

ಪನೀರ್ನಿಂದ ಮಾಡುವ ಅಡುಗೆಗಳೆಂದರೆ ಮಕ್ಕಳಿಗೂ ತುಂಬಾ ಇಷ್ಟ. ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸ ಬಹುದಾದ ಕೆಲ ಪನೀರ್ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾನು: ಪಾಲಕ್ ಸೊಪ್ಪು 200 ಗ್ರಾಮ್ ಪನೀರ್ 1 ಈರುಳ್ಳಿ 1 ಟೊಮ್ಯಾಟೋ 2 ಲವಂಗ 1 ಚಕ್ಕೆ ಉಪ್ಪು 1 ಚಮಚ ಖಾರದ ಪುಡಿ 1/2 ಚಮಚ ಗರಂ ಮಸಾಲ.
ಮಾಡುವ ವಿಧಾನ : ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ನಂತರ ಹೆಚ್ಚಿದ ಈರುಳ್ಳಿ ಹಾಕಿ ಫ್ರೖೆ ಮಾಡಿ ನಂತರ ಟೊಮ್ಯಾಟೋ ಹಾಕಿ ಬೇಯಿಸಿ, ಪಾಲಕ್ ಸೊಪ್ಪನ್ನು ಹಾಕಿ ಸೊಪ್ಪು ಬಾಡುವವರೆಗೆ ಫ್ರೖೆ ಮಾಡಿ, ಲವಂಗ ಚಕ್ಕೆ ಕೂಡ ಸೇರಿಸಿ ಪಕ್ಕಕ್ಕಿಡಿ. ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಪುನಃ ಬಾಣಲೆಗೆ ಈ ಮಿಶ್ರಣವನ್ನು ಹಾಕಿ ಬಿಸಿಯಾದ ನಂತರ ಚೌಕಾಕಾರಕ್ಕೆ ತುಂಡು ಮಾಡಿದ ಪನೀರ್ ತುಂಡುಗಳನ್ನು ಹಾಕಿ 10 ನಿಮಿಷಗಳ ಕಾಲ ಬೇಯಿಸಿದಾಗ ಮಿಶ್ರಣ ಹಾಗೂ ಪನೀರ್ ಬೆರೆತಾಗ, ಉಪ್ಪು, ಖಾರದ ಪುಡಿ, ಗರಂಮಸಾಲ ಹಾಕಿ 5 ನಿಮಿಷ ಕುದಿಸಿರಿ.
ಸುಪ್ರೀತಾ ವೆಂಕಟ್ ಬೆಂಗಳೂರು