ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

English vvani
Published on

ದೈನಂದಿನ ಬಳಕೆಯ ವಾಕ್ಯಗಳು

ನಮ್ಮ ಮನೆ ಒಕ್ಕಲಿನ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಆಗಿದೆ ಆದರೆ ಅಷ್ಟರೊಳಗೆ ಮನೆಯ ನಿರ್ಮಾಣ ಸಂಪೂರ್ಣವಾದೀತೇ ಎಂದು ಸ್ವಲ್ಪ ಚಿಂತಿತನಾಗಿದ್ದೇನೆ.

I’ve got the invitation cards for the house warming ceremony but am little apprehensive about its completion before that.

ನಾನು ನನ್ನ ಊಟ ಹೋಟೆಲಿನಲ್ಲೇ ಮುಗಿಸಿರುತ್ತೇನೆಂದು ದಯವಿಟ್ಟು ಅವರಿಗೆ ಮುಂಚಿತವಾಗಿ ತಿಳಿಸುತ್ತೀರಾ?

Will you please apprise her that I will have finished my lunch at hotel?

ಯಾವುದಾದರೂ ತುರ್ತಿಗೆ ಬೇಕಾಗಬಹುದೆಂದು ಮನೆಯಲ್ಲಿ ಸ್ವಲ್ಪ ಹಣವನ್ನು ತೆಗೆದಿಡುವುದಿಲ್ಲವೆ?

Don’t you appropriate some money at home for exigencies?

ನನ್ನ ತಾಯಿಗೆ ನನ್ನ ಗೆಳೆಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ.

My mother doesn’t approve of my friends.

ಅವರು ಸಭಾಂಗಣವನ್ನು ಪ್ರವೇಶಿಸಿದೊಡನೆ ಎಲ್ಲರೂ ಸ್ವಾಗತಿಸುವಂತೆ / ಪರಿಚಯದ ಮುಗುಳ್ನಗು ಬೀರಿದರು.

When he entered the hall, everybody gave him an approving smile.

ಬೆಕ್ಕು ತನ್ನ ಬೆನ್ನನ್ನು ಕಮಾನಿನಂತೆ ಬಾಗಿಸಿ, ನಂತರ ಮುಂದಿನ ಕಾಲುಗಳನ್ನು ನೇರವಾಗಿಸಿತು.

The cat arched its back and then stretched its forelegs.

ನನ್ನ ಮಗಳು ನನ್ನನ್ನು ಅವಳ ಕೈಗಳಿಂದ ಸುತ್ತಿ ಗಟ್ಟಿಯಾಗಿ ಅಪ್ಪಿಕೊಂಡಳು.

My daughter put her hands around and cuddled me.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net