

ಬೆಂಗಳೂರು: ಚಳಿಗಾಲದಲ್ಲಿ ತುಟಿಗಳು(Lips) ಒಡೆದು ಹೋಗುವುದು (ಚ್ಯಾಪ್ಡ್ ಲಿಪ್ಸ್) ಸಾಮಾನ್ಯ ಸಮಸ್ಯೆಯಾಗಿದ್ದು,ತುಟಿಗಳು ಒಡೆದು ಹೋಗುವುದಕ್ಕೆ ಹಲವು ಕಾರಣಗಳಿದ್ದು, ಮುಖ್ಯವಾಗಿ ನಿರ್ಜಲೀಕರಣ, ಸೂರ್ಯನ ಹಾನಿಕಾರಕ ಕಿರಣಗಳು, ವಿಟಮಿನ್ ಕೊರತೆ (ವಿಶೇಷವಾಗಿ ವಿಟಮಿನ್ ಬಿ), ಅತಿಯಾದ ವಿಟಮಿನ್ ಎ ಸೇವನೆ, ಮತ್ತು ಕೆಲವು ಔಷಧಿಗಳು ಕಾರಣವಾಗಿವೆ. ಈ ಟಿಪ್ಸ್ ಫಾಲೋ ಮಾಡಿ ನಿಮ್ಮ ತುಟಿಗಳ ಸಮಸ್ಯೆ ಸುಲಭವಾಗಿ ಪರಿಹರಿಸಬಹುದು.
1.ಚಳಿಗಾಲದ ತಂಪು ಗಾಳಿ ಮತ್ತು ಒಳಗಿನ ಹೀಟಿಂಗ್ ಸಿಸ್ಟಮ್‌ಗಳು ತುಟಿಗಳ ತೇವಾಂಶವನ್ನು ಕಡಿಮೆ ಮಾಡುತ್ತವೆ, ಇದರಿಂದ ಒಡೆತ ಮತ್ತು ರಕ್ತಸ್ರಾವ ಬರುತ್ತದೆ.
2.ನೀರಿನ ಕೊರತೆ (ಡಿಹೈಡ್ರೇಷನ್),ಕಡಿಮೆ ನೀರು ಕುಡಿಯುವುದರಿಂದ ಶರೀರದ ಎಲ್ಲಾ ಭಾಗಗಳು ಒಣಗುತ್ತವೆ. ವಿಶೇಷವಾಗಿ ತುಟಿಗಳು.
3. ತುಟಿಗಳನ್ನು ನಾವು ಚಾಟುವುದು ಇದು ಹೆಚ್ಚು ತೇವಾಂಶವನ್ನು ತೆಗೆದುಹಾಕಿ, ಒಡೆತವನ್ನು ಹೆಚ್ಚಿಸುತ್ತದೆ.
4.ವಿಶೇಷವಾಗಿ ಹೊರಗಡೆ ಹೋಗುವಾಗ ಸೂರ್ಯನ ಕಿರಣಗಳು ಚಳಿಗಾಲದಲ್ಲೂ UV ಕಿರಣಗಳು ಒಣಗಿಸುತ್ತವೆ. ಇದರಿಂದ ತುಟಿಗಳು ಕೂಡ ಒಣಗುತ್ತವೆ.
5. ಅಲರ್ಜಿ ಅಥವಾ ಔಷಧಗಳು, ಲಿಪ್‌ಸ್ಟಿಕ್ ಅಥವಾ ಚರ್ಮರೋಗ ಔಷಧಗಳು (ಉದಾ: ರೆಟಿನಾಯ್ಡ್‌ಗಳು) ಕಾರಣವಾಗಬಹುದು.
1.ಲಿಪ್ ಬಾಮ್ ಬಳಸಿ: ಪೆಟ್ರೋಲ್ಯಮ್ ಜೆಲಿ ಅಥವಾ ಬೀವ್ಯಾಕ್ಸ್ ಇರುವ ಲಿಪ್ ಬಾಮ್ ಅನ್ನು ಪ್ರತಿ 2-3 ಗಂಟೆಗಳಿಗೊಮ್ಮೆ ಹಚ್ಚಿ. SPF 30+ ಇರುವದನ್ನು ಆಯ್ಕೆಮಾಡಿ.
2.ನೀರು ಹೆಚ್ಚು ಕುಡಿಯಿರಿ:ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಸೇವಿಸಿ. ಹೀಟರ್ ಬಳಸುವಾಗ ಹ್ಯುಮಿಡಿಫೈಯರ್ ಆನ್ ಮಾಡಿ.
3, ತುಟಿಗಳನ್ನು ಚಿವುಟದೀರಿ ತುಟಿಗಳುನ್ನು ಹಲ್ಲಿನಿಂದ ಅಥವಾ ಕೈಯಿಂದ ಕಚ್ಚಬೇಡಿ ಬದಲಿಗೆ ಬಾಮ್ ಹಚ್ಚಿ.
4.ಹೊರಗಡೆ ಹೋಗುವಾಗ ಮುಖಕವರ್ ,ಸ್ಕಾರ್ಫ್ ಅಥವಾ ಮಾಸ್ಕ್ ಬಳಸಿ, ಗಾಳಿಯಿಂದ ರಕ್ಷಣೆ ನೀಡಿ.
5. ಸಮತೋಲಿತ ಆಹಾರ: ಒಮೆಗಾ-3 ಫ್ಯಾಟಿ ಆಸಿಡ್‌ಗಳು (ಮೀನು, ಬೀಜಗಳು) ಸೇವಿಸಿ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.