ಮಾವಿನ ಹಣ್ಣು ಎಂದರೆ ಇ‌ಷ್ಟಾನಾ? ಮಾವು ರುಚಿ ಅಂತ ಬೇಕಾಬಿಟ್ಟಿ ತಿನ್ನಬೇಡಿ!

mango
Published on

ಬೆಂಗಳೂರು: ಬೇಸಿಗೆ ಬಂತೆಂದರೆ, ಮಾವಿನ ಕಾಯಿ ಹಾಗೂ ಮಾವಿನ ಹಣ್ಣು ಯಾವಾಗ ಮಾರುಕಟ್ಟೆಗೆ ಬರುತ್ತೆ ಎಂದು ಎದುರು ನೋಡುವ ಜನ ಇರುತ್ತಾರೆ. ಹಣ್ಣುಗಳ ರಾಜ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿದೆ. ಹಣ್ಣಿನ ಬೆಲೆ ಗಗನಕ್ಕೆರಿದರೂ ಗ್ರಾಹಕರಿಗೆ ಮಾವಿನಹಣ್ಣಿನ ಮೇಲಿನ ಆಸೆ ಮಾತ್ರ ಕೊಂಚವು ಕಡಿಮೆಯಾಗಿಲ್ಲ.

ನಾವು ಯಾವುದೇ ಆಹಾರ, ಹಣ್ಣು, ತಿಂಡಿಯನ್ನು ಸಮಯಕ್ಕೆ ಸರಿಯಾಗಿ ಸೇವಿಸಬೇಕು. ಇಲ್ಲವಾದಲ್ಲಿ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣು ಒಳ್ಳೆಯದಾ?ಯಾವ ಸಮಯಕ್ಕೆ ಸೇವಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮಾವಿನಹಣ್ಣು ಹೃದಯವನ್ನು ಸಂತೋಷವಾಗಿ ಮತ್ತು ಆರೋಗ್ಯವಾಗಿಡುತ್ತದೆ. ಹಣ್ಣಿನಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಸರಾಗವಾದ ರಕ್ತದ ಹರಿವನ್ನು ಖಚಿತಪಡಿಸುತ್ತದೆ, ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ತೂಕ ಕಡಿಮೆ ಮಾಡಬಹುದು. ಮಾವಿನಲ್ಲಿ ಕೊಬ್ಬನ್ನು ಕಡಿಮೆ ಮಾಡುವ ಫೈಟೊಕೆಮಿಕಲ್‍ಗಳಿರುತ್ತವೆ. ಇದರ ಜೊತೆಗೆ ನಾರುಗಳು ಹೇರಳವಾಗಿವೆ. ನೀವು ನಾರಿನ ಹಣ್ಣು ಮತ್ತು ತರಕಾರಿಯನ್ನು ಸೇವಿಸಿದಾಗ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಆಗುತ್ತಿದೆ. ಇದರಿಂದ ತೂಕವು ಕಡಿಮೆ ಆಗುತ್ತದೆ.

ಉತ್ತಮ ಆರೋಗ್ಯಕ್ಕೆ ಅವಶ್ಯಕ ಇರುವ ಕೆಲವ ಪೌಷ್ಟಿಕಾಂಶಗಳನ್ನು ಈ ಹಣ್ಣು ಒದಗಿಸುತ್ತದೆ.

ಮಾವಿನಹಣ್ಣಿನ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಇರುವ ಪ್ರಯೋಜನ:

ಊಟದ ನಂತರ ಹಣ್ಣುಗಳನ್ನು ತೆಗೆದುಕೊಳ್ಳಬೇಡಿ ಎಂದು ಆಯುರ್ವೇದ ಎಚ್ಚರಿಸುತ್ತದೆ. ಹಣ್ಣನ್ನು ಊಟದೊಂದಿಗೆ ತೆಗೆದುಕೊಳ್ಳಬಹುದು. ಈ ರೀತಿ ತೆಗೆದುಕೊಂಡರೆ ಹೊಟ್ಟೆ ಉಬ್ಬರದ ಸಮಸ್ಯೆ ತಡೆಯಲು ಸಹಾಯ ಮಾಡುತ್ತದೆ.ಮಾವಿನ ಹಣ್ಣನ್ನು ಉಪಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಅಥವಾ ಸಂಜೆಯ ತಿಂಡಿಯಾಗಿ ಸೇವಿಸಬಹುದು. ಮಾಗಿದ ಮಾವಿನ ಹಣ್ಣನ್ನು ಹಾಲಿನೊಂದಿಗೆ ಸೇವಿಸುವುದರಿಂದ ದೇಹ ತಂಪಾಗುತ್ತದೆ. ಇದು ಅತ್ಯಂತ ಪೌಷ್ಟಿಕ, ರುಚಿಕರವಾದ ಟಾನಿಕ್ ಆಗಿ ಹೊರಹೊಮ್ಮುತ್ತದೆ. ಆದಾಗ್ಯೂ, ಜೀರ್ಣಕಾರಿ ಸಮಸ್ಯೆಗಳು, ಚರ್ಮದ ಸಮಸ್ಯೆಗಳಿರುವ ಜನರು ಹಾಲಿನೊಂದಿಗೆ ಮಾವನ್ನು ಸೇವಿಸಬಾರದು.

ಮಾವಿನ ಹಣ್ಣು ಒಳ್ಳೆಯದಾ?:

ಮಾವಿನಹಣ್ಣಿನ ರಸ ಅಥವಾ ಸ್ಮೂಥಿಗಳಿಂದ ದೂರವಿರಿ. ಮಾವಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸಿ ಏಕೆಂದರೆ ಅವುಗಳು ಹೆಚ್ಚಿನ ಸಕ್ಕರೆಯನ್ನು ಹೊಂದಿರುತ್ತವೆ. ಈಗಾಗಲೇ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿರುವ ಊಟದೊಂದಿಗೆ ಮಾವಿನಹಣ್ಣನ್ನು ಸೇವಿಸುವುದನ್ನು ತಪ್ಪಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net