರು ಅಥವಾ ಹಣ್ಣುಗಳೊಂದಿಗೆ  ತಿನ್ನುವುದು ಆರೋಗ್ಯಕ್ಕೆ ಪ್ರಯೋಜನ

ಯಾವುದು ಬೆಸ್ಟ್​ ?

 ಪ್ರೊಟೀನ್ ವಿಷಯದಲ್ಲಿ ಕಡಲೇಕಾಯಿ ಮೇಲುಗೈ ಸಾಧಿಸಿದರೆ, ವಿಟಮಿನ್ ಇ ಮತ್ತು ಫೈಬರ್ ವಿಷಯದಲ್ಲಿ ಬಾದಾಮಿ ಉತ್ತಮವಾಗಿದೆ. ನಿಮ್ಮ ಬಜೆಟ್ ಮತ್ತು ಆರೋಗ್ಯದ ಅಗತ್ಯಕ್ಕೆ ಅನುಗುಣವಾಗಿ ಎರಡನ್ನು ಮಿತವಾಗಿ ಸೇವಿಸಬಹುದಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net