

Lemons : ನಿಂಬೆಹಣ್ಣು ಪ್ರತಿಯೊಬ್ಬರ ಮನೆಯಲ್ಲೂ ಇರುವಂತಹ ಅಡುಗೆಮನೆಯ ಅವಿಭಾಜ್ಯ ತರಕಾರಿಯಾಗಿದೆ. ಈ ನಿಂಬೆಹಣ್ಣುಗಳನ್ನು ಹಲವಾರು ಉಪಯೋಗಗಳಿಗೆ ಬಳಸಲಾಗುತ್ತದೆ. ಉಪ್ಪಿನಕಾಯಿ, ಔಷಧ, ಆಹಾರ, ಹಾಗೇ ಅನೇಕರು ತೂಕ ಇಳಿಸಿಕೊಳ್ಳಲು ಮದ್ದಾಗಿ ಬಳಸುತ್ತಾರೆ. ಇದು ಅಡುಗೆ ಪದಾರ್ಥಗಳಲ್ಲಿ ಬಳಸುವುದರಿಂದ ರುಚಿ ಇನ್ನಷ್ಟು ಹೆಚ್ಚಾಗಿ ಇರುತ್ತದೆ.
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ ಇದೇ ನಿಂಬೆಹಣ್ಣಿನ ಸಿಪ್ಪೆ ತೆಳ್ಳಗಿರುವುದರಿಂದ ಮತ್ತು ರಸವು ಅಧಿಕವಾಗಿರುವುದರಿಂದ, ಅದು ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ಸರಿಯಾಗಿ ಸಂಗ್ರಹಿಸದಿದ್ದರೆ, ಈ ತೇವಾಂಶವು ಬೇಗನೆ ಆವಿಯಾಗುತ್ತದೆ. ಇದರ ಪರಿಣಾಮವಾಗಿ ನಿಂಬೆಹಣ್ಣುಗಳು ಹಾಳಾಗುತ್ತವೆ.
ಸಾಮಾನ್ಯವಾಗಿ ನಿಂಬೆಹಣ್ಣುಗಳು ಬಹಳ ಬೇಗನೆ ಮೃದುವಾಗಿ ಹಾಳಾಗಲು ಪ್ರಾರಂಭಿಸುತ್ತವೆ. ಅವುಗಳನ್ನು ತಾಜಾವಾಗಿ ಇಡಲು ಪ್ರಿಜ್ನಲ್ಲಿ ಇಡುವುದು ಒಳ್ಳೆದು. ಆದರೆ, ಇದೊಂದೆ ವ್ಯವಸ್ಥೆ ದೀರ್ಘವಾಗಿ ನಿಂಬೆ ಹಣ್ಣನ್ನು ಇಡಲು ಸಾಧ್ಯವಿಲ್ಲ. ಹಾಗಾಗಿ ಕೆಳಗೆ ಕೊಟ್ಟಿರುವ ಸಲಹೆಗಳನ್ನು ಬಳಸಿ ನಿಂಬೆಹಣ್ಣನ್ನು ದೀರ್ಘಕಾಲದವರೆಗೂ ಉಪಯೋಗಿಸಬಹುದು.
ಉತ್ತಮ ನಿಂಬೆಹಣ್ಣುಗಳನ್ನು ಖರೀದಿಸಿ ಫ್ರಿಜ್ನಲ್ಲಿ ಸಂಗ್ರಹಿಸಿದರೆ ಇವು ದೀರ್ಘಕಾಲದವರೆಗೂ ಇಟ್ಟುಕೊಳ್ಳಬಹುದು. ಆದರೆ ನೇರವಾಗಿ ಫ್ರಿಜ್ನಲ್ಲಿಡುವುದರಿಂದ ಅದರಲ್ಲಿರುವ ತಣ್ಣನೆಯ ಗಾಳಿಯು ನಿಂಬೆಹಣ್ಣುಗಳನ್ನು ಕ್ರಮೇಣ ಒಣಗಲು ಪ್ರಾರಂಭಿಸುತ್ತವೆ. ಆದರಿಂದ ಇದನ್ನು ತಪ್ಪಿಸಲು, ನಿಂಬೆಹಣ್ಣುಗಳನ್ನು ಪಾಲಿಥಿನ್ ಚೀಲದಲ್ಲಿ ಇರಿಸಿ ಅವುಗಳನ್ನು ಫ್ರಿಜ್ನಲ್ಲಿಡಿ. ಇದರಿಂದ ನಿಂಬೆಹಣ್ಣುಗಳು ದೀರ್ಘಕಾಲದ ವರೆಗೂ ಹಾಳಾಗುವುದಿಲ್ಲ. ಅದರಲ್ಲಿರುವ ರಸ ಬತ್ತುವುದಿಲ್ಲ.
