ಮಳೆಗಾಲದಲ್ಲಿ ಕಾಡುವ ಜ್ವರ, ಸಾಂಕ್ರಾಮಿಕ ರೋಗಗಳಿಂದ ಪಾರಾಗಲು ಏನು ಮಾಡಬೇಕು?; ಇಲ್ಲಿದೆ ಕೆಲವು ಸಲಹೆ..Monsoon Tips

Monsoon Tips to stay ahea diseases
Monsoon Tips to stay ahea diseases
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಕಾಡುವ ಜ್ವರ, ಡೆಂಗ್ಯೂ ಬಗ್ಗೆ ಜಾಗ್ರತೆ ವಹಿಸಲು ತಜ್ಞರ ಸಲಹೆ.
  • ನಿತ್ಯ ಕಾಯಿಸಿ ಆರಿಸಿದ ನೀರು ಹಾಗೂ ಬೇಯಿಸಿದ ಬಿಸಿ ಆಹಾರವನ್ನೇ ಸೇವಿಸಿ.
  • ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥಗಳು ಹಾಗೂ ಕತ್ತರಿಸಿದ ಹಣ್ಣುಗಳ ಸೇವನೆಗೆ ಬ್ರೇಕ್ ಹಾಕಿ.
Monsoon Tips to stay ahea diseases: ನಿರಂತರ ತೇವಾಂಶದಿಂದ ಕೂಡಿದ ವಾತಾವರಣವು ಬ್ಯಾಕ್ಟೀರಿಯಾ ವೃದ್ಧಿಗೆ ಸಾಕಷ್ಟು ಸಹಾಯ ಮಾಡುತ್ತದೆ.  ಇನ್‌ಫ್ಲುಯೆಂಜಾ ಡೆಂಗ್ಯೂ, ಮಲೇರಿಯಾ ಮತ್ತು ಕಲುಷಿತ ನೀರು ಹಾಗೂ ಆಹಾರದಿಂದ ಹರಡುವ ಹಲವಾರು ರೋಗಗಳು  ಜನರನ್ನು ಕಾಡುತ್ತದೆ. ಈ ಸಮಯದಲ್ಲಿ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ. 

ಸೊಳ್ಳೆಯಿಂದ ಹರಡುವ ರೋಗ ತಡೆಯೋದು ಹೇಗೆ?

ಮಳೆಗಾಲದಲ್ಲಿ ಸೊಳ್ಳೆಗಳ ಮೊಟ್ಟೆ ಉತ್ಪತ್ತಿ ಹೆಚ್ಚಾಗುವ ಕಾರಣ ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳು ತೀವ್ರಗೊಳ್ಳುತ್ತವೆ.  ಹೀಗಾಗಿ ಇದನ್ನು  ಪ್ರಾಥಮಿಕ ಮಟ್ಟದಲ್ಲಿ ತಡೆಯುವ ಸಲುವಾಗಿ ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲೂ ನೀರು ನಿಲ್ಲದಂತೆ ಜಾಗ್ರತೆ ವಹಿಸಿ. ಹೂವಿನ ಕುಂಡ, ಹಳೆಯ ಟೈರ್​ನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ನೀವು ಮನೆಯಿಂದ ಹೊರಕ್ಕೆ ಹೋಗುವಾಗ ಸೊಳ್ಳೆ ಬತ್ತಿ,  ಹಿಟ್​​​​ಗಳನ್ನು ಬಳಸಿ ಕಿಟಕಿ, ಬಾಗಿಲು ಸೇರಿದಂತೆ ಎಲ್ಲವನ್ನು ಗಟ್ಟಿಯಾಗಿ ಮುಚ್ಚಿ ತೆರಳಿ. ಮಲಗುವಾಗ ನಿಮ್ಮ ಪೂರ್ತಿ ದೇಹ ಮುಚ್ಚುವಂತಹ ಬಟ್ಟೆಯನ್ನು ಧರಿಸಿ. 

