ಪೋಷಕರೇ ಎಚ್ಚರ! ಈ 4 ಗುಣಗಳಿಲ್ಲದೆ, ನಿಮ್ಮ ಮಕ್ಕಳ ಪ್ರಗತಿ ಸಂಪೂರ್ಣವಾಗುವುದಿಲ್ಲ| Parents tips

untitled-design-2025-09-17t155601323-68ca8cc60f198
Published on

Parents tips: ಪ್ರತಿಯೊಂದು ಪಾಲಕರು ತಮ್ಮ ಮಗುವಿನ ಅಧ್ಯಯನದ ಜೊತೆಗೆ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಹಾಗೆಯೇ ಇವರಿಬ್ಬರ ಭಾಂದವ್ಯವು ಪರಸ್ಪರ ಗೌರವ, ಸಂವಹನ ಮತ್ತು ವಿಶ್ವಾಸದಿಂದ ಕೂಡಿರಬೇಕು. ಪಾಲಕರು ಮಕ್ಕಳ ಆಸಕ್ತಿಗಳನ್ನು ಗುರುತಿಸಿ, ಸಮಯ ಕಳೆಯಬೇಕು. ಹಾಗೆಯೇ ಮಕ್ಕಳು ಸಹ ಪಾಲಕರ ಅನುಭವವನ್ನು ಗೌರವಿಸಬೇಕು. ತಾಳ್ಮೆಯಿಂದ ಕೇಳುವುದು, ಪ್ರೀತಿಯಿಂದ ಮಾತನಾಡುವುದರಿಂದ ಸಂಬಂಧಗಳು ಬಲಪಡಿಸುತ್ತವೆ. ಈ ರೀತಿಯ ಒಗ್ಗಟ್ಟಿನಿಂದ ಕುಟುಂಬದ ಸಂತೋಷ ಕ್ಷಣಗಳು ಹೆಚ್ಚಾಗುತ್ತವೆ. ಇನ್ನು ಉತ್ತಮ ಮೌಲ್ಯದೊಂದಿಗೆ ಮಕ್ಕಳನ್ನು ಬೆಳೆಸುವ ಪಾಲಕರು ಈ ನಾಲ್ಕು ಪ್ರಮುಖ ಸಲಹೆಗಳನ್ನು ಪಡೆಯಿರಿ.

1. ಮಕ್ಕಳಲ್ಲಿ ಆತ್ಮವಿಶ್ವಾಸ ಬೇರೂರುವಂತೆ ಮಾಡಿ

ಪ್ರತಿಯೊಂದು ಮಗುವು ತನ್ನ ಮೇಲೆ ನಂಬಿಕೆ ಇಡಲು ಮೊದಲು ಪ್ರಾರಂಭಿಸಬೇಕು. ಹೀಗೆ ಕಲಿತರೆ, ಯಾವುದೇ ಸವಾಲನ್ನು ಎದುರಿಸಬಹುದು. ಪಾಲಕರು ತಮ್ಮ ಮಕ್ಕಳ ಪ್ರಯತ್ನಗಳನ್ನು ಬೆಂಬಲಿಸಿ. ನಿನ್ನಿಂದ ಎಲ್ಲವೂ ಸಾಧ್ಯ ಎಂದು ಪ್ರೇರೇಪಿಸಿ ಇದರಿಂದ ಅವರ ಆತ್ಮವಿಶ್ವಾಸ ಬಲಪಡಿಸುತ್ತದೆ.

2. ಒಳ್ಳೆಯ ನಡವಳಿಕೆ ಪ್ರೇರೇಪಿಸಿ

ಯಾವುದೇ ಮಕ್ಕಳಿಗೆ ಚಿಕ್ಕವರಿದ್ದಾಗಲೇ ಎಲ್ಲಾ ಸೂಕ್ಷ್ಮ ನಡವಳಿಕೆಗಳನ್ನು ತಿಳಿಸಿಕೊಡಬೇಕು. ಮಗುವು ಹಿರಿಯರನ್ನು ಗೌರವಿಸಲು, ಕಿರಿಯರನ್ನು ಪ್ರೀತಿಸಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಕಲಿತರೆ, ಅವನ ವ್ಯಕ್ತಿತ್ವ ಸುಧಾರಿಸುತ್ತದೆ ಮತ್ತು ಸಮಾಜದಲ್ಲಿ ಅವನಿಗೆ ಗೌರವ ಸಿಗುತ್ತದೆ. ಹಾಗಾಗಿ ತಂದೆ- ತಾಯಿಗಳು ಮಕ್ಕಳ ಈ ನಡವಳಿಕೆಯ ಬಗ್ಗೆ ಹೆಚ್ಚು ಒತ್ತುಕೊಡಬೇಕು.

3. ಸಮಯದ ಪ್ರಾಮುಖ್ಯತೆ ತಿಳಿಸಿ

ಯಾವುದೇ ವ್ಯಕ್ತಿಗೆ ಸಮಯ ಎಷ್ಟು ಮುಖ್ಯ ಎಂದು ತಿಳಿದಿರಬೇಕು. ಇಲ್ಲಿ ವ್ಯಕ್ತಿಯು ಕಳೆದು ಹೋದ ಸಮಯದ ಬಗ್ಗೆ ಯೋಚನೆ ಮಾಡದೇ, ಈಗಿರುವ ಸಮಯದ ಬಗ್ಗೆ ಹೆಚ್ಚು ಗಮನ ಕೊಡುವುದನ್ನು ಕಲಿತಿರಬೇಕು. ಹಾಗೆಯೇ, ತಮ್ಮ ಮಕ್ಕಳಿಗೆ ಸಮಯದ ಮಹತ್ವದ ಬಗ್ಗೆ ಮಾಹಿತಿ ನೀಡಬೇಕು. ಅದೇ ರೀತಿ ಅಧ್ಯಯನ, ಕ್ರೀಡೆ ಮತ್ತು ವಿಶ್ರಾಂತಿಯ ನಡುವೆ ಸಮತೋಲನವನ್ನು ಸೃಷ್ಟಿಸುವುದು ಮಕ್ಕಳಲ್ಲಿ ಶಿಸ್ತನ್ನು ಪ್ರೇರೇಪಿಸಲು ಸಹಾಯವಾಗುತ್ತದೆ. ಹಾಗೆಯೇ ಅವರ ಯಶಸ್ಸಿಗೆ ಅಡಿಪಾಯ ಹಾಕುತ್ತದೆ.

4. ಸಮಸ್ಯೆ ಪರಿಹರಿಸುವ ಬಗ್ಗೆ ತಿಳಿಸಿಕೊಡಬೇಕು

ಜೀವನದಲ್ಲಿ ಎಂತಹದೇ ಕಷ್ಟಗಳು ಬಂದರೂ ಕೂಡ ಅವುಗಳನ್ನು ಮುನ್ನುಗ್ಗುವುದನ್ನು ಪ್ರತಿಯೊಂದು ಪಾಲಕರು ಸಹ ತಿಳಿಸಿಕೊಡಬೇಕು. ಹಾಗೆಯೇ, ಸಮಸ್ಯೆಗಳನ್ನು ಪರಿಹರಿಸುವುದು ಒಂದು ನಿಜವಾದ ಕಲೆ. ಇದನ್ನು ಯಾವುದೇ ಮಕ್ಕಳು ತಮ್ಮ ಜೀವನದಲ್ಲಿ ಅವರ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಕಂಡುಕೊಳ್ಳಲು ಕಲಿಯುತ್ತಾರೆ. (ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net