

Kidney stones: ಇಂದಿನ ಒತ್ತಡದ ಜೀವನಶೈಲಿಯಲ್ಲಿ ಅನೇಕ ಜನರು ಒಂದಲ್ಲ ಒಂದು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಧಿಕವಾಗಿ, ಮಧುಮೇಹ, ರಕ್ತದೊತ್ತಡ, ಜೀರ್ಣಕ್ರಿಯೆ, ಮಾನಸಿಕ ಒತ್ತಡ, ಆಯಾಸದಂತಹ ಇನ್ನಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಎಲ್ಲಾ ಕಾಯಿಲೆಗಳಲ್ಲಿ ಒಂದು ಮೂತ್ರಪಿಂಡದ ಕಾಯಿಲೆ. ಇದು ಚಿಕ್ಕದಾಗಿದ್ದರೂ, ಇದರ ನೋವು ಅಸಹನೀಯವಾಗಿದೆ. ಇದರಿಂದ ಹಠಾತ್ ಹೊಟ್ಟೆ ನೋವು, ಉಸಿರಾಟದ ತೊಂದರೆ, ಮತ್ತು ದೇಹದಲ್ಲಿ ಆಯಾಸವಾಗಲು ಪ್ರಾರಂಭಿಸುತ್ತದೆ.
ಕೆಲವು ನೈಸರ್ಗಿಕ ವಿಧಾನಗಳಿಂದ ಮೂತ್ರಪಿಂಡದ ಕಲ್ಲುಗಳನ್ನು ಮನೆಯಲ್ಲಿಯೇ ತೆಗೆದುಹಾಕಬಹುದು.ನಿಮ್ಮ ಮನೆಯಲ್ಲಿಯೇ ಈ ರೀತಿಯ ಪಾನೀಯಗಳನ್ನು ಕುಡಿಯುವುದರಿಂದ ನೀವು ಮೂತ್ರಪಿಂಡದ ಕಲ್ಲುಗಳನ್ನು ಶಮನಗೊಳಿಸಬಹುದು...
ಕಲ್ಲುಗಳನ್ನು ಕರಗಿಸುವಲ್ಲಿ ನೀರಿನಾಂಶ ಬಹಳ ಮುಖ್ಯವಾಗಿರುತ್ತದೆ. ಯಾವ ವ್ಯಕ್ತಿ ಕಿಡ್ನಿ ಸ್ಟೋನ್ ಕಾಯಿಲೆಯಿಂದ ಬಳಲುತ್ತಿರುತ್ತಾರೋ ಅವರು ದಿನಕ್ಕೆ 4 ರಿಂದ 5 ಲೀಟರ್ ನೀರನ್ನು ಕುಡಿಯಿರಿ. ಇದು ಮೂತ್ರಪಿಂಡದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಿ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಹೇರಳವಾಗಿರುವುದರಿಂದ ಮೂತ್ರಪಿಂಡಗಳಲ್ಲಿ ಖನಿಜಗಳು ಮತ್ತು ಲವಣಗಳು ಸಂಗ್ರಹವಾಗುವುದನ್ನು ತಡೆಯುತ್ತದೆ. ಆದರಿಂದ ಪ್ರತಿನಿತ್ಯ ಊಟಕ್ಕೆ ಮುನ್ನ ನಿಂಬೆ ರಸವನ್ನು ನೀರಿನೊಂದಿಗೆ ಬೆರಸಿ ಕುಡಿಯುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ತಡೆಯಬಹುದು.
ತುಳಸಿ ರಸದಲ್ಲಿ ಯೂರಿಕ್ ಆಮ್ಮ ಹೆಚ್ಚಾಗಿದ್ದು, ಇದು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ಯಾರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೋ ಅವರು ಪ್ರತಿದಿನ ಬೆಳಿಗ್ಗೆ ಒಂದು ಸಣ್ಣ ಚಮಚ ತುಳಸಿಯನ್ನು ರುಬ್ಬಿ ಅದರ ರಸವನ್ನು ಕುಡಿಯಿರಿ. ಇದು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ದಾಳಿಂಬೆಯಲ್ಲಿ ಉತ್ಕರ್ಷಣ ನಿರೋಧಕಗಳಿದ್ದು, ಇವು ಮೂತ್ರದಲ್ಲಿನ ಹರಳುಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಹೊಸ ಕಲ್ಲುಗಳಾಗುವುದನ್ನು ತಡೆಯುತ್ತದೆ. ಈ ಸಮಸ್ಯೆ ಇರುವಂತವರು ಪ್ರತಿದಿನ ದಾಳಿಂಬೆ ರಸವನ್ನು ಕುಡಿಯುವುದರಿಂದ ಕಿಡ್ನಿ ಸ್ಟೋನ್ನ್ನು ಕಡಿಮೆ ಮಾಡಿಕೊಳ್ಳಬಹುದು.
ತೆಂಗಿನ ನೀರು ನೈಸರ್ಗಿಕ ಮೂತ್ರವರ್ಧಕವಾಗಿದೆ. ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ಇದು ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಹಾಗೇ ದೇಹದಿಂದ ವಿಷವನ್ನು ತೆಗೆದು ಮೂತ್ರದಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ. (ಏಜೆನ್ಸೀಸ್)