ಆದಾಗ್ಯೂ, ಈ ಹುಣಸೆ ಬೀಜಗಳು ಕೇವಲ ನೀರಿನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಮೈಕ್ರೋಪ್ಲಾಸ್ಟಿಕ್ ನಿರ್ಮೂಲನೆಗೆ ಸಹಕಾರಿಯೇ ಹೊರತು, ಮನುಷ್ಯರು ಈ ಬೀಜಗಳನ್ನು ಸೇವಿಸುವುದರಿಂದ ದೇಹದ ಒಳಗಿರುವ ಪ್ಲಾಸ್ಟಿಕ್ ಅಂಶಗಳು ಹೊರಹೋಗುತ್ತವೆ ಎಂಬ ಬಗ್ಗೆ ಪ್ರಸ್ತುತ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅಂದರೆ, ಹುಣಸೆ ಬೀಜಗಳು ನೀರಿನಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುವ 'ನೈಸರ್ಗಿಕ ಶೋಧಕ'ವಾಗಿ ಕೆಲಸ ಮಾಡುತ್ತವೆಯೇ ಹೊರತು, ಮಾನವ ದೇಹದ ಒಳಗಿನ ಪ್ಲಾಸ್ಟಿಕ್ ಅನ್ನು ಹೊರಹಾಕುವ ಔಷಧಿಯಾಗಿ ಅಲ್ಲ ಎಂಬುದು ಗಮನಾರ್ಹ.