ಮಲಬದ್ಧತೆಯಿಂದ ನೈಸರ್ಗಿಕವಾಗಿ ಮುಕ್ತಿ ಪಡೆದುಕೊಳ್ಳೋದು ತಡಕಾಡ್ತಿದ್ದೀರಾ?; ಈ ಸುಲಭ ಟ್ರಿಕ್ಸ್​ ಪಾಲಿಸಿ..Constipation Relief

Constipation Home Remedies
Constipation Home Remedies
Published on

ಪ್ರಮುಖ ಮುಖ್ಯಾಂಶಗಳು

  • ಮಲಬದ್ಧತೆಯಿಂದ ನೈಸರ್ಗಿಕವಾಗಿ ಮುಕ್ತಿ ಪಡೆದುಕೊಳ್ಳೋದು ಹೇಗೆ?.
  • ಶುಂಠಿ ನೀರು, ನಿಂಬೆ ರಸ ಹಿಂಡಿದ ನೀರು ಮಲಬದ್ಧತೆಗೆ ಮದ್ದು.
  • ವ್ಯಾಯಾಮ, ಹೆಚ್ಚು ನೀರು ಕುಡಿಯುವುದು ಉತ್ತಮ ಆರೋಗ್ಯಕ್ಕೆ ಮದ್ದು.
Constipation Home Remedies: ಆಧುನಿಕ ಜೀವನಶೈಲಿ, ಆಹಾರ ಪದ್ಧತಿ ಇತ್ತೀಚಿನ ದಿನದಲ್ಲಿ ತರಹೇವಾರಿ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಇದರಲ್ಲಿ ಮಲಬದ್ಧತೆಯೂ ಒಂದು. ದಿನಬೆಳಗಾದ್ರೆ ಸಲೀಸಾಗಿ   ವಾಶ್​ರೂಂಗೆ ತೆರಳೋದೆ ಸಂಕಟವಾಗುತ್ತದೆ.  ಹೊಟ್ಟೆ ಖಾಲಿಯಾಗದೆ ಇದ್ದರೇ ದಿನವಿಡೀ ಹೊಟ್ಟೆ ಉಬ್ಬರ, ಅಸಹನೆ, ಗ್ಯಾಸ್ಟ್ರಿಕ್‌, ಆಯಾಸ, ಹಸಿವು ಕಡಿಮೆಯಾಗುವಂತಾಗುತ್ತದೆ. 
ಹೀಗಾಗಿ ಈ ಮಲಬದ್ಧತೆ ಕಡಿಮೆ ಮಾಡಿಕೊಳ್ಳಲು ಅಥವಾ ನೈಸರ್ಗಿಕವಾಗಿ ದೂರ ಮಾಡಿಕೊಳ್ಳಲು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಇದಕ್ಕೆ ಔಷಧಿಯ ಅಗತ್ಯವಿಲ್ಲ. ಇನ್ಮುಂದೆ ನಿಮ್ಮ ಜೀವನಶೈಲಿಯಲ್ಲಾಗಬೇಕಾದ ಬದಲಾವಣೆಗಳೇನು ಎನ್ನುವ  ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ. 

ಶುಂಠಿ ಚಹಾ ಅಥವಾ ನೀರು

ನಿತ್ಯ  ಖಾಲಿ ಹೊಟ್ಟೆಯಲ್ಲಿ ಶುಂಠಿ ನೀರು ಅಥವಾ ಶುಂಠಿ ಚಹಾವನ್ನು ಕುಡಿಯುವುದು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ  ಹೊಟ್ಟೆಯಲ್ಲಿ ಕಾಣಿಸಿಕೊಂಡಿರುವ ಉರಿಯೂತವನ್ನು ಕಡಿಮೆ ಮಾಡುತ್ತದೆ.  ಇಷ್ಟೇ ಅಲ್ಲದೆ ನಿಮ್ಮಲ್ಲಿ ಕಾಡುವ ಹೊಟ್ಟೆ ಉಬ್ಬವುದು, ಗ್ಯಾಸ್ಟ್ರಿಕ್​​ ಸಮಸ್ಯೆಯನ್ನು ನಿವಾರಿಸುತ್ತದೆ. 

ನೀರು, ತ್ರಿಫಲಾ ಚೂರ್ಣ

ಬೆಳಗ್ಗೆದ್ದು ಬಿಸಿ ನೀರು ಕಾಯಿಸಿಕೊಂಡು ಕುಡಿಯುವುದು ಅಭ್ಯಾಸ. ಇನ್ಮುಂದೆ ಇದರೊಂದಿಗೆ ರಾತ್ರಿ ಸಮಯದಲ್ಲಿ  ವೈದ್ಯರ ಸಲಹೆಯಂತೆ ಒಂದು ಟೀ ಸ್ಪೂನ್ ತ್ರಿಫಲಾ ಚೂರ್ಣವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಬಹುದು. ಆಯುರ್ವೇದದಲ್ಲಿ ಜೀರ್ಣಾಂಗ ಉತ್ತಮ ಕೆಲಸ ಮಾಡಲಿ ಎಂದಿರುವುದೇ ತ್ರಿಫಲಾ ಚೂರ್ಣ.  ಇದು ಕರುಳಿನ ಆರೋಗ್ಯವನ್ನು ಸುರಕ್ಷಿತವಾಗಿಡುತ್ತದೆ. 

