ಹಿಂದಕ್ಕೆ ನಡೆಯುವುದು ದೇಹಕ್ಕೆ ಒಳ್ಳೆಯದೋ ಕೆಟ್ಟದ್ದೋ; ತಜ್ಞರು ಹೇಳೋದೇನು? Walking

Walking
Published on

Walking | ಒಬ್ಬ ವ್ಯಕ್ತಿ ಪ್ರತಿದಿನ ಸ್ವಲ್ಪ ಸಮಯ ನಡೆಯುವದರಿಂದ ಆತನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ ಪ್ರತಿದಿನ ನಡೆಯುವುದು ದೇಹಕ್ಕೆ ತುಂಬಾ ಒಳ್ಳೆಯದು. ಹಾಗಾದರೆ ಅದರಂತೆ ನಾವು ಮುಂದೆ ನಡೆಯುವ ಬದಲಾಗಿ ಹಿಂದಕ್ಕೆ ನಡೆಯುವುದು ಒಳ್ಳೆಯದೋ ಕೆಟ್ಟದ್ದೋ ಎಂದು ತಿಳಿಯೋಣ.

ಹಿಂದಕ್ಕೆ ನಡೆಯುವುದು:

ನಮ್ಮ ದೇಹದ ದೈಹಿಕ ದೃಢತೆ ಕಾಪಾಡಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಹಿಂದಕ್ಕೆ ನಡೆಯುವುದು ಸುರಕ್ಷಿತ ಮಾರ್ಗವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವುದರೊಂದಿಗೆ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ ಹಿಂದಕ್ಕೆ ನಡೆಯುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಇನ್ನೂ ಉತ್ತಮವಾಗಿರುತ್ತದೆ. ರಿವರ್ಸ್ ವಾಕಿಂಗ್, ರೆಟ್ರೊ ವಾಕಿಂಗ್ ಅಥವಾ ಹಿಂದಕ್ಕೆ ನಡೆಯುವುದರಿಂದ ನೀವು ಬಲಶಾಲಿಯಾಗಬಹುದು. ಹಿಂದಕ್ಕೆ ನಡೆಯುವುದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೋಧನೆ ಹೇಳುತ್ತದೆ. ಆದಾಗ್ಯೂ, ಈ ಅಸಮಾನ್ಯ ವ್ಯಾಯಾಮದ ವಿಶಿಷ್ಟ ಪ್ರಯೋಜನಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ.

ಹಿಂದಕ್ಕೆ ನಡೆಯುವುದರಿಂದಾಗುವ ಪ್ರಯೋಜನಗಳು:

Walking

ಹಿಂದೆ ನಡೆಯುವುದರಿಂದ ಅನೇಕ ಸ್ನಾಯುಗಳು, ಮಂಡಿ ಮತ್ತು ತೊಡೆಗಳ ಮೇಲೆ ಒತ್ತಡ ಬೀಳುವುದರಿಂದ ಒಟ್ಟಾರೆ ದೇಹದ ಸ್ಥಿರತೆಯನ್ನು ಸುಧಾರಿಸುತ್ತವೆ. ಮೊಣಕಾಲಿನ ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಜನರು ಹಿಮ್ಮುಖ ನಡಿಗೆ ಮಾಡುವುದು ಒಳ್ಳೆಯದು. ಏಕೆಂದರೆ, ಹಿಮ್ಮುಖವಾಗಿ ನಡೆಯುವಾಗ ಮೊಣಕಾಲುಗಳ ಮೇಲೆ ಕಡಿಮೆ ಒತ್ತಡವಿರುತ್ತದೆ.

ಹಿಂದಕ್ಕೆ ನಡೆಯುವುದು ನೇರವಾಗಿ ನಡೆಯುವಷ್ಟು ಸುಲಭವಲ್ಲ. ಹೀಗೆ ನಡೆಯಲು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಶ್ರಮ ಪಡಬೇಕು. ಹಿಂದಕ್ಕೆ ನಡೆಯುವುದು ನಿಮ್ಮ ಮೊಣಕಾಲುಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಹಿಂದಕ್ಕೆ ನಡೆಯುವುದರಿಂದ ನಿಮ್ಮ ಮೊಣಕಾಲುಗಳ ಚಲನೆಯ ವ್ಯಾಪ್ತಿ ಹೆಚ್ಚಾಗುತ್ತದೆ ಹಾಗೂ ನಿಮ್ಮ ಬಾಗಿದ ಮೊಣಕಾಲು ಸಂಪೂರ್ಣವಾಗಿ ನೇರವಾಗುತ್ತದೆ. ಹಿಂದಕ್ಕೆ ನಡೆಯುವಾಗ ಚಲನೆಯ ದಿಕ್ಕು ಬದಲಾಗುತ್ತದೆ, ಇದು ಮುಂದಕ್ಕೆ ನಡೆಯುವಾಗ ಮೊಣಕಾಲಿನ ಕೀಲುಗಳ ಮೇಲೆ ಕಡಿಮೆ ಒತ್ತಡವನ್ನು ಬೀರುತ್ತದೆ.

ಇತರ ಪ್ರಯೋಜನಗಳು :

ಇದನ್ನು ನೆನಪಿನಲ್ಲಿಡಿ : ಹಿಂದಕ್ಕೆ ನಡೆಯುವುದರಿಂದ ಎಷ್ಟೇ ಆರೋಗ್ಯ ಪ್ರಯೋಜನಗಳು ಇದ್ದರೂ, ನೀವು ಬಿದ್ದು ಗಾಯಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೂಕ್ತವಾದ ಸ್ಥಳದಲ್ಲಿ ಹಿಮ್ಮುಖವಾಗಿ ನಡೆಯಲು ಪ್ರಾರಂಭಿಸಿ.

ಏಕಾಗ್ರತೆ ಸುಧಾರಣೆ : ಹಿಂದಕ್ಕೆ ನಡೆಯಲು ಹೆಚ್ಚಿನ ಏಕಾಗ್ರತೆ ಮತ್ತು ದೇಹದ ಅರಿವು ಅಗತ್ಯವಾಗಿರುತ್ತದೆ. ಇದು ಅರಿವಿನ ಕಾರ್ಯವನ್ನು ಸುಧಾರಿಸಲು ಮತ್ತು ಗಮನವನ್ನು ಕೇಂದ್ರೀಕರಿಸಲು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸಮತೋಲನ ಸುಧಾರಣೆ : ಹಿಂದಕ್ಕೆ ನಡೆಯುವುದರಿಂದ ಇದು ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net