

ಅವಳು, ‘ಅಯ್ಯಾ ನನ್ನನ್ನು ಕ್ಷಮಿಸಿಬಿಡಿ. ಅರಿಯದೆ ತಪ್ಪು ಮಾಡಿರುವೆ. ನನಗೆ ತಪ್ಪಿನರಿವಾಗಿದೆ’ ಎಂದು ಕ್ಷಮೆಯಾಚಿಸಿ ಆತ್ಮಸಮರ್ಪಣೆ ಮಾಡಿಕೊಂಡಳು. ಅವಳ ಮುಖ ಪಶ್ಚಾತ್ತಾಪದಿಂದ ಬೇಯುತ್ತಿತ್ತು. ಆದರೆ ಜನರು ಮಾತ್ರ ಅವಳಿಗೆ ಕಠಿಣವಾದ ಶಿಕ್ಷೆ ವಿಧಿಸಬೇಕೆಂದು ಒತ್ತಾಯ ಮಾಡತೊಡಗಿದರು.
ಎಲ್ಲರೂ ಮುಖಮುಖ ನೋಡಿಕೊಂಡರು. ಅವರಿಗೆಲ್ಲ ತಾವು ತಾವು ಮಾಡಿದ ತಪ್ಪುಗಳ ಅರಿವಿದ್ದುದರಿಂದ ಅವಳಿಗೆ ಕಲ್ಲು ಹೊಡೆಯಲು ಯಾರೂ ಮುಂದೆ ಬರಲಿಲ್ಲ; ತಂತಮ್ಮ ಕಣ್ಣಿಗೆ ತಾವೇ ಪಾಪಭರಿತರಂತೆ ಕಂಡರು.
ಸಂತರು ಎಲ್ಲರನ್ನೂ ಉದ್ದೇಶಿಸಿ-‘ಈ ಮಹಿಳೆ ತಪ್ಪು ಮಾಡಿದ್ದು ನಿಜ. ಆದರೆ ಅದು ಅರಿವಿಲ್ಲದೆ ಮಾಡಿದ ತಪ್ಪು. ಅದಕ್ಕಾಗಿ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಟ್ಟಿದ್ದಾಳೆ. ಅಂದರೆ ಅವಳ ಪಾಪ ಪರಿಹಾರವಾಗಿದೆ’ ಎಂದು ತೀರ್ಪು ಕೊಟ್ಟರು. ಮಹಿಳೆ ಸಂತೋಷದಿಂದ ಸಂತರ ಕಾಲಿಗೆ ನಮಸ್ಕರಿಸಿ ತೆರಳಿದಳು.
ತಪ್ಪು ಮಾಡದವರು ಯಾರು? ಮನುಷ್ಯನಾದವನು ತಪ್ಪು ಮಾಡುವುದು ಸಹಜ. ಆದರೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಮುಂದೆ ಆ ತಪ್ಪು ಮಾಡದಿರುವುದು ಮುಖ್ಯ. ನಮ್ಮಲ್ಲಿ ಬಹಳಷ್ಟು ಜನ ತಾವು ಪಾಪದ ಕೆಲಸ ಮಾಡುತ್ತಿದ್ದರೂ ಇನ್ನೊಬ್ಬರ ತಪ್ಪಿನ ಬಗ್ಗೆ ಮಾತನಾಡುತ್ತಾರೆ. ನಾವೆಲ್ಲರೂ ಒಂದಲ್ಲ ಒಂದು ತಪ್ಪು ಮಾಡಿದವರೇ. ಹಾಗಿರುವಾಗ ಮೊದಲು ನಮ್ಮನ್ನು ನಾವು ತಿದ್ದಿಕೊಂಡು ಬೇರೆಯವರನ್ನು ತಿದ್ದೋಣ. ತನ್ನ ಆತ್ಮವೇ ಶುದ್ಧಿಯಿಲ್ಲದವನಿಗೆ ಬೇರೊಬ್ಬರ ವಿಷಯಗಳನ್ನು ರ್ತಸುವುದಾಗಲಿ ಅಥವಾ ಅವರು ಇಂಥವರೆಂದು ನಿರ್ಧರಿಸುವುದಕ್ಕಾಗಲಿ ಎಲ್ಲಿದೆ ಹಕ್ಕು?
| ಪದ್ಮಲತಾ ಮೋಹನ್ (ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)