Relationships improve after an affair: ಅಕ್ರಮ ಸಂಬಂಧ, ಎಕ್ಸ್ಟ್ರಾ ಮೆರಿಟಲ್ ಅಫೇರ್, ವಿವಾಹೇತರ ಸಂಬಂಧ ಹೀಗೆ ನಾನಾ ರೀತಿಯಲ್ಲಿ ಕರೆಸಿಕೊಳ್ಳುವ ಈ ಪಿಡುಗು..ಸುಖವಾಗಿರುವ ದಂಪತಿಗಳ ಬದುಕಿನ್ನು ಅಲ್ಲೋಲ, ಕಲ್ಲೋಲವನ್ನಾಗಿಸಿ, ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇದರಿಂದಾಗುವ ಸಮಸ್ಯೆ ಒಂದಾ ಎರಡಾ, ಜಗಳ, ಹೊಡೆದಾಟ, ಕೊಲೆ ಅಬ್ಬಾ ಮುಂದೆ ಮದುವೆ ಮಾಡಿಕೊಳ್ಳಲು ಬಯಸುವವರು ಇದೆಲ್ಲಾ ಬೇಡವೇ ಬೇಡ ಎಂದು ಎದ್ದೋಗಬೇಕು ಅಷ್ಟು ಕೆಟ್ಟದಾಗಿ ಜೀವನವನ್ನು ನರಳಿಸುತ್ತದೆ. ಆದರೆ, ಸದ್ಯ ಸಂಶೋಧನೆಯೊಂದರಿಂದ ಸಿಕ್ಕಿರುವ ಶಾಕಿಂಗ್ ಮಾಹಿತಿ ಎಂದರೆ, ಈ ಅಪೇರ್ಗಳು, ಸಂಕಷ್ಟಗಳು ದಂಪತಿಗಳ ಬದುಕನ್ನು ಮತ್ತಷ್ಟು ಆರೋಗ್ಯಕರವಾಗಿ ಹಾಗೂ ಇಬ್ಬರ ಮಧ್ಯೆ, ಪ್ರೀತಿ ಅನ್ಯೋನ್ಯತೆ ಇನ್ನಷ್ಟು ಹೆಚ್ಚಾಗುವಂತೆ ಮಾಡುತ್ತದೆ ಎನ್ನಲಾಗಿದೆ, ಏನೀ ವರದಿ ಎನ್ನುವ ಬಗ್ಗೆ ಮಾಹಿತಿ ನೋಡೋಣ ಬನ್ನಿ.