ಮಕ್ಕಳಿಗೆ ಕೇಸರಿ ಹಾಲನ್ನು ನೀಡುವುದರಿಂದ ಈ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ

milk
Published on

ಬೆಂಗಳೂರು: ಕೇಸರಿಯನ್ನು ಶತ ಶತಮಾನಗಳಿಂದಲೂ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತಿದೆ. ಇದು ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾರುಕಟ್ಟೆಯಲ್ಲಿ ಮಾತ್ರ ತುಂಬಾ ದುಬಾರಿ. ಆದರೆ ಕೇಸರಿ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಕೇಸರಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಅದ್ಭುತವಾದ ಲಾಭಗಳು ಸಿಗುತ್ತವೆ ಎಂದು ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬೇಕು. ಆದ್ದರಿಂದ ರಾತ್ರಿ ವೇಳೆ ಕೇಸರಿ ಹಾಲನ್ನು ಪ್ರತಿದಿನ ಕುಡಿಯಲು ಮಕ್ಕಳಿಗೆ ಸಲಹೆ ನೀಡಲಾಗುತ್ತದೆ.

ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್-ಸಿ, ರಂಜಕದಂತಹ ಪೋಷಕಾಂಶಗಳು ಕೇಸರಿಯಲ್ಲಿ ಕಂಡುಬರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಅನೇಕ ರೋಗಗಳನ್ನು ತಪ್ಪಿಸಬಹುದು. ಹಾಗಾದರೆ ಕೇಸರಿ ಹಾಲಿನ ಪ್ರಯೋಜನಗಳೇನು ಎಂದು ತಿಳಿಯೋಣ ಬನ್ನಿ...

ನಿದ್ರೆ ಸುಧಾರಿಸಲಿದೆ
ಕೇಸರಿಯಲ್ಲಿರುವ ಸಿರೊಟೋನಿನ್ ಎಂಬ ಸಂಯುಕ್ತವು ಉತ್ತಮ ನಿದ್ರೆಗೆ ಸಹಕಾರಿ. ಅದಕ್ಕಾಗಿಯೇ ಮಲಗುವ ಮೊದಲು ಮಗುವಿಗೆ ಒಂದು ಲೋಟ ಕೇಸರಿ ಹಾಲನ್ನು ನೀಡಿ, ಮಗುವಿಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಮೂಳೆ ಬೆಳವಣಿಗೆಗೆ ಸಹಕಾರಿ
ಕೇಸರಿ ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅಂಶವಿದೆ. ಮಗುವಿನ ದೈಹಿಕ ಬೆಳವಣಿಗೆಯಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ . ಮ್ಯಾಂಗನೀಸ್, ವಿಟಮಿನ್-ಸಿ, ವಿಟಮಿನ್-ಎ ಮುಂತಾದ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಕೇಸರಿ ಹಾಲು ಮಕ್ಕಳ ಮೂಳೆಗಳ ಬೆಳವಣಿಗೆಗೆ ತುಂಬಾ ಸಹಕಾರಿ.

ಜೀರ್ಣಕ್ರಿಯೆ ಸುಧಾರಿಸುತ್ತದೆ
ಮಕ್ಕಳಲ್ಲಿ ಜೀರ್ಣಕಾರಿ ಸಮಸ್ಯೆಗಳು ಸಾಮಾನ್ಯವಾಗಿದೆ . ಕೇಸರಿ ಹಾಲಿನಲ್ಲಿರುವ ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಇದು ಮಗುವಿನ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯ ಉತ್ತೇಜಿಸುತ್ತದೆ
ಕೇಸರಿಯಲ್ಲಿರುವ ರೈಬೋಫ್ಲಾವಿನ್ ಮತ್ತು ಥಯಾಮಿನ್ ನಂತಹ ಪೋಷಕಾಂಶಗಳು ಆರೋಗ್ಯಕರ ಮೆದುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಮಗುವಿನ ಮನಸ್ಸು ಚುರುಕುಗೊಳ್ಳಲು ನಿಯಮಿತವಾಗಿ ಕೇಸರಿ ಹಾಲನ್ನು ಕುಡಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net