National Mango Day 2026: ಕೂದಲು, ಚರ್ಮ ಸೇರಿದಂತೆ ಮಾವಿನಿಂದ ಸಿಗುತ್ತೆ ಈ 5 ಆರೋಗ್ಯ ಪ್ರಯೋಜನ

National Mango Day 2026
National Mango Day 2026
Published on

ಪ್ರಮುಖ ಮುಖ್ಯಾಂಶಗಳು

  • ಇಂದು ನ್ಯಾಶನಲ್​ ಮಾವಿನ ಹಣ್ಣುಗಳ ದಿನ ಇದರಿಂದ ಎಷ್ಟೆಲ್ಲ ಆರೋಗ್ಯ ಪ್ರಯೋಜನ ಸಿಗತ್ತೆ ಗೊತ್ತಾ?.
  • ಜೀರ್ಣಾಂಗ ವ್ಯವಸ್ಥೆ ಸೇರಿದಂತೆ ನಾನಾ ರೀತಿಯಲ್ಲಿ ಆರೋಗ್ಯಕ್ಕೆ ಸಹಕಾರಿ ಈ ಮಾವಿನ ಹಣ್ಣು.
  • ಮಾವಿನ ಹಣ್ಣಿನಲ್ಲಿರುವ ಕಡಿಮೆ ಕ್ಯಾಲೋರಿ ಜೀರ್ಣಕ್ರಿಯೆ ನಿಧಾನಗೊಳಿಸುವ ಕಾರಣ ಜಂಕ್​ ಫುಡ್​ ತಿನ್ನುವುದು ಕಡಿಮೆಯಾಗುತ್ತದೆ.
National Mango Day 2026: ಭಾರತದಲ್ಲಿ ಬೇಸಿಗೆ ಕಾಲದಲ್ಲಿ ಬಿಡುವ ಮಾವಿನ ಹಣ್ಣುಗಳು ಕೇವಲ ಫಲವಲ್ಲ ಅದೊಂದು ಭಾವನಾತ್ಮಕ ಪದಾರ್ಥ. ಅವು ಬಾಲ್ಯದ ನೆನಪುಗಳು, ಕುಟುಂಬ ಕೂಟಗಳು. ರಜಾ ಸಮಯದಲ್ಲಿ ಊರುಗಳಲ್ಲಿ ನಾನಾ ರೀತಿಯ ಮಾವನ್ನು ಅಜ್ಜ ಅಜ್ಜಿಯರ ಜೊತೆ ಸವಿಯೋದೆ ಒಂದು ಹುಮ್ಮಸ್ಸು. ಅಲ್ಫೋನ್ಸೊ ಮಾವಿನಹಣ್ಣಿನಿಂದ ಮನೆಯಲ್ಲಿ ತಯಾರಿಸಿದ ಆಮ್ ಪನ್ನಾವರೆಗೆ, ಮಾವಿನ ಋತುವು ಶಾಶ್ವತವಾಗಿ ಉಳಿಯುವ ಸುವಾಸನೆ ಮತ್ತು ನೆನಪುಗಳೊಂದಿಗೆ ಒಟ್ಟುಗೂಡಿಸುತ್ತದೆ. ಇಂದು ಮಾವಿನ ಹಣ್ಣುಗಳ ದಿನ 2026. ಈ ದಿನ ಈ ಹಣ್ಣಿನಿಂದಾಗುವ ಆರೋಗ್ಯಕಾರಿ ಪ್ರಯೋಜನದ ಬಗ್ಗೆ ತಿಳಿದುಕೊಳ್ಳೋಣ.

ಮಾವಿನ ಹಣ್ಣಿನ ದಿನದ ಮಹತ್ವವೇನು?

ಮಾವಿನ ಹಣ್ಣನ್ನು ಭಾರತೀಯ ಸಾಂಸ್ಕೃತಿ ಸಮೃದ್ಧಿ ಸಂಕೇತ ಎಂದು ಪರಿಗಣಿಸಲಾಗಿದೆ. ಆ ಕಾರಣದಿಂದಾಗಿ 2005 ಜುಲೈ 22ರಿಂದ ಈ ದಿನವನ್ನು ರಾಷ್ಟ್ರೀಯ ಮಾವಿನ ಹಣ್ಣಿನ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನದಂದು ಹಣ್ಣಿನ ಮಹತ್ವ ಸೇರಿದಂತೆ ನಾನಾ ವಿಚಾರಗಳನ್ನು ತಿಳಿಸಿಕೊಡಲಾಗುತ್ತದೆ.

ಮಾವಿನಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು

ಮಾವಿನ ಹಣ್ಣಿನಲ್ಲಿ ಸಮೃದ್ಧವಾಗಿರುವ ನಾರಿನಾಂಶವಿದ್ದು ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತೆ. ನಾರಿನಾಂಶವು ಮಲವನ್ನು ಮೃದುಗೊಳಿಸಿ, ಮಲಬದ್ಧತೆ ಮತ್ತು ಹೊಟ್ಟೆಯುಬ್ಬರದಂತಹ ಸಮಸ್ಯೆಯಿಂದ ದೂರವಿಡಲು ಸಹಾಯ ಮಾಡುತ್ತದೆ. ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಸೂಕ್ತ ಪೋಷಣೆ ನೀಡುತ್ತದೆ.

ತೂಕ ಇಳಿಕೆಗೆ ಸಹಕಾರಿ

ಸಾಮಾನ್ಯವಾಗಿ ಕೆಲವೊಂದು ಸಿಹಿ ಅಂಶವಿರುವ ಹಣ್ಣನ್ನು ತಿಂದರೂ ತೂಕ ಹಾಗೂ ಸಕ್ಕರೆ ಮಟ್ಟ ಹೆಚ್ಚಾಗುತ್ತೆ ಎಂದು ಹಲವರು ಹಣ್ಣು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ, ಮಾವಿನಲ್ಲಿರುವ ಫೈಬರ್ ಹೊಟ್ಟೆ ಬೇಗನೆ ತುಂಬಿರುವಂತೆ ಮಾಡುತ್ತದೆ. ಅಲ್ಲದೆ, ಇದರಲ್ಲಿ ಕಡಿಮೆ ಕ್ಯಾಲೋರಿ ಇರುವ ಕಾರಣ ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಹೆಚ್ಚು ಹಸಿವಾಗೋದಿಲ್ಲ, ಅನಗತ್ಯ ಜಂಕ್​ ಫುಡ್​ ತಿನ್ನುವ ಪ್ರಮೇಯವೂ ಇರೋದಿಲ್ಲ. ತೂಕ ಹೆಚ್ಚಾಗುವ ಬಗ್ಗೆ ಗೊಂದಲವೂ ಇರೋದಿಲ್ಲ.

ಚರ್ಮ ಮತ್ತು ಕೇಶ ಸೌಂದರ್ಯಕ್ಕೆ ಮದ್ದು

ಮಾವಿನಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಅತ್ಯಧಿಕ ಪ್ರಮಾಣದಲ್ಲಿ ಇದೆ. ವಿಟಮಿನ್​ ಸಿ ಅಲ್ಲಿರುವ ಕೊಲಾಜನ್ ಅಂಶವು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಇನ್ನು ಇದರಲ್ಲಿರುವ ಎ ಅಂಶವು ಕೂದಲಿನ ಆರೈಕೆ ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ ಪೂರಕ

ಮಾವಿನಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಕರಗುವ ನಾರಿನಂಶ ಉತ್ತಮ ಪ್ರಮಾಣದಲ್ಲಿದೆ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅಲ್ಲದೆ, ಕರಗುವ ನಾರಿನಂಶವು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ರಕ್ತನಾಳಗಳಲ್ಲಿ ಪ್ಲೇಕ್ ಶೇಖರಣೆಯಾಗುವುದನ್ನು ತಡೆಯುತ್ತದೆ.

ಕಣ್ಣಿನ ಆರೋಗ್ಯಕ್ಕೆ ಸಹಕಾರಿ

ಒಂದು ಕಪ್ ಮಾವಿನ ತುಂಡುಗಳಲ್ಲಿ 38 ಮೈಕ್ರೋಗ್ರಾಂಗಳಷ್ಟು 'ಲ್ಯೂಟಿನ್' ಮತ್ತು 'ಝೀಕ್ಸಾಂಥಿನ್' (Zeaxanthin) ಎಂಬ ಶಕ್ತಿಯುತ ಆಂಟಿಆಕ್ಸಿಡೆಂಟ್‌ಗಳಿರುತ್ತವೆ. ಇವು ಕಣ್ಣಿಗೆ ಹಾನಿಕಾರಕ ನೀಲಿ ಬೆಳಕಿನಿಂದ (Blue Light) ರಕ್ಷಣೆ ನೀಡುತ್ತವೆ ಮತ್ತು ವಯಸ್ಸಾಗುವಿಕೆಯಿಂದ ಬರುವ ಕಣ್ಣಿನ ಪೊರೆ ಹಾಗೂ ಕಣ್ಣಿನ ಕಾಯಿಲೆಗಳನ್ನು ತಡೆಯುತ್ತವೆ. ಅಲ್ಲದೆ, ಇದರಲ್ಲಿರುವ 'ಬೀಟಾ-ಕ್ಯಾರೋಟಿನ್' ದೇಹದಲ್ಲಿ ವಿಟಮಿನ್ 'ಎ' ಆಗಿ ಪರಿವರ್ತಿತವಾಗಿ ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net