

ಎದೆನೋವಿನಿಂದಾಗಿ ನುರಿತ ವೈದ್ಯರನ್ನು ಕಾಣಲು ಬರುವ ಹತ್ತು ಜನರಲ್ಲಿ ಎಂಟು ಜನರಿಗೆ ನೋವು ಹೃದಯಾಘಾತದಿಂದ ಉಂಟಾಗಿರುವುದಿಲ್ಲ! ಆದರೆ ಪ್ರತಿಯೊಬ್ಬರೂ ಹೃದಯಾಘಾತದ ಎದೆನೋವೆಂದೇ ಅಂದಾಜಿಸಿ ಗಾಬರಿಗೊಳಗಾಗುತ್ತಾರೆ. ಹೃದಯಾಘಾತ ಅಲ್ಲದ ಎದೆನೋವು (Non-Cardiac Chest Pain, WCCP) ಸಾಮಾನ್ಯ. ಇದು ಹೃದಯದಿಂದ ಬಂದದ್ದಲ್ಲ.
ಕಾರಣಗಳು: ಎದೆಗೂಡಿನಲ್ಲಿ (Chest) ಹೃದಯವಲ್ಲದೆ ಅನ್ನ ನಾಳ, ಹೃದಯದ ಮೇಲ್ಪದರ, ಎದೆಯ ಮಾಂಸಖಂಡಗಳು, ಸ್ತನಗಳು, ಎಲುಬು ಮುಂತಾದ ಇತರ
ಸ್ತನದ ನೋವು (Breast Pain): ಎದೆಯ ಎಡ-ಬಲಭಾಗದ ಸ್ತನದ ಬುಡದಲ್ಲಿನ (Beneath Breast) ಈ ನೋವು ಹೆಣ್ಣುಮಕ್ಕಳಲ್ಲಿ ಕಂಡುಬರುವುದು. ಮುಟ್ಟಿನ ವೇಳೆ ಹಾಮೋನ್ ಏರುಪೇರಿನಿಂದಾಗುವ ಈ ನೋವು ಯುವತಿಯರಲ್ಲಿ ಸಾಮಾನ್ಯ. ನೋವು ನಿವಾರಕ ಗುಳಿಗೆಗಳಿಂದ ಇದು ಗುಣವಾಗುವುದು.
ಎಲುಬುನೋವು (Bone pain): ಎದೆಗೂಡು ಮಧ್ಯದಲ್ಲಿ ದೊಡ್ಡ ಸ್ಟರ್ನಮ್ (Sternum) ಎಂಬ ಎಲುಬು ಗೂಡಿನ ಪಕ್ಕೆಲುಬುಗಳಿಗೆ (Ribs) ಜೋಡಣೆಯಾಗುತ್ತದೆ. ಈ ಸ್ಥಳದಲ್ಲಿ ನೋವು ಸಾಮಾನ್ಯ (Costochondritis). ಇದು ಎದೆಯ ಮಧ್ಯಭಾಗದಲ್ಲಿ ಕಂಡುಬಂದು, ಆ ಸ್ಥಳದಲ್ಲಿ ಒತ್ತಿದಾಗ (Pressure) ನೋವು ತೀವ್ರವಾಗುವುದು. ಇದು ಚಾಕುವಿನಿಂದ ಚುಚ್ಚಿದಂತಹ ನೋವು. ಕೈಗೆ ಹರಿಯುವುದಿಲ್ಲ. ನೋವು ನಿವಾರಕ ಔಷಧ, ಕ್ರೀಮ್ ಹಚ್ಚುವುದರಿಂದ ಕಡಿಮೆ ಆಗುವುದು. ಕೆಮ್ಮಿದಾಗ ಇದು ಹೆಚ್ಚುವುದು. ಹೊಟ್ಟೆಯ ಹುಣ್ಣು, ಗ್ಯಾಸ್ ಕೂಡ ಎದೆನೋವು ತರುತ್ತದೆ.
ಮಾನಸಿಕ ಒತ್ತಡ, ಖಿನ್ನತೆ, ಆತಂಕ (Stress, Depression and Anxiety): ಇವು ಕೂಡ ಎದೆನೋವಿಗೆ ಕಾರಣವಾಗಬಹುದು. ಈ ತರಹದ ನೋವು ಎದೆಯ ಮಧ್ಯ ಭಾಗದಲ್ಲಿ, ಇನ್ನಿತರ ಭಾಗಗಳಲ್ಲಿ ಕೂಡ ಕಾಣಬಹುದು. ಬೆವರು ಕೂಡ ಸಾಮಾನ್ಯ. ಹೆಚ್ಚಿನ ಎದೆಬಡಿತ (Palpitations), ಗಲಿಬಿಲಿ ಕಂಡುಬರುವುದು. ಇದಕ್ಕೆ (Cardiac neurosis) ಎನ್ನುವರು.
ಮೇಲ್ಕಂಡ ಹೃದಯಾಘಾತವಲ್ಲದ ಎದೆನೋವು ದೈಹಿಕ ಶ್ರಮವಾದಾಗ ಕಂಡುಬರುವುದಿಲ್ಲ. ಹೆಚ್ಚು ದೈಹಿಕ ಶ್ರಮವಾದಾಗ ಉಂಟಾಗುವ ಎದೆಯ ಮಾಂಸಖಂಡ, ಎಲುಬುನೋವಿನ ಅನುಭವಗಳು ಹೃದಯಾಘಾತದ ನೋವಿನಂತಲ್ಲ. ಹೃದಯಾ ಘಾತದ ನೋವು ಎದೆಯ ಮಧ್ಯಭಾಗದಲ್ಲಿ ಕಂಡುಬಂದು ಕೈ, ಕುತ್ತಿಗೆ, ಬೆನ್ನು, ಹೊಟ್ಟೆಯ ಮೇಲ್ಭಾಗಕ್ಕೆ ಹರಡುವುದು ಸಾಮಾನ್ಯ. ತೀವ್ರ ಬೆವರು ಕೂಡ ಸಾಮಾನ್ಯ. ಕೆಲವೇ ಸೆಕೆಂಡುಗಳ ನೋವು ಹೃದಯಾಘಾತದ ನೋವಲ್ಲ. ಹೃದಯಾಘಾತದ ನೋವು ಎದೆಯ ಮೇಲೆ ಭಾರದ ಕಲ್ಲು ಇಟ್ಟಂತೆ. ಎದೆಯನ್ನು ಯಾರೋ ಒಳಗಿನಿಂದ ಒತ್ತಿದಂತೆ ಭಾಸವಾಗುವುದು. ಚುಚ್ಚುನೋವು (Pricking, Stabbing) ಮಾಂಸಖಂಡ, ಎಲುಬುಗಳಿಂದ ಬಂದಿರುವುದು.
ಏನೇ ಇರಲಿ, ಯಾವುದೇ ತರಹದ ಎದೆನೋವನ್ನು ಎಂದೂ ಅಲಕ್ಷಿಸಬಾರದು. ಎಲ್ಲ ಎದೆಯ ನೋವುಗಳ ಕಾರಣಗಳಲ್ಲಿ, ನೀವು ನೋಡಿದಂತೆ, ಹೃದಯಾಘಾತದ ನೋವು ಸಾಮಾನ್ಯವಲ್ಲ. ಆದರೆ, ಇದು ಗಂಭೀರವಾಗಿದ್ದು, ಗೊತ್ತುಗುರಿಯಿಲ್ಲದೆ ಮಾರಣಾಂತಿಕವಾಗಬಹುದು. (Pricking, Stabbing) ನುರಿತ ವೈದ್ಯರಿಂದ ತಪಾಸಿಸಿಕೊಂಡು, ಚಿಕಿತ್ಸೆ ತೆಗೆದುಕೊಳ್ಳಬೇಕು.