ಬಿಸಿ ನೀರು, ನಿಂಬೆ ರಸ

ನಿತ್ಯ ಬೆಳಗೆದ್ದು ಬಿಸಿ ನೀರು ಕಾಯಿಸಿ ಅದಕ್ಕೆ ಕೊಂಚ ನಿಂಬೆ ರಸವನ್ನು ಹಿಂಡಿ ಕುಡಿಯಿರಿ. ಇದರಲ್ಲಿರುವ ಸಿಟ್ರಸ್ ಅಂಶವು ನಿಮ್ಮ ಜೀರ್ಣಕ್ರಿಯೆ ಚುರುಕಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲದೇ ಕರುಳಿನ ಚಲನೆಯನ್ನು ಸುಧಾರಿಸಲು ನೆರವಾಗಬಹುದು.  ವಿಟಮಿನ್ ಸಿ ನಿಮ್ಮ ಕರುಳನ್ನು ಸೇರಿ, ಹೊಟ್ಟೆಯ ಆಮ್ಲ ಸಮತೋಲನವಾಗಿ ಇಡಲು ಸಹಾಯ ಮಾಡುತ್ತದೆ. 

ಫೈಬರ್​ ಅಂಶ ಮುಖ್ಯ

ದೇಹದಲ್ಲಿ ಫೈಬರ್​ ಕೊರತೆ ಕಾಣಿಸಿಕೊಂಡಾಗ ಮಲಬದ್ಧತೆ ಕಾರಣವಾಗುತ್ತದೆ. ಈ ಸಮಯದಲ್ಲಿ ಬಾಳೆ ಹಣ್ಣು, ಸೀಬೆ ಹಣ್ಣು, ಓಟ್ಸ್, ಸೇಬು ತಿನ್ನಿ.​ ನಾನಾ ರೀತಿಯ ಧಾನ್ಯಗಳು, ಹಸಿರು ಸೊಪ್ಪು, ಬೀನ್ಸ್​ ಹಾಗೂ ಬೇಳೆ ಕಾಳು, ರಾತ್ರಿ ಒಣ ದ್ರಾಕ್ಷಿ ನೆನಸಿಟ್ಟು ತಿನ್ನುವುದು ಮಾಡಿ.   ತರಕಾರಿಗಳು, ಕ್ಯಾರೆಟ್ ಮತ್ತು ಕೋಸುಗಡ್ಡೆ ತಿನ್ನುವುದನ್ನು ನಿಮ್ಮ ಲಿಸ್ಟ್​​ನಲ್ಲಿ ಇಟ್ಟುಕೊಳ್ಳಿ. ಜೊತೆಗೆ ಅಂಜೂರದಂತಹ ಡ್ರೈ ಫ್ರೂಟ್​ ಸೇವಿಸೋದ್ರಿಂದಾಗಿ ಇದು ಮಲವನ್ನು ಮೃದುವನ್ನಾಗಿಸುತ್ತದೆ. ಸರಾಗವಾಗಿ ಹೊಟ್ಟೆಯಿಂದ ಹೊರಬರುವಂತೆ ಮಾಡುತ್ತದೆ ಎನ್ನುತ್ತಾರೆ ತಜ್ಞರು. 

ವ್ಯಾಯಾಮ, ನೀರು ಕುಡಿಯೋದು ಮುಖ್ಯ

ನಿತ್ಯ ಕುಳಿತೇ ಕೆಲಸ ಮಾಡೋದಲ್ಲ.  20-30 ನಿಮಿಷ ವ್ಯಾಯಾಮ ಮಾಡಿ  ದೇಹವನ್ನು ದಂಡಿಸೋದು ಮುಖ್ಯ. ದಿನಕ್ಕೆ 2ಶ್ರೀ-3 ಲೀಟರ್ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ನೆನಪಿಲ್ಲದಿದ್ದರೆ ಇತ್ತೀಚೆಗೆ ವೈರಲ್ ಆಗುತ್ತಿರುವ ವಾಟರ್​ ಬೆಲ್​ನಂತಹ ಪದ್ಧತಿಯನ್ಮು ಅನುಸರಿಸಿ.

ನಿತ್ಯ ಹೀಗೆ ಮಾಡಿ

  • ಕುಳಿತೇ ಕೆಲಸ ಮಾಡುವವರು ನಿತ್ಯ ನಿಮ್ಮ ಡೆಸ್ಕ್​ನಿಂದ ಎದ್ದು ಒಂದೈದು ನಿಮಿಷ ವಾಕ್​ ಮಾಡಿ
  • ಒಂದೇ ಸಮಯಕ್ಕೆ ನಿತ್ಯ ಆಹಾರ ಸೇವಿಸೋದನ್ನು ರೂಢಿ ಮಾಡಿಕೊಳ್ಳಿ
  • ಬೆಳಗ್ಗಿನ ತಿಂಡಿ ಸೇವಿಸದೆ ಇರುವುದುನ್ನು ತಪ್ಪಿಸಬೇಡಿ ಲೈಟ್​ ಆದ ಫುಡ್​ ಅನ್ನಾದರೂ ಸೇವಿಸುವ ಅಭ್ಯಾಸವಿರಲಿ
  • ಶೌಚಕ್ಕೆ ಹೋಗಬೇಕು ಎನ್ನುವಾಗ ತಡೆಯುವುದನ್ನು ಕಡಿಮೆ ಮಾಡಿಕೊಳ್ಳಿ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net