

# ನನಗೆ ಪದ್ಮಾಸನ ಅಭ್ಯಾಸ ಮಾಡಲು ಕಷ್ಟವಾಗುತ್ತದೆ. ಯಾವ ರೀತಿ ಅಭ್ಯಾಸ ಮಾಡಬೇಕು? ಪದ್ಮಾಸನದ ಮಾಹಿತಿ ತಿಳಿಸಿ.
| ಸಂದೇಶ 42 ವರ್ಷ, ಬೆಂಗಳೂರು
ಪದ್ಮಾಸನ ಭಂಗಿಗಾಗಿ ವ್ಯಾಯಾಮ, ಆಸನಗಳ ತಯಾರಿ
ಜಮಖಾನದಲ್ಲಿ ಕುಳಿತುಕೊಂಡು ಕಾಲುಗಳನ್ನು ಮಡಚಿ, ಬಿಡಿಸುವ ವ್ಯಾಯಾಮ ಮಾಡಿ. ಸೊಂಟ ಅಥವಾ ಮೊಣಕಾಲು ಅಂಗರಚನೆಯು ಪದ್ಮಾಸನವನ್ನು ಮಾಡಲು ಕಷ್ಟವಾಗಬಹುದು. ಮೊಣಕಾಲು, ಪಾದ, ಸೊಂಟ ಮತ್ತು ಸ್ಯಾಕ್ರಮ್ (ತ್ರಿಕಾಸ್ತಿ) ವಿಸ್ತರಿಸುವ ಮೂಲಕ ಸಿದ್ಧಗೊಳಿಸಲು ಸಹಾಯ ಮಾಡುತ್ತದೆ. ಆರಂಭದಲ್ಲಿ ದಂಡಾಸನ, ಅರ್ಧಪದ್ಮಸಾನ, ಬದ್ಧಕೋಣಾಸನ, ಜಾನುಶೀರ್ಷಾಸನ, ವೀರಾಸನ, ಅರ್ಧಮತ್ಸೆ ್ಯಂದ್ರಾಸನ ಅಭ್ಯಾಸ ಮಾಡಿ. ಸಾಧ್ಯವಾಗುವಷ್ಟೆ ಪ್ರಯತ್ನಿಸಿ. ಎಳೆಯ ಪ್ರಾಯದಲ್ಲಿ ಪದ್ಮಾಸನ ಬೇಗನೆ ಕೈವಶವಾಗುತ್ತದೆ. ಕೆಲವರಿಗೆ ಪದ್ಮಾಸನ ಬರಲು ಹಲವಾರು ತಿಂಗಳು ಅಥವಾ ಹಲವು ವರ್ಷಗಳೇ ಬೇಕಾಗುತ್ತದೆ. ಯೋಗಶಿಕ್ಷಕರ ಸಮ್ಮುಖದಲ್ಲಿ ಪದ್ಮಾಸನವನ್ನು ಕಲಿಯಿರಿ.
ಪ್ರಯೋಜನ: ಪಾದಗಳು, ಮೊಣಕಾಲುಗಳು ಮತ್ತು ಸೊಂಟವನ್ನು ವಿಸ್ತರಿಸುತ್ತದೆ. ಕಾಲಿನ ನರ, ಹೊಟ್ಟೆ, ಸೊಂಟ, ಬೆನ್ನು, ಮಂಡಿ ಇತ್ಯಾದಿ ಅಂಗಗಳು ಹೊಸ ಹುರುಪನ್ನು ಪಡೆದು ಚುರುಕಾಗುತ್ತವೆ. ಮಿದುಳನ್ನು ಶಾಂತಗೊಳಿಸುತ್ತದೆ ಮತ್ತು ಕುಂಡಲಿನಿಯನ್ನು ಜಾಗೃತಗೊಳಿಸುತ್ತದೆ.
ವಿಶೇಷ ಸೂಚನೆ: ತೀವ್ರ ಸೊಂಟನೋವು, ಕಾಲುನೋವು, ಮಂಡಿನೋವು ಇದ್ದವರು ಪದ್ಮಾಸನದ ಅಭ್ಯಾಸ ಮಾಡುವುದು ಬೇಡ.
# ಯೋಗಗ್ರಂಥ ಘೕರಂಡಸಂಹಿತೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸಿ.
| ಹರ್ಷವರ್ಧನ 48 ವರ್ಷ, ಮುಂಬಯಿ
ಇದು ಹಠಯೋಗದ ಮೂರು ಶ್ರೇಷ್ಠ ಗ್ರಂಥಗಳಲ್ಲಿ ಒಂದು (ಇತರ ಎರಡು ಹಠಯೋಗ ಪ್ರದೀಪಿಕಾ ಮತ್ತು ಶಿವಸಂಹಿತೆ), ಮತ್ತು ಯೋಗದ ಅತ್ಯಂತ ವಿಶ್ವಕೋಶ ಗ್ರಂಥಗಳಲ್ಲಿ ಒಂದಾಗಿದೆ. ಘೕರಂಡಸಂಹಿತೆಯ ಏಳು ಅಧ್ಯಾಯಗಳು ಯೋಗದ ಏಳು ಪಟ್ಟು ಮಾರ್ಗವನ್ನು ಅನುಸರಿಸುತ್ತವೆ. ಇದನ್ನು ಘೕರಂಡ ಋಷಿ ತನ್ನ ವಿದ್ಯಾರ್ಥಿ ಚಂದಾಕಪಾಲಿಗೆ ಕಲಿಸಿದನು.
ಈ ಏಳು ಅಧ್ಯಾಯಗಳು ಷಟ್ಕರ್ಮಗಳ ಮೂಲಕ ಶುದ್ಧೀಕರಣ ತಂತ್ರಗಳನ್ನು ಒಳಗೊಂಡಿದೆ. ಆಸನಗಳ ಮೂಲಕ ಬಲಪಡಿಸುವುದು, ಮುದ್ರಾ ಮೂಲಕ ಸ್ಥಿರವಾಗಿರುವುದು - ಇವು 25 ಮುದ್ರಾಗಳನ್ನು (ಸನ್ನೆಗಳು) ಒಳಗೊಂಡಿವೆ. ಪ್ರತ್ಯಾಹಾರದ ಮೂಲಕ ಶಾಂತಗೊಳಿಸುವಿಕೆಯು ಐದು ಸಾಂದ್ರತೆಯ ತಂತ್ರಗಳನ್ನು ಒಳಗೊಂಡಿದೆ. ಪ್ರಾಣಾಯಾಮದ ಮೂಲಕ ಹತ್ತು ಉಸಿರಾಟದ ತಂತ್ರಗಳನ್ನು ಒಳಗೊಂಡಿದೆ. ಧ್ಯಾನ ಮೂಲಕ ಗ್ರಹಿಕೆಯನ್ನು ಧ್ಯಾನಕ್ಕೆ ಸಮರ್ಪಿಸಲಾಗಿದೆ. ಸಮಾಧಿಯ ಮೂಲಕ ಪ್ರತ್ಯೇಕತೆಯ ಬೋಧೆಯಿದೆ. ಪತಂಜಲಿ ಮಹರ್ಷಿಗಳು ಬೋಧಿಸುವುದಕ್ಕಿಂತ ವಿಭಿನ್ನ ವಿಧಾನಗಳನ್ನು ಇಲ್ಲಿ ಬಳಸಲಾಗಿದೆ.