

ನೀನು ನಾಚಿಕೆಪಡುವಂತಹದ್ದೇನೂ ಇಲ್ಲ.
There is nothing for you to be ashamed of.
ನೀನೇಕೆ ಮ್ಲಾನವದನಳಾಗಿದ್ದೀ? ನಾಚಿಕೆಪಡುವಂತಹದ್ದು ನೀನೇನೂ ಮಾಡಿಲ್ಲವಲ್ಲಾ?
Why are you ashen-faced? You have done nothing to be ashamed of.
ದಯವಿಟ್ಟು ಪಕ್ಕಕ್ಕೆ ಸರಿಯಿರಿ. ಸ್ವಾಮೀಜಿ ಬರುತ್ತಿದ್ದಾರೆ.
ಅವರು ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ನನ್ನ ಕೈಯಲ್ಲಿ ಸಾವಿರದ ನೋಟನ್ನಿಟ್ಟರು.
He took me aside and put a currency of Rs.1000 in my hand.
ನನ್ನ ವಿಮಾ ಪಾಲಿಸಿಯ ಕಂತು ಕಟ್ಟಲು ಪ್ರತಿದಿನ ನೂರು ರೂಪಾಯಿ ತೆಗೆದಿಡಬೇಕು.
I think I should put aside Rs.100 every day for the insurance premium.
ಅವರು ನಾಳೆ ಬೆಳಗ್ಗೆ ಉಪಾಹಾರಕ್ಕೆ ಅವರ ಮನೆಗೆ ಬರಲು ನನ್ನನ್ನು ಕರೆದಿದ್ದಾರೆ.
He has asked me to come for breakfast tomorrow.
ಎರಡು ಶಯನಗೃಹವಿರುವ ಮನೆ ಬಾಡಿಗೆಗೆ ಬೇಕೆಂದು ನಾವು ಎಲ್ಲಾ ಕಡೆ ವಿಚಾರಿಸುತ್ತಿದ್ದೇವೆ.
I’ve been asking around for a double bed house for rent.
ರವಿವಾರ ಗಾಂಧಿ ರ್ಪಾಗೆ ಬರುವಂತೆ ಅವಳನ್ನು ಕರೆಯಬೇಕೆಂದು ನಾನು ಯೋಚಿಸುತ್ತಿದ್ದೇನೆ.
I am thinking of asking her out to Gandhi park on Sunday.