

ಬೆಂಗಳೂರು: ನಮ್ಮ ದೇಹದ ಪ್ರತಿಯೊಂದು ಮಚ್ಚೆಗಳಿಗೂ ತನ್ನದೇ ಆದ ಅರ್ಥವಿದೆ. ಆದರೆ ಕೆಲ ನಂಬಿಕೆಗಳ ಪ್ರಕಾರ ನಾಲಿಗೆಯ ಮೇಲೆ ಮಚ್ಚೆ ಇದ್ದರೆ ಅವರು ಹೇಳಿದ್ದೆಲ್ಲಾ ನಿಜವಾಗುತ್ತದೆ ಎನ್ನಲಾಗುತ್ತದೆ. ಕೆಲವರು ಇದನ್ನು ಅದೃಷ್ಟ ಎಂದು ಕೂಡಾ ಹೇಳುತ್ತಾರೆ.
ಕಪ್ಪು ನಾಲಿಗೆಯನ್ನು ಹೊಂದಲು ಅನೇಕ ಕಾರಣಗಳಿವೆ, ಉದಾಹರಣೆಗೆ ಕೆಲವು ಔಷಧಿಗಳ ಬಳಕೆ ಅಥವಾ ಬಾಯಿಯಲ್ಲಿ ಕಡಿಮೆ ಲಾಲಾರಸ ಇರೋದರಿಂದ ಇದು ಉಂಟಾಗುತ್ತದೆ. ಕೆಲವೊಮ್ಮೆ ಕೆಂಪು, ಕೆಲವೊಮ್ಮೆ ಹಳದಿ, ನೀಲಿ ಮತ್ತು ಕೆಲವೊಮ್ಮೆ ಬಿಳಿ ಬಣ್ಣಕ್ಕೆ ತಿರುಗುತ್ತದೆ. ನಾಲಿಗೆಯ ಬದಲಾಗುತ್ತಿರುವ ಬಣ್ಣವು ಕೆಲವು ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ನಾವು ಇಂದು ನಾಲಿಗೆಯಲ್ಲಿ ಕಪ್ಪು ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲ ನಿಜವಾಗುತ್ತಾ ಎನ್ನುವ ಮಾಹಿತಿ ತಿಳಿದುಳ್ಳೋಣ...
ಮಚ್ಚೆಗಳಿಗೆ ಸಾಮುದ್ರಿಕಾ ಶಾಸ್ತ್ರದಲ್ಲಿ ಬಹಳ ಮಹತ್ವ ಇದೆ. ನಾಲಿಗೆಯಲ್ಲಿ ಮಚ್ಚೆ ಇದ್ದವರು ಹೇಳಿದ್ದೆಲ್ಲ ನಿಜವಾಗುತ್ತದೆ ಎಂದು ಎಲ್ಲಿಯೂ ಹೇಳಲಾಗಿಲ್ಲ. ಈ ನಂಬಿಕೆ ಎಲ್ಲಿಂದ ಆರಂಭವಾಯಿತೆಂಬುದಕ್ಕೆ ಪುರಾವೆ ಇಲ್ಲ. ಆದರೆ ಕೆಲವು ಹೇಳುತ್ತಾರೆ ನಾಲಿಗೆ ಮೇಲೆ ಮಚ್ಚೆ ಇದ್ದವರು ಹೇಳಿದ್ರೆ ಅದೆಲ್ಲ ನಿಜವಾಗುತ್ತದೆ ಎಂದು ಆದರೆ ಇದು ಎಷ್ಟರ ಮಟ್ಟಿಗೆ ಸತ್ತಯ ಎನ್ನುವುದು ಮಾತ್ರ ಗೊತ್ತಿಲ್ಲ. ಸಾಮುದ್ರಿಕ್ಷಾಸ್ತ್ರದಲ್ಲಿ, ದೇಹದ ಭಾಗಗಳ ವಿನ್ಯಾಸ ಮತ್ತು ಇರುವ ಮಚ್ಚೆಗಳ ಸ್ಥಿತಿಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಹೇಳಲಾಗುತ್ತದೆ.
ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ನಾಲಿಗೆಯ ಕೆಳಭಾಗದಲ್ಲಿ ಮಚ್ಚೆ ಇದ್ದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ನಾಲಿಗೆಯ ಕೆಳ ಭಾಗದಲ್ಲಿ ಮಚ್ಚೆ ಇರುವವರು ಕಲಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ.
ನಾಲಿಗೆಯ ಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ನಾಲಿಗೆಯ ಮೇಲೆ ಮಚ್ಚೆ ಇರುವುದು ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ನಾಲಿಗೆಯ ಮೇಲೆ ಮಚ್ಚೆ ಇದ್ದರೆ, ಅಂತಹ ಜನರು ಸಂಭಾಷಣೆಯಲ್ಲಿ ಉತ್ತಮರು ಮತ್ತು ರಾಜತಾಂತ್ರಿಕರೂ ಆಗಿರುತ್ತಾರೆ. ಈ ಜನರು ಧಾರ್ಮಿಕ ಸ್ವಭಾವದವರೂ ಕೂಡಾ. ಅಂತಹವರು ತುಂಬಾ ಆಹಾರಪ್ರಿಯರೂ ಆಗಿರುತ್ತಾರೆ ಎಂದು ಹೇಳಲಾಗುತ್ತದೆ.
ನಾಲಿಗೆಯ ತುದಿಯಲ್ಲಿ ಮಚ್ಚೆ ಇರುವ ಜನರು ಆಹಾರ ಮತ್ತು ಪಾನೀಯವನ್ನು ಸಹ ತುಂಬಾ ಇಷ್ಟಪಡುತ್ತಾರೆ. ನಾಲಿಗೆಯ ಬಲಭಾಗದಲ್ಲಿ ಮಚ್ಚೆ ಇದ್ದರೆ, ಅಂತಹ ಜನರು ತುಂಬಾ ಮಾತನಾಡುತ್ತಾರೆ. ಅವರೊಂದಿಗೆ ಮಾತನಾಡುವುದು ತುಂಬಾ ಸಂತೋಷ ಕೊಡುತ್ತದೆ.
ಸಡನ್ ಆಗಿ ನಾಲಿಗೆಯ ಮೇಲೆ ಮಚ್ಚೆ ಅಥವಾ ಕಪ್ಪು ಕಲೆ ಕಾಣಿಸಿಕೊಂಡರೆ ಅದು ಆರೋಗ್ಯ ಸಮಸ್ಯೆಯ ಸೂಚನೆ ಎನ್ನಬಹುದು. ಈ ರೀತಿ ಮಚ್ಚೆ ಕಾಣಿಸಿಕೊಂಡರೆ ಆರೋಗ್ಯದ ಬಗ್ಗೆ ಬಹಳ ಗಮನ ಕೊಡಬೇಕು...