ಶುದ್ಧವಾದ ಪಾತ್ರೆಯಲ್ಲಿ ನೀರು ತುಂಬಿಸಿ ಅದಕ್ಕೆ ನಿಂಬೆಹಣ್ಣುಗಳನ್ನು ಹಾಕಿ ಫ್ರಿಜ್ನಲ್ಲಿಡಿ. ಇದರಿಂದ ನೀರಿನಲ್ಲಿರುವ ತೇವಾಂಶವು ನಿಂಬೆ ಸಿಪ್ಪೆಗಳನ್ನು ತೇವವಾಗಿರಿಸುತ್ತದೆ. ಆದ್ದರಿಂದ ಅವು ಬೇಗನೆ ಒಣಗುವುದಿಲ್ಲ. ಇದು ಅವುಗಳ ರಸವನ್ನು ಉಳಿಸಿಕೊಳ್ಳಲು ಮತ್ತು ವಾರಗಳ ನಂತರವೂ ತಾಜಾತನದಿಂದ ಇರಲು ಸಹಾಯ ಮಾಡುತ್ತದೆ. ಈ ವಿಧಾನವು ಬೇಸಿಗೆಯಲ್ಲಿ ವಿಶೇಷವಾಗಿ ಉಪಯುಕ್ತವಾಗಿದೆ. ಏಕೆಂದರೆ ನಿಂಬೆ ರಸವು ಶಾಖದಲ್ಲಿ ಬೇಗನೆ ಒಣಗುತ್ತದೆ ಮತ್ತು ಸಿಪ್ಪೆಗಳು ಸುಕ್ಕುಗಟ್ಟುತ್ತವೆ. ಪ್ರತಿ 3-4 ದಿನಗಳಿಗೊಮ್ಮೆ ಪಾತ್ರೆಯಲ್ಲಿ ನೀರನ್ನು ಬದಲಾಯಿಸುವುದರಿಂದ ನಿಂಬೆಹಣ್ಣುಗಳು ಹೆಚ್ಚು ಕಾಲ ತಾಜಾವಾಗಿರುತ್ತವೆ.
ನಿಂಬೆಹಣ್ಣುಗಳನ್ನು ಬಟ್ಟೆ ಅಥವಾ ವೃತ್ತಪತ್ರಿಕೆಯಲ್ಲಿ ಸುತ್ತುವುದರಿಂದ ಅವುಗಳ ಸಿಪ್ಪೆ ಒಣಗುವುದನ್ನು ತಡೆಯುತ್ತದೆ ಮತ್ತು ಒಳಗಿನ ರಸವು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ಇದರಿಂದ ನಿಂಬೆಹಣ್ಣಿನ ಸುವಾಸನೆ, ರುಚಿ ಹದಗೆಡುವುದಿಲ್ಲ. ನಿಂಬೆಹಣ್ಣುಗಳನ್ನು ಪರಸ್ಪರ ಹತ್ತಿರವಾಗಿಟ್ಟರೆ ಅದು ಹಾಳಾಗುತ್ತದೆ. ಹಾಗಾಗಿ ನಿಂಬೆಹಣ್ಣನ್ನು ಬೇಗನೆ ಒಣಗಲು ಬಿಡುವುದಿಲ್ಲ.
ಕೆಲವೊಮ್ಮ ನಿಂಬೆ ಹಣ್ಣುಗಳನ್ನು ಕತ್ತರಿಸಿ ಇಟ್ಟಿರುತ್ತಾರೆ. ಆದರೆ ಅದು ಹೆಚ್ಚು ದಿನಗಳ ಕಾಲ ತಜಾವಾಗಿಡಲು ಸಾದ್ಯವಾಗಿರುವುದಿಲ್ಲ. ಹಾಗಾಗಿ ಸ್ವಲ್ಪ ಉಪ್ಪು ಸೇರಿಸಿ ಗಾಳಿಯಾಡದ ಪ್ರದೇಶದಲ್ಲಿ ಅದನ್ನು ಇಡಿ ಇದರಿಂದ ನಿಂಬೆ ಹಣ್ಣಿನ ತಾಜಾತನ ಹಾಗೇ ಇರುತ್ತದೆ.
ಕತ್ತರಿಸಿ ಉಳಿದಂತಹ ನಿಂಬೆಹಣ್ಣುಗಳನ್ನು ಸ್ವಲ್ಪ ಉಪ್ಪು ಸೇರಿಸಿ ಬಾಟಲಿಯಲ್ಲಿ ಸಂಗ್ರಹಿಸಿ. ಇದರಿಂದ ನಿಂಬೆ ರಸ ಸೋರುವುದು ಕಡಿಮೆಯಾಗುತ್ತದೆ ಹಾಗೆಯೇ ಸಿಪ್ಪೆ ಒಣಗುವುದನ್ನು ತಡೆಯುತ್ತದೆ.
(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