Laughing Benefits : ನಗು...ನಗುತ್ತಾ ಆರೋಗ್ಯ ಹೆಚ್ಚಿಸಿ..ಸರ್ವ ರೋಗಕ್ಕೂ ನಗುವೇ ಮದ್ದು

Laughing
Published on

Laughing Benefits: ಮನಸ್ಸು ಬಿಚ್ಚಿ ನಗುತ್ತೀರಿ... ನಗುವುದರಿಂದ ಆಗುವ ಲಾಭ ಅಷ್ಟಿಷ್ಟಲ್ಲ. ಸದ್ಯ ನಗದಿದ್ದರೆ ಖಾಯಿಲೆ ಎನ್ನುತ್ತಾರೆ ಆರೋಗ್ಯ ತಜ್ಞರು. ಪ್ರತಿದಿನ ಕನಿಷ್ಠ ಹತ್ತು ನಿಮಿಷ ನಗುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ನಗು ಅನೇಕ ದೀರ್ಘಕಾಲದ ಸಮಸ್ಯೆಗಳನ್ನು ತಡೆಯುತ್ತದೆ. ಈ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿ ಕೊಡಲಿದ್ದೇವೆ...

ನಗುವುದು ಸಂತೋಷದ ಸಂಕೇತ. ಕೋಪ ಮತ್ತು ಹತಾಶೆಯನ್ನು ಕಡಿಮೆ ಮಾಡಲು ನಗು ಸಹಾಯ ಮಾಡುತ್ತದೆ. ಖಿನ್ನತೆ ದೂರವಾಗುತ್ತದೆ.

ಧೀರ್ಘಕಾಲದ ಕಾಯಿಲೆಗಳಾದ ಬಿಪಿ, ಶುಗರ್ ಗಳನ್ನೂ ಮನಸಾರೆ ನಗುವುದರಿಂದ ನಿಯಂತ್ರಣದಲ್ಲಿಡಬಹುದು. ರಕ್ತ ಸಂಚಾರ ಸುಗಮವಾಗಿರುತ್ತದೆ.

ನಗುವುದರಿಂದ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಜೀವಕೋಶಗಳು ಮತ್ತು ಸೋಂಕಿನ ವಿರುದ್ಧ ಹೋರಾಡುವ ಹಾರ್ಮೋನುಗಳ ಪ್ರಮಾಣವನ್ನು ಹೆಚ್ಚಿಸುತ್ತದೆ.

ನಗು ಹೃದಯವನ್ನು ಉತ್ತಮವಾಗಿ ಬಡಿಯುವಂತೆ ಮಾಡುತ್ತದೆ. ಇದರಿಂದ ಕರ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಕೂಡ ನಿಯಂತ್ರಿಸುತ್ತದೆ.

ದಿನಕ್ಕೆ ಕನಿಷ್ಠ ಹತ್ತು ನಿಮಿಷ ನಗುವುದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ನಿಮ್ಮ ನೆರೆಹೊರೆಯವರೊಂದಿಗೆ ನೀವು ಆಗಾಗ್ಗೆ ಮಾತನಾಡುತ್ತಿದ್ದರೆ ಮತ್ತು ನಗುತ್ತಿದ್ದರೆ, ಸಾಮಾಜಿಕ ಸಂಬಂಧಗಳು ಸಹ ಸುಧಾರಿಸುತ್ತವೆ.

ನಗು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಮನಸ್ಸು ಮತ್ತು ದೇಹವು ಉಲ್ಲಾಸಕರ ಮನಸ್ಥಿತಿಯಲ್ಲಿ ಇರುತ್ತದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net