

ಚೈನೀಸ್ ಫುಡ್ಸ್ ಲವಣಗಳು, ನೂಡಲ್ಸ್, ಮೊಮೊಸ್, ಚಾಟ್ ಐಟಮ್‌ಗಳಂತಹ ರಸ್ತೆ ಬದಿಯ ಆಹಾರ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಅವುಗಳನ್ನು ಎಷ್ಟು ಬಾರಿ ತಿನ್ನಬೇಕು? ಅದರಲ್ಲೂ ನೀವು ಮೊಮೊಸ್ ತಿನ್ನುತ್ತೀರಾ? ಹಾಗಿದ್ರೆ ಅದರಿಂದ ದೇಹಕ್ಕೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ನೋಡೋಣ
ಮೊಮೊಸ್ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ನೇಪಾಳದಿಂದ ಆರಂಭವಾದ ಈ ಖಾದ್ಯ ದೇಶದ ಮೂಳೆ ಮೂಲೆಗಳಿಗೂ ಹಬ್ಬಿದೆ. ಸಂಜೆಯಾಗುತ್ತಿದ್ದಂತೆಯೇ ರಸ್ತೆ ಬದಿಗಳಲ್ಲಿ ಮೊಮೊಸ್ ಸ್ಟಾಲ್‌ಗಳು ಎದ್ದು ನಿಲ್ಲುತ್ತವೆ. ಈ ಖಾದ್ಯ ತಿನ್ನಲು ಬಲು ರುಚಿ. ಈ ರುಚಿಯ ಕಾರಣದಿಂದಲೇ ಇದನ್ನು ಎಷ್ಟು ತಿಂದರೂ ಕಡಿಮೆ ಎಂದೆನಿಸುತ್ತದೆ. ಮತ್ತೆ ಮತ್ತೆ ತಿನ್ನುತ್ತಲೇ ಇರಬೇಕು ಅನ್ನಿಸುತ್ತದೆ. ಆದರೆ ಈ ಖಾದ್ಯ ಸಾವಿಗೂ ಕಾರಣವಾಗಬಹುದು.
ಮೊಮೊಸ್ ಫಾಸ್ಟ್ ಫುಡ್ ಇಷ್ಟಪಡುವವರ ಮೊದಲ ಆಯ್ಕೆಯಾಗಿದೆ. ಮೊಮೊಸ್ ತಯಾರಿಸಲು ಮೈದಾವನ್ನು ಬಳಸಲಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಇದು ಮೇದೋಜೀರಕ ಗ್ರಂಥಿಗೆ ಹಾನಿಕಾರಕ, ಮಧುಮೇಹಕ್ಕೆ ಅಪಾಯ, ಮಾತ್ರವಲ್ಲ ಪೈಲ್ಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದಲ್ಲದೆ, ಇದು ದೇಹದೊಳಗೆ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ.
ಮೊಮೊಸ್ನ ಹೆಚ್ಚಿನ ಸೇವನೆಯು ತೂಕ ಹೆಚ್ಚಾಗಲು ಮತ್ತು ಬೊಜ್ಜುಗೆ ಕಾರಣವಾಗಬಹುದು, ಇದು ಹೃದ್ರೋಗ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನ ತಂದೊಡ್ಡುತ್ತದೆ.
ಅಧಿಕ ಪ್ರಮಾಣದಲ್ಲಿರುವ ಪ್ರೋಟೀನ್ :
ಮೊಮೊಸ್ ನಲ್ಲಿ 1.6 ಗ್ರಾಂ ಪ್ರೋಟೀನ್ , 9.6 ಗ್ರಾಂ ಕಾರ್ಬೋಹೈಡ್ರೇಟ್, 0.9 ಗ್ರಾಂ ಫೈಬರ್, ಮತ್ತು 2.4 ಗ್ರಾಂ. ಕೊಬ್ಬು ಇರುತ್ತದೆ.
ಅತಿಯಾಗಿ ತಿನ್ನಬಾದು ಅನ್ನೋದು ವೈದ್ಯರ ಸಲಹೆ
ಬಿಹಾರದ ಗೋಪಾಲ್ ಗಂಜ್ ನಲ್ಲಿ ಮೊಮೊಸ್ ತಿನ್ನುವ ಸಂಬಂಧ ಸ್ನೇಹಿತರ ನಡುವೆ ಬೆಟ್ ಕಟ್ಟಲಾಗಿತ್ತು. ಯುವಕ ಇಲ್ಲಿ 150 ಮೊಮೊಗಳನ್ನು ತಿನ್ನಬೇಕಾಗಿತ್ತು. ಹೀಗೆ ಯುವಕ ಮೊಮೊಸ್ ತಿನ್ನುತ್ತಲೇ ಪ್ರಜ್ಞೆತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಾನೆ. ನಂತರ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅತಿಯಾದ ಮೈದಾದಿಂದ ಯುವಕನ ಗಂಟಲು ಕಟ್ಟಿ ಉಸಿರುಕಟ್ಟಿ ಯುವಕ ಪ್ರಾಣ ಕಳೆದುಕೊಳ್ಳಬೇಕಾಯಿತು. ಮಿತಿಗಿಂತ ಹೆಚ್ಚು ಮೊಮೊಸ್ ತಿನ್ನುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಎನ್ನುವುದು ವೈದ್ಯರ ಅಭಿಪ್ರಾಯ ಕೂಡಾ.
600 ವರ್ಷಗಳಷ್ಟು ಹಳೆಯದಾದ ಖಾದ್ಯ. ಇದು ಅರುಣಾಚಲ ಪ್ರದೇಶದ ಮೊನ್ಪಾ ಮತ್ತು ಶೆರ್ಡುಕ್ಪೆನ್ ಬುಡಕಟ್ಟುಗಳ ಆಹಾರದ ಪ್ರಮುಖ ಭಾಗವಾಗಿದೆ. ಈ ಸ್ಥಳವು ನೇಪಾಳ ಮತ್ತು ಟಿಬೆಟ್ ಗಡಿಗೆ ಬಹಳ ಹತ್ತಿರದಲ್ಲಿದೆ. ಇಲ್ಲಿನ ಜನರು ತಮ್ಮ ತಮ್ಮ ಪ್ರಕಾರವೇ ಮೊಮೊಸ್ ಖಾದ್ಯವನ್ನು ತಯಾರಿಸುತ್ತಾರೆ. ಸಾಂಪ್ರದಾಯಿಕವಾಗಿ, ಮೊಮೊವನ್ನು ಕೀಮಾ, ಆಲೂಗಡ್ಡೆ ಹಾಕಿ ತಯಾರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಸ್ಟಫಿಂಗ್ ಹೆಚ್ಚು ವಿಸ್ತಾರವಾಗಿದೆ. ಜನರು ತಮಗೆ ಇಷ್ಟವಾಗುವ ಸ್ಟಫಿಂಗ್ ಅನ್ನು ಬಳಸುತ್ತಾರೆ. ಕೀಮಾ, ತರಕಾರಿಗಳು, ತೋಫು, ಅಣಬೆಗಳು, ಪನೀರ್ ಚೀಸ್, ಚಿಕನ್ ಅಥವಾ ಮಟನ್‌ನಿಂದ ತಯಾರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಖಾದ್ಯದ ಜನಪ್ರಿಯತೆ ಹೆಚ್ಚುತಿದೆ. ಯುವಕರು, ಮಕ್ಕಳು ಮೊಮೊಸ್ ಎಂದರೆ ಮುಗಿ ಬಿದ್ದು ತಿನ್ನುತ್ತಾರೆ.