ದೈನಂದಿನ ಬಳಕೆಯ ವಾಕ್ಯಗಳು

Halli Mestru
Published on

ಶಿಕ್ಷಕಿ ಹೊಸ ಸೀರೆ ಉಟ್ಟುಕೊಂಡಿರುವುದನ್ನು ಮಗು ಖುಷಿಯಿಂದ ಬಾಯಗಲಿಸಿ ನೋಡಿತು.

The child beamed at her teacher wearing a new saree.

ನಿಮ್ಮ ಸಲಹೆಗೆ ಧನ್ಯವಾದಗಳು. ನಾನು ಅದನ್ನು ಖಂಡಿತ ಗಮನದಲ್ಲಿಟ್ಟುಕೊಂಡಿರುತ್ತೇನೆ.

Thanks for your advice. I’ll bear it in my mind.

ದಪ್ಪದ ಹೆಂಗಸೊಬ್ಬಳು ತೂಕ ನೋಡುವ ಯಂತ್ರ ಹತ್ತಿದಾಗ ಭಾರ ತಡೆಯಲಾರದೆ ಅದು ಕುಂಯ್ಗುಟ್ಟಿತು.

When a beefy lady stepped on the weighing scale it shrieked being unable to bear her weight.

ಈ ಚಿಕ್ಕು ಮರ ಇಲ್ಲಿಯ ತನಕ ಒಂದೇ ಒಂದು ಹಣ್ಣು ಕೊಟ್ಟಿಲ್ಲ.

This chikku tree has never borne a fruit till date.

ನನ್ನ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿದ್ದೇನೆಂದು ನನ್ನ ಪತ್ನಿ ಹೇಳಿದಾಗ ನನ್ನ ಖುಷಿಗೆ ಪಾರವೇ ಇರಲಿಲ್ಲ.

When my wife told me that she bore me a baby, my joy had no bounds.

ನನ್ನ ಪತ್ನಿ ಗರ್ಭಿಣಿಯಾಗಿರುವುದರಿಂದ ಅವಳ ಬಗ್ಗೆ ದುಪ್ಪಟ್ಟು ನಿಗಾ / ಜಾಗ್ರತೆ ವಹಿಸಬೇಕಿದೆ.

My wife is bearing / carrying and I’ve to take double care of her.

ನಮ್ಮ ನಾಯಿ ಈ ಬಾರಿ 5 ಮರಿಗಳ ಗುಂಪಿಗೆ ಜನ್ಮ ನೀಡಿದೆ.

Our dog has borne a litter of 5 puppies this time.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net