ಬೆಂಗಳೂರು: ಬೇಸಿಗೆ ಕಾಲದಲ್ಲಿ ಹಾಲು ಬೇಗನೆ ಹಾಳಾಗುವುದು ಬಹುತೇಕ ಎಲ್ಲ ಮನೆಗಳಲ್ಲೂ ಕಂಡುಬರುವ ಸಮಸ್ಯೆಯಾಗಿದೆ. ತಾಪಮಾನ ಹೆಚ್ಚಾದಂತೆ ಹಾಲಿನಲ್ಲಿ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತವೆ. ಇದರಿಂದ ಹಾಲು ಹುಳಿಯಾಗುವುದು, ಕೆಡುವುದು ಸಾಮಾನ್ಯ. ಆದರೆ ಕೆಲವು ಸರಳ ಕ್ರಮಗಳನ್ನು(Milk Storage Tips) ಅನುಸರಿಸಿದರೆ ಹಾಲನ್ನು ಹೆಚ್ಚು ದಿನಗಳ ಕಾಲ ತಾಜಾವಾಗಿ ಇಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.