ಮಿಲನ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮತ್ತು ಪರೀಕ್ಷೆಗಳನ್ನು ನಡೆಸಿದಾಗ, ಮಹಿಳೆಯ ಅಂಡಾಶಯದ ನಾಳಗಳು (ಟಿ್ಯೂಬ್‌ಗಳು) ತೆರೆದುಕೊಂಡಿರುವುದು ಕಂಡುಬಂತು. ಆದರೆ, ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದಾಗ ಗರ್ಭಕೋಶವು ಊದಿಕೊಂಡಿರುವುದು ಮತ್ತು 'ಅಡೆನೊಮಯೋಸಿಸ್' (ಗರ್ಭಕೋಶದ ಒಳಪದರದ ಅಂಗಾಂಶವು ಸ್ನಾಯುವಿನ ಗೋಡೆಯೊಳಗೆ ಬೆಳೆಯುವ ಸ್ಥಿತಿ) ಇರುವುದು ಪತ್ತೆಯಾಯಿತು. ಇದು ಭ್ರೂಣ ಕಸಿ ಮಾಡಲು ಅಡ್ಡಿಯಾಗುವಂಥಹದ್ದಾಗಿತ್ತು. ಪತಿಯ ವೀರ್ಯದ ತಪಾಸಣೆಯಲ್ಲಿ 'ಟೆರಾಟೊಜೂಸ್ಪರ್ಮಿಯಾ' (ಅಸಹಜ ಆಕಾರದ ವೀರ್ಯಾಣು, ಇದು ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ) ಇರುವುದು ಕಂಡಬಂತು. ದಂಪತಿಯ ವಯಸ್ಸು, ಹಿಂದಿನ ವಿಫಲ ಐಯುಐ ಪ್ರಯತ್ನಗಳು ಮತ್ತು ಈ ರೀತಿಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ಐವಿಎಫ್ (IVF) ಮಾಡಲು ನಿರ್ಧರಿಸಿದರು.