ಚಳಿಗಾಲ ಮೂತ್ರಪಿಂಡಗಳ ಪಾಲಿಗೆ ಡೇಂಜರ್...! ಸಮಸ್ಯೆಗಳಿಂದ ದೂರವಿರಲು ಈ ಮಾರ್ಗಗಳನ್ನು ಅನುಸರಿಸಿ Kidney stones

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮೂತ್ರಪಿಂಡದ ಕಲ್ಲುಗಳು ಬಹಳ ಸಾಮಾನ್ಯವಾದ ಕಾಯಿಲೆಯಾಗಿದೆ
  • ಖನಿಜ ಮತ್ತು ಲವಣಗಳು ಸೇರಿ ಹರಳುಗಳನ್ನು ರೂಪಿಸಿದಾಗ ಮೂತ್ರಪಿಂಡದಲ್ಲಿ ಕಲ್ಲುಗಳು ರಚನೆಯಾಗುತ್ತದೆ
  • ಜನರು ಬೇಸಿಗೆಯಲ್ಲಿ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ ಎಂದು ಪರಿಗಣಿಸುತ್ತಾರೆ
  • ನೀರಿನ ಸೇವನೆ ಕಡಿಮೆಯಾಗುವುದರಿಂದ ನಿರ್ಜಲೀಕರಣ ಹೆಚ್ಚಾಗುತ್ತದೆ
Kidney stones: ಮೂತ್ರಪಿಂಡದ ಕಲ್ಲುಗಳು ಬಹಳ ಸಾಮಾನ್ಯವಾದ ಕಾಯಿಲೆಯಾಗಿದೆ. ಇದಕ್ಕೆ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ, ಅವು ತುಂಬಾ ನೋವನ್ನು ಅನುಭವಿಸಬೇಕಾಗುತ್ತದೆ. ಖನಿಜಗಳು ಮತ್ತು ಲವಣಗಳು ಸೇರಿಕೊಂಡು ಹರಳುಗಳನ್ನು ರೂಪಿಸಿದಾಗ ಮೂತ್ರಪಿಂಡದಲ್ಲಿ ಕಲ್ಲುಗಳು ರಚನೆಯಾಗುತ್ತದೆ. ಇದು ತೀವ್ರ ನೋವು, ಮೂತ್ರದಲ್ಲಿ ರಕ್ತ, ಸೋಂಕು ಮತ್ತು ವಾಂತಿಗೆ ಕಾರಣವಾಗುತ್ತದೆ.
ಚಳಿಗಾಲದಲ್ಲೇ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ಅದರ ಹಿಂದಿನ ಕಾರಣಗಳು ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ ತಿಳಿಯಿರಿ...

ಚಳಿಗಾಲದಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳು ಏಕೆ ಹೆಚ್ಚಾಗುತ್ತವೆ?

ಹಲವಾರು ಜನರು ಬೇಸಿಗೆಯಲ್ಲಿ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಾಗುತ್ತದೆ ಎಂದು ಪರಿಗಣಿಸುತ್ತಾರೆ. ಏಕೆಂದರೆ, ಅತಿಯಾದ ಬೆವರು ಮತ್ತು ನಿರ್ಜಲೀಕರಣವು ಕಲ್ಲುಗಳ ರಚನೆಗೆ ಕಾರಣವಾಗಬಹುದು. ಆದರೆ, ಚಳಿಗಾಲದ ತಿಂಗಳುಗಳಲ್ಲಿ ಈ ಅಪಾಯವು ಹೆಚ್ಚಾಗುತ್ತದೆ. ಏಕೆಂದರೆ, ಚಳಿಗಾಲದಲ್ಲಿ ಜೀವನಶೈಲಿ ಮತ್ತು ದೈಹಿಕ ಬದಲಾವಣೆಗಳು ಈ ರೀತಿಯ ಸಮಸ್ಯೆಯನ್ನು ತರುತ್ತದೆ.

1. ನಿರ್ಜಲೀಕರಣದ ಸಮಸ್ಯೆ

ಚಳಿಗಾಲದ ತಿಂಗಳುಗಳಲ್ಲಿ ಬಾಯಾರಿಕೆ ಕಡಿಮೆಯಾಗಿ ನೀರಿನ ಸೇವನೆ ಕಡಿಮೆಯಾಗುವುದರಿಂದ ನಿರ್ಜಲೀಕರಣ ಹೆಚ್ಚಾಗುತ್ತದೆ. ಇದು ದೇಹವು ತನ್ನ ಜಲಸಂಚಯನ ಅಗತ್ಯಗಳನ್ನು ಪೂರೈಸುವುದನ್ನು ತಡೆದು ಮೂತ್ರವನ್ನು ಕೇಂದ್ರೀಕರಿಸಲು ಕಾರಣವಾಗುತ್ತದೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಅಪಾಯ ಹೆಚ್ಚಾಗುತ್ತದೆ.

2. ದೈಹಿಕ ಚಟುವಟಿಕೆ ಕಡಿಮೆಯಾಗಿದೆ

ಚಳಿಗಾಲದಲ್ಲಿ, ಜನರು ಸೋಮಾರಿತನ, ಕಡಿಮೆ ವ್ಯಾಯಾಮ, ಕಡಿಮೆ ನಡೆಯುವುದು, ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದನ್ನು ಮಾಡುತ್ತಾರೆ. ಇದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣದ ಮೇಲೆ ಕೊರತೆ ಉಂಟಾಗುತ್ತದೆ. ಇದು ಮೂತ್ರಪಿಂಡಗಳಲ್ಲಿ ಕಲ್ಲು ಸಂಗ್ರಹವಾಗುವಂತೆ ಮಾಡುತ್ತದೆ.

3. ಅತಿಯಾದ ಕೊಬ್ಬಿನ ಆಹಾರ ಸೇವನೆ

ಚಳಿಗಾಲದಲ್ಲಿ ಅತಿ ಹೆಚ್ಚು ಜನರು ಬಿಸಿ ಇರುವಂತಹ ಆಹಾರಗಳ ಬೇಡಿಕೆ ಹೆಚ್ಚಾಗಿ ಇಡುತ್ತಾರೆ. ಅತಿ ಹೆಚ್ಚು ಮಸಾಲ ಪದಾರ್ಥಗಳನ್ನು ಸೇವಿಸುವುದು ನಿಮ್ಮ ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ. ಹಾಗಾಗಿ ಮೂತ್ರಪಿಂಡಗಳನ್ನು ಆರೋಗ್ಯವಾಗಿಟ್ಟುಕೊಳ್ಳಲು ಪ್ರತಿದಿನ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಬೇಕು. ಕೊಬ್ಬು, ಎಣ್ಣೆ, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುವ ಆಹಾರವನ್ನು ತಪ್ಪಿಸಿ.

ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟುವ ಮಾರ್ಗಗಳು

1. ಚಳಿಗಾಲವಾಗಲಿ ಅಥವಾ ಬೇಸಿಗೆಯಾಗಲಿ ನಿರ್ಜಲೀಕರಣವನ್ನು ತಪ್ಪಿಸಿಕೊಳ್ಳಿ. ದಿನವಿಡೀ ಸಾಕಷ್ಟು ನೀರು ಕುಡಿಯುವುದರಿಂದ ಮೂತ್ರ ಸರಿಯಾದ ಪ್ರಮಾಣದಲ್ಲಿ ಹೋಗುತ್ತದೆ. ಹಾಗಾಗಿ ಪ್ರತಿದಿನ ಕನಿಷ್ಟ 3-4 ಲೀಟರ್​ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
2. ಈಗಾಗಲೇ ಮೂತ್ರಪಿಂಡದ ಸಮಸ್ಯೆ ಅನುಭವಿಸುತ್ತಿದ್ದರೆ, ಅವರು ಬೀಜಗಳು, ಕಡಲೆಕಾಯಿಗಳು, ಪಾಲಕ್, ಕೆಂಪು ಮಾಂಸ, ಕೋಳಿ, ಚೀಸ್ ಮತ್ತು ಡೈರಿ ಉತ್ಪನ್ನಗಳಂತಹ ಕೆಲವು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇವುಗಳಲ್ಲಿ ಆಕ್ಸಲೇಟ್ ಮತ್ತು ಪ್ರೋಟೀನ್ ಅಧಿಕವಾಗಿದ್ದು, ಇದು ಕಲ್ಲುಗಳ ರಚನೆಗೆ ಕಾರಣವಾಗುತ್ತದೆ.
3. ವ್ಯಾಯಾಮವು ದೇಹವನ್ನು ಸದೃಢವಾಗಿಡುವುದಲ್ಲದೆ, ಮೂತ್ರಪಿಂಡಗಳಿಂದ ಆರೋಗ್ಯಕರ ಮೂತ್ರದ ಹರಿವನ್ನು ಕಾಪಾಡುತ್ತದೆ. ಇದರಿಂದಾಗಿ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
4. ಕ್ಯಾಲ್ಸಿಯಂ ಮೂಳೆಗಳು ಮತ್ತು ಇತರ ಅಂಗಗಳಿಗೆ ಅಗತ್ಯವಾಗಿದೆ. ಆದರೆ ಅದರ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಇದು ಮೂತ್ರಪಿಂಡದಲ್ಲಿ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ವೈದ್ಯರನ್ನು ಸಂಪರ್ಕಿಸದೇ ಈ ಆಹಾರಗಳನ್ನು ಸೇವಿಸಬೇಡಿ.
5. ಮೂತ್ರಪಿಂಡದ ಕಲ್ಲುಗಳಿಗೆ ಬೊಜ್ಜು ಪ್ರಮುಖ ಅಪಾಯಕಾರಿ ಅಂಶವಾಗಿದೆ. ಆದರಿಂದ ಆದಷ್ಟು ತೂಕವನ್ನು ಇಳಿಸಿಕೊಳ್ಳಲು ಟ್ರೈ ಮಾಡಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net