ದಿನನಿತ್ಯದ ದೈಹಿಕ ಚಟುವಟಿಕೆ, ಸರಿಯಾದ ತೂಕ, ನಿಯಮಿತ ನಿದ್ರೆ ಹಾಗೂ ಒತ್ತಡ ಕಡಿಮೆ ಮಾಡುವ ಯೋಗ ಮತ್ತು ಧ್ಯಾನ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯೋಗಾಸನಗಳಾದ ಮಲಾಸನ, ಉಪವಿಷ್ಟ ಕೋನಾಸನ, ಭರದ್ವಾಜಾಸನ, ನಾವಾಸನ, ವಿಪರೀತ ಕರಣಿ, ಮತ್ಸ್ಯಾಸನ ಹಾಗೂ ಅನುಲೋಮ ವಿಲೋಮ ಪ್ರಾಣಾಯಾಮಗಳು ಸೊಂಟ ಮತ್ತು ಕಿಬ್ಬೊಟ್ಟೆಯ ಭಾಗದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. ಇವು ನೇರವಾಗಿ ಗೆಡ್ಡೆಯನ್ನು ಕರಗಿಸದಿದ್ದರೂ, ನೋವು ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಿ, ವೈದ್ಯಕೀಯ ಚಿಕಿತ್ಸೆಗಳು ದೇಹಕ್ಕೆ ಚೆನ್ನಾಗಿ ಹಿಡಿಯುವಂತೆ ಮಾಡಲು ಪೂರಕವಾಗಿ ಕೆಲಸ ಮಾಡುತ್ತವೆ.