

ಬೆಳ್ಳುಳ್ಳಿಯನ್ನು ಮಿತವಾಗಿ ಸೇವಿಸಬೇಕು ಹಾಗೂ ವೈದ್ಯರ ಸಲಹೆ ಇಲ್ಲದೆ ದಿನಕ್ಕೆ 3-4 ಎಸಳನ್ನು ತಿನ್ನಬಾರದು. ಯಾವುದೇ ಔಷಧಿಗೆ ಪರ್ಯಾಯವಾಗಿಯೂ ಬಳಸಬಾರದು. ಇದು ಔಷಧದ ಪರಿಣಾಮ ಮತ್ತು ದೇಹದ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುವುದು. ಅತಿಯಾದರೆ ಬೇರೆ ಆರೋಗ್ಯಸಂಬಂಧಿ ಸಮಸ್ಯೆಗಳು ಬರಬಹುದು. ಈಗ ಇದರ ಪ್ರಯೋಜನಕಾರಿ ಗುಣಗಳ ಬಗ್ಗೆ ಅರಿಯೋಣ.
# ಜಜ್ಜಿದ ಬೆಳ್ಳುಳ್ಳಿಯ ರಸವನ್ನು ದಿನಕ್ಕೆರಡು ಸಲ ಹುಳಕಡ್ಡಿ ಮತ್ತು ಬೆರಳಸಂದುಗಳಲ್ಲಿ ಸೋಂಕು ಉಂಟಾದ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಬೇಕು. ಒಂದು ಗಂಟೆ ನಂತರ ಸೋಪು ಹಚ್ಚದೆ ತಣ್ಣೀರಿನಿಂದ ತೊಳೆಯಬೇಕು.
# ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಅರೆದು ಪೇಸ್ಟ್ನಂತೆ ನೇರವಾಗಿ ಹಚ್ಚಿ ಬ್ರಷ್ನಿಂದ ಹಲ್ಲುಜ್ಜಬೇಕು. ಇದರಿಂದ ಹಲ್ಲುನೋವು ಬೇಗ ಉಪಶಮನವಾಗುತ್ತದೆ.
# ಬೆಳ್ಳುಳ್ಳಿಯನ್ನು ಬೇಯಿಸಿದ ನೀರಿನಿಂದ ಗಾಯವನ್ನು ತೊಳೆದುಕೊಂಡರೆ ಗಾಯ ಬೇಗನೆ ವಾಸಿಯಾಗುತ್ತದೆ. ಬೆಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ತೇಯ್ದು ಹಚ್ಚುವುದರಿಂದಲೂ ಗಾಯ ವಾಸಿಯಾಗುತ್ತದೆ.
# ಪ್ರತಿದಿನ ಎರಡು ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ. ಅದರ ಜತೆಗೆ ಪಚನಕ್ರಿಯೆ ಮತ್ತು ಹಸಿವು ಕೂಡ ಹೆಚ್ಚುತ್ತದೆ.
# ಬಾಯಿಯಲ್ಲಿ ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳುವುದರಿಂದ ಉಸಿರಾಟದ ತೊಂದರೆಯಿಂದ ದೂರವಿರಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇದಕ್ಕಿದೆ.
# ಪ್ರತಿದಿನ ಒಂದು ಬೆಳ್ಳುಳ್ಳಿ ಎಸಳನ್ನು ಜಗಿದು ತಿಂದರೆ ಕೆಟ್ಟ ಕೊಲೆಸ್ಟರಾಲ್ ಪ್ರಮಾಣ ಕಡಿಮೆಯಾಗುತ್ತದೆ.
# ಬೆಳ್ಳುಳ್ಳಿಯನ್ನು ಬೇಯಿಸುವುದಕ್ಕಿಂತ ಹಸಿಯಾಗಿ ತಿಂದರೆ ಹೆಚ್ಚು ಪರಿಣಾಮಕಾರಿ.
# ಬೆಳ್ಳುಳ್ಳಿ ಸೇವನೆಯಿಂದ ರಕ್ತಶುದ್ಧಿಯಾಗುವುದರ ಜತೆಗೆ ಜಠರಕ್ಕೆ ಯಾವುದೇ ಸೋಂಕು ತಗಲುವುದಿಲ್ಲ.
# ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅದರಲ್ಲಿರುವ ಅಲಿಸಿನ್ ಎನ್ನುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ತಗ್ಗಿಸುತ್ತದೆ.
# ಮಿದುಳಿನ ರಾಸಾಯನಿಕದ ಅಸಮತೋಲನದಿಂದ ಉಂಟಾಗುವ ಖಿನ್ನತೆಯ ವಿರುದ್ಧ ಹೋರಾಡಲು ಹಸಿ ಬೆಳ್ಳುಳ್ಳಿ ಸೇವನೆ ನೆರವಾಗುತ್ತದೆ.