ಕಲುಷಿತ ನೀರು ಮತ್ತು ಆಹಾರದ ಬಗ್ಗೆ ಎಚ್ಚರವಿರಲಿ

ಮಳೆಯ ನೀರು ನಿಮ್ಮ ಮನೆಯ ಸಂಪ್​ಗೂ ತಲುಪುವ ಕಾರಣ, ಸೂಕ್ಷ್ಮ ಜೀವಿ ನಿವಾರಕ ವಸ್ತುವನ್ನು ಬಳಕೆ ಮಾಡಿ.  ಇಲ್ಲದಿದ್ದರೆ ನಿಮಗೆ ತಿಳಿಯದೆ ಬಳಕೆ ಮಾಡುವ ಕಲುಷಿತ ನೀರಿನಿಂದಾಗಿ ಟೈಫಾಯಿಡ್, ಕಾಲರಾ ಮತ್ತು ಗ್ಯಾಸ್ಟ್ರೋಎಂಟರೈಟಿಸ್‌ನಂತಹ ಕಾಯಿಲೆಗಳು ಹರಡುತ್ತವೆ.
ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಕಾಯಿಸಿ ಆರಿಸಿದ ನೀರನ್ನು ಕುಡಿಯಿರಿ, ರಾತ್ರಿ ಮಧ್ಯಾಹ್ನ ಹಾಗೂ ಬೆಳಗಿನ ಉಪಹಾರವು ಬಿಸಿಯದ್ದೇ ಸೇವಿಸಿ.  ಹೋಟೆಲ್​ನಲ್ಲಿ ಆಹಾರ ತಿನ್ನುವುದು ಅವಾಯ್ಡ್​ ಮಾಡಿ. ರಸ್ತೆ ಬದಿಯ ತೆರೆದಿಟ್ಟ ಆಹಾರಗಳು, ಕತ್ತರಿಸಿಟ್ಟ ಹಣ್ಣುಗಳು ಮತ್ತು ಪಾನಿಪುರಿ, ಗೋಲ್ಗಪ್ಪ ತಿನ್ನುವುದನ್ನು ಸಂಪೂರ್ಣವಾಗಿ ತಪ್ಪಿಸಿ.ಹಸಿ ತರಕಾರಿ ಹಾಗೂ ಸೊಪ್ಪುಗಳನ್ನು ಬಳಸುವ ಮುನ್ನ ಸ್ವಚ್ಛವಾದ ನೀರಿನಲ್ಲಿ ಚೆನ್ನಾಗಿ ತೊಳೆದು, ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ಸೂಕ್ತ.

ರೋಗನಿರೋಧಕ ಹೆಚ್ಚಿಸಿಕೊಳ್ಳಿ

ರೋಗನಿರೋಧ ಹೆಚ್ಚಿಸಿಕೊಳ್ಳಲು ಹಣ್ಣು, ತರಕಾರಿ ಸೊಪ್ಪು, ಬೀಜಗಳನ್ನು ಕ್ರಮೇಣವಾಗಿ ತಿನ್ನಿ. ನೆಗಡಿಯಿಂದ ದೂರವಿರಲು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳುವುದು ಅತ್ಯಗತ್ಯ. ಮಳೆಗಾಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವ ಲಿಂಬೆಹಣ್ಣು, ಕಿತ್ತಳೆ ಮತ್ತು ನೆಲ್ಲಿಕಾಯಿಗಳನ್ನು ಸೇವಿಸಿ. ವಾರಕ್ಕೆ ಮೂರು ಬಾರಿಯಾದರೂ ಬೆಳ್ಳುಳ್ಳಿ, ಮೆಣಸು, ತುಳಸಿ ಹಾಗೂ ಅರಿಶಿನ ಹಾಗೂ ದೊಡ್ಡ ಪತ್ರೆ ಎಲೆಯ ಕಷಾಯವನ್ನು ಸೇವಿಸಿ ಇದು ಕೆಮ್ಮಿನಂತಹ ಸಮಸ್ಯೆ ನಿಮ್ಮತ್ತ ಸುಳಿಯಲು ಬಿಡೋದಿಲ್ಲ.
ದಿನಪೂರ್ತಿ ಹೊರಗಿದ್ದು ಮನೆಗೆ ಬರುವಾಗ ಮೊದಲು ಕೈ ಕಾಲು, ಮುಖವನ್ನು  20 ಸೆಕೆಂಡುಗಳ ಕಾಲ ಸ್ವಚ್ಛವಾಗಿ ತೊಳೆದುಕೊಳ್ಳಿ. ಮಳೆಯಲ್ಲಿ ನೆನೆದರೆ ತಕ್ಷಣವೇ ಒಣ ಬಟ್ಟೆಯಿಂದ ಮೈ ಒರೆಸಿಕೊಂಡು, ಒಣಗಿದ ಬಟ್ಟೆಗಳನ್ನು ಧರಿಸಿ. ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ಚರ್ಮದ ಸೋಂಕುಗಳು ಕಾಡುವ ಸಾಧ್ಯತೆ ಇರುತ್ತದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net