Life Partner : ಉಡುಗೊರೆಗಳನ್ನು ನೀಡುವುದು ಅಥವಾ ರೊಮ್ಯಾಂಟಿಕ್ ಪ್ರವಾಸಗಳಿಂದ ದಂಪತಿ ಹಾಗೂ ಪ್ರೇಮಿಗಳ ನಡುವಿನ ಪ್ರೀತಿ ಗಟ್ಟಿಯಾಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ವಾಸ್ತವವಾಗಿ, ದೈನಂದಿನ ಜೀವನದಲ್ಲಿನ ಸಣ್ಣ ವಿಷಯಗಳು ಕೂಡ ಸಂಗಾತಿಯೊಂದಿಗಿನ ನಿಮ್ಮ ಬಂಧವನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯದ ಆಳದಿಂದ ಬರುವ ಸಣ್ಣ ಸಣ್ಣ ಪ್ರಯತ್ನಗಳು ಕೂಡ ನಿಮ್ಮ ಬಂಧವನ್ನು ಬಲಪಡಿಸುತ್ತವೆ. ಆದರೆ, ಇಂದು ಅನೇಕ ಮಂದಿ ಅವುಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಒಂದೇ ಮನೆಯಲ್ಲಿದ್ದರೂ ದೂರದಲ್ಲಿರುವಂತೆ ಅನಿಸುತ್ತಿದೆ. ಏಕೆಂದರೆ, ಪರಸ್ಪರ ಮಾತನಾಡುವುದಕ್ಕಿಂತ ಮೊಬೈಲ್ ಹಾಗೂ ಟಿವಿಯಲ್ಲಿ ಮುಳುಗಿ ಹೋಗಿರುತ್ತಾರೆ. ಹೀಗಾಗಿ ಈ ಆಧುನಿಕ ಕಾಲದಲ್ಲಿ ಬ್ರೇಕಪ್ ಹಾಗೂ ಡಿವೊರ್ಸ್ಗಳು ಹೆಚ್ಚಾಗುತ್ತಿವೆ. ಆದ್ದರಿಂದ ದಾಂಪತ್ಯ ಜೀವನವನ್ನು ಗಟ್ಟಿಗೊಳಿಸುವ 'ಸಣ್ಣ' ರಹಸ್ಯಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.