

ಯುವಕರಾಗುವವರೆಗೆ ನಮ್ಮೊಳಗಿದ್ದ ಅತ್ಯಂತ ಸ್ನೇಹಮಯ ಸಂಬಂಧ ಈಗಿಲ್ಲ.
The perfect amity which was there among us until our youth is not there now.
ರಥೋತ್ಸವದಂದು ಮಠದ ಸಾಕಿದ ಆನೆ ಒಮ್ಮಿಂದೊಮ್ಮೆಗೆ ಮದವೇರಿ ರೋಷಗೊಂಡು ಇಬ್ಬರನ್ನು ಕೊಂದಿತು.
The reared elephant of the mutt ran amok during car festival and killed two men.
As it was difficult for me to pay the debt in a lump sum, I amortized in over a year.
ಅವನೇನೂ ದೇವರಲ್ಲ ಆದುದರಿಂದ ಆಗಿದ್ದೆಲ್ಲಕ್ಕೂ ಅವನೊಬ್ಬನನ್ನೇ ದೂಷಿಸಲಾಗುವುದಿಲ್ಲ.
He is no angel and so he only can’t be blamed for whatever has happened.
ನೀನು ನನ್ನ ಮೇಲೆ ಕೆಂಡ ಕಾರುವುದು ಬೇಡ. / ನಿನ್ನ ಸಿಟ್ಟನ್ನೆಲ್ಲ ನನ್ನೊಬ್ಬನ ಮೇಲೆ ತೋರಿಸಬೇಕಾಗಿಲ್ಲ.
You need not vent all your anger on me.
ಅಶಿಸ್ತಿನ ಜನರನ್ನು ನೋಡಿದೊಡನೆ ನನಗೆ ರಕ್ತ ಕುದಿಯಲಾರಂಭಿಸುತ್ತದೆ / ಸಿಟ್ಟು ಬರುತ್ತದೆ.
It always angers me to see the indisciplined people.
ನಿಮ್ಮ ನೋವು ನನಗರ್ಥವಾಗುತ್ತದೆ. ಆ ರೀತಿ ನಡೆದುಕೊಂಡರೆ ಯಾರಿಗಾದರೂ ರೋಷ ಉಕ್ಕುವುದೇ.
I can understand your annoyance. Anybody would be furious if they were treated like that.