ಕ್ಯಾನ್ಸರ್​ ಗೆಲ್ಲೋಣ: ದುಶ್ಚಟಗಳಿಂದ ದೂರ ಇರುವುದರ ಜತೆ ಸುತ್ತಮುತ್ತಲ ಪರಿಸರ ಚೆನ್ನಾಗಿಟ್ಟುಕೊಳ್ಳಿ

4 Feb 20
Published on
ಕ್ಯಾನ್ಸರ್​ ಬಂದ ಮೇಲೆ ಒದ್ದಾಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಿಸಿಕೊಂಡರೆ ಕ್ಯಾನ್ಸರ್​ ಗೆಲ್ಲಬಹುದು ಎಂಬುದು ಹಲವು ವೈದ್ಯರ ಸಲಹೆ. ಇಂದು ಕ್ಯಾನ್ಸರ್​ ಜಾಗೃತಿ ದಿನದ ಸಂದರ್ಭದಲ್ಲಿ ಎಚ್​ಸಿಜಿ ಆಸ್ಪತ್ರೆಯ ಕ್ಯಾನ್ಸರ್​ ರೋಗ ತಜ್ಞ ಡಾ. ವಿಶಾಲ್​ ರಾವ್​ ಹೇಳಿದ್ದು ಹೀಗೆ...

ತಂಬಾಕು, ಮದ್ಯಸೇವನೆಯಂಥ ದುಶ್ಚಟ ಶೇ.50 ಕ್ಯಾನ್ಸರ್​ಗೆ ಕಾರಣವಾದರೆ, ಉಳಿದಂತೆ ರಾಸಾಯನಿಕ ಬಳಸಿ ಬೆಳೆಯುತ್ತಿರುವ ಆಹಾರ ಪದಾರ್ಥ ಹಾಗೂ ಸಿದ್ಧ ಆಹಾರ ಕೆಡದಿರಲು ಬಳಸುತ್ತಿರುವ ಪ್ರಿಸರ್ವೆಟಿವ್​ಗಳು, ಬಣ್ಣ ಮತ್ತು ರುಚಿಗೆ ಬಳಕೆ ಮಾಡುತ್ತಿರುವ ಸಾಮಗ್ರಿಗಳು ಮತ್ತೊಂದು ಕಾರಣ.

ಪರಿಸರ ಮಾಲಿನ್ಯವೂ ರೋಗಕ್ಕೆ ಕಾರಣವಾಗಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಆಲ್ಟ್ರಾ ವೈಲೆಟ್ಸ್ ಇಂಡೆಕ್ಸ್ ಕುಸಿತದಿಂದ ಸೂರ್ಯನ ಕಿರಣಗಳೂ ಕ್ಯಾನ್ಸರ್ ತರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹೀಗಾಗಿ ದುಶ್ಚಟಗಳಿಂದ ದೂರ ಇರುವುದು, ರಾಸಾಯನಿಕ ಬಳಕೆ ಆಹಾರ ಪದಾರ್ಥಗಳ ಬಗ್ಗೆ ಎಚ್ಚರ ವಹಿಸುವುದು, ಸಂಗ್ರಹಿಸಿಟ್ಟ ಆಹಾರದ ಬದಲು ತಾಜಾ ಆಹಾರ ಸೇವಿಸುವುದು, ಸುತ್ತಮುತ್ತಲ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳುವ ಮೂಲಕ ಕ್ಯಾನ್ಸರ್ ಬಾರದಂತೆ ತಡೆಯಲು ಪ್ರಯತ್ನಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net