ಕ್ಯಾನ್ಸರ್​ ಗೆಲ್ಲೋಣ: ಆರೋಗ್ಯಕರ ಆಹಾರ ಸೇವನೆ, ದೈಹಿಕ ಚಟುವಟಿಕೆಯಿಂದ ರೋಗ ದೂರ

10
Published on
ಕ್ಯಾನ್ಸರ್​ ಬಂದ ಮೇಲೆ ಒದ್ದಾಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಿಸಿಕೊಂಡರೆ ಕ್ಯಾನ್ಸರ್​ ಗೆಲ್ಲಬಹುದು ಎಂಬುದು ಹಲವು ವೈದ್ಯರ ಸಲಹೆ. ಇಂದು ಕ್ಯಾನ್ಸರ್​ ಜಾಗೃತಿ ದಿನದ ಸಂದರ್ಭದಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಕ್ಯಾನ್ಸರ್ ರೋಗ ತಜ್ಞ ಡಾ.ಲಾರೆನ್ಸ್ ಪೀಟರ್ ಕೆಲವು ಸಲಹೆಗಳನ್ನು ನೀಡಿದ್ದಾರೆ, ನಾವೆಲ್ಲ ಪಾಲಿಸೋಣ...

ಮೇದೋಜೀರಕ ಗಂಥಿಯ ಜೀವಕೋಶಗಳು ರೂಪಾಂತರಗೊಂಡು ಅನಿಯಂತ್ರಿತವಾಗಿ ಬೆಳವಣಿಗೆ ಹೊಂದಿದಾಗ ಮೇದೋಜೀರಕ ಗಂಥಿ ಕ್ಯಾನ್ಸರ್ ಸಂಭವಿಸುತ್ತದೆ. ಇದರಲ್ಲೂ ಹಲವು ವಿಧಗಳಿವೆ. ಧೂಮಪಾನ, ಅತಿಯಾದ ಬೊಜ್ಜು ಸಂಗ್ರಹ, ಮದ್ಯಪಾನ, ಹೊರಗಿನ ಆಹಾರ ಹೆಚ್ಚು ಸೇವಿಸುವ ವ್ಯಕ್ತಿಗಳಲ್ಲಿ ಈ ಕ್ಯಾನ್ಸರ್ ಸಾಧ್ಯತೆ ಹೆಚ್ಚು.

ಟೈಪ್ 2 ಡಯಾಬಿಟಿಸ್ ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್​ನಿಂದಲೂ ಬರುತ್ತದೆ. ಹೀಗಾಗಿ ಆರೋಗ್ಯಕರ ಆಹಾರ ಸೇವನೆಯೊಂದಿಗೆ, ಅದರ ಜೀರ್ಣಕ್ರಿಯೆಗೆ ಪೂರಕವಾಗಿ ವ್ಯಾಯಾಮ ಸೇರಿ ಕೆಲ ದೈಹಿಕ ಚಟುವಟಿಕೆಗಳನ್ನೂ ರೂಢಿಸಿಕೊಳ್ಳಬೇಕು. ನಾನಾ ಕಾರಣಗಳಿಂದ ಹಲವಾರು ಬಗೆಯ ಕ್ಯಾನ್ಸರ್ ಜನರನ್ನು ಬಾಧಿಸುತ್ತಿದೆ. ಆಧುನಿಕ ಸೌಲಭ್ಯ ಬಳಸಿ ಅಂದರೆ ಎಂಡೋಸ್ಕೋಪಿಕ್, ಅಲ್ಟ್ರಾಸೌಂಡ್​ನೊಂದಿಗೆ ಕೋಲಾಂಜಿಯೋಸ್ಕೋಪಿಗಳಿಂದ ಮೇದೋಜೀರಕ ಗಂಥಿ ಕ್ಯಾನ್ಸರ್ ಸುಲಭವಾಗಿ ಪತ್ತೆ ಹೆಚ್ಚಿ, ದೇಹದ ಇತರ ಭಾಗಗಳಿಗೆ ಹರಡದಂತೆ ತಡೆದು ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣ ನಿರ್ಮೂಲನೆಗೊಳಿಸುವ ಮೂಲಕ ಕಾಯಿಲೆ ಗುಣಪಡಿಸಬಹುದಾಗಿದೆ.

,